ತತ್ ತ್ವಮ್ ಅಸಿ : ಉದ್ಧಾಲಕ ಆರುಣಿ – ಶ್ವೇತಕೇತು ಸಂವಾದ

ಛಾಂದೋಗ್ಯ ಉಪನಿಷತ್ ನಲ್ಲಿ ಬರುವ ‘ಉದ್ದಾಲಕ – ಶ್ವೇತ ಕೇತು’ ನಡುವಿನ ಸಂವಾದ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಭೌತಿಕ ದೃಷ್ಟಿಗೆ ಗೋಚರಿಸದ ಆತ್ಮವು ಸರ್ವವ್ಯಾಪಿಯಾಗಿದೆ ಎಂದೂ. ಮತ್ತು ಆ ತ್ಮವು ನೀನೇ ಆಗಿರುವೆ (ತತ್ ತ್ವಮ್ ಅಸಿ) ಎಂದೂ ತಂದೆಯಾದ ಉದ್ಧಾಲಕ ಆರುಣಿ, ತನ್ನ ಮಗ ಶ್ವೇತಕೇತುವಿಗೆ ವಿವರಿಸುವ ಸಂಭಾಷಣೆ ಇಲ್ಲಿದೆ. ಉದ್ದಾಲಕ ಆರುಣಿ : ಶ್ವೇತಕೇತು! ಕಿವಿಯಿಂದ ಕೇಳಲಾಗದ್ದನ್ನು ಯಾವುದರ ಮೂಲಕ ಕೇಳಬಹುದೋ, ಕಣ್ಣಿಂದ ನೋಡಲಾಗದ್ದನ್ನು ಯಾವುದರ ಮೂಲಕ ನೋಡಬಹುದೋ, ಅರಿವಿಗೆ ನಿಲುಕದ್ದನ್ನು ಯಾವುದರ ಮೂಲಕ […]

ಅಥರ್ವಣ ವೇದದಲ್ಲಿ ವರುಣನ ವರ್ಣನೆ …

ಜಲಧಿದ್ವಯಗಳು ಅವನ ಒಡಲೊಳಗೆ ಅಡಗಿಹವು, ಆದರೂ ಅವನಿಹನು ಹನಿ ನೀರಿನೊಳಗೆ…! ಮೂಲ : ಅಥರ್ವಣ ವೇದ, 416 : 15 | ಕನ್ನಡಕ್ಕೆ : ಡಾ.ಎಚ್.ರಾಮಚಂದ್ರ ಸ್ವಾಮಿ ಇಬ್ಬರೊಟ್ಟಿಗೆ ಸೇರಿ ಬೇರಾರೂ ಇಲ್ಲೆಂದು ಷಡ್ಯಂತ್ರ ರೂಪಿಸಿರೆ ಅಲ್ಲಿಹನು ವರುಣ – ಮೂರನೆಯವನೆಲ್ಲ ಅರಿವ ಜಾಣ; ಈ ಭೂಮಿ ಆಕಾಶ ಎಲ್ಲದಕು ಅವ ರಾಜ ಮಿತಿಯರಿಯದವನ ಸಿರಿ ನಮ್ಮ ವರುಣ. ಜಲಧಿದ್ವಯಗಳು ಅವನ ಒಡಲೊಳಗೆ ಅಡಗಿಹವು, ಆದರೂ ಅವನಿಹನು ಹನಿ ನೀರಿನೊಳಗೆ. ಅಂತರಿಕ್ಷವ ಮೀರಿ ಹಾರಿ ಹೊರಟವನರಿಯ, ರಾಜ ವರುಣನ ಹಿಡಿತ […]

ಬಿ ಸ್ಕೂಲ್‍ಗಳಲ್ಲಿ ಭಗವದ್ಗೀತೆ : ದ ಬೆಸ್ಟ್ ಮ್ಯಾನೇಜ್‍ಮೆಂಟ್ ಬುಕ್

ಐಐಎಮ್ – ಕೋಯಿಕೋಡ್‍ನಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುತ್ತದೆ. ಈಗಾಗಲೇ ಜಪಾನಿನ ಇಪ್ಪತ್ತು ಹಾಗೂ ಸ್ಪೇನಿನ ಇಬ್ಬರು ಸಿಇಓಗಳು ಐಐಎಮ್ – ಕೆ ಗೆ ಭೇಟಿ ಕೊಟ್ಟಿ ಭಗವದ್ಗೀತೆ ಬೋಧನಾ ಕ್ರಮವನ್ನು ಅಭ್ಯಸಿಸಿದ್ದಾರೆ. ಹಾಗೂ ತಮ್ಮ ಸಂಸ್ಥೆಯಲ್ಲಿ ಅದನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಿದ್ದಾರೆ…. ‘ದ ಬೆಸ್ಟ್ ಮ್ಯಾನೇಜ್‍ಮೆಂಟ್ ಬುಕ್’ ಎಂದು ಜಾಗತಿಕ ಮನ್ನಣೆ ಪಡೆದಿರುವ ಭಗವದ್ಗೀತೆ ಅನೇಕ ಮ್ಯಾನೇಜ್‍ಮೆಂಟ್ ಕಾಲೇಜುಗಳಲ್ಲಿ ಮುಖ್ಯ ಪಠ್ಯ ವಸ್ಯುಗಳಲ್ಲಿ ಒಂದಾಗಿದೆ. ಬಿ ಸ್ಕೂಲ್‍ಗಳು ವ್ಯವಹಾರ ನಿರ್ವಹಣಾ ಕಲೆಯನ್ನು ವಿದ್ಯಾರ್ಥಿಗಳಿಗೆ ಆಕರ್ಷಕವಾಗಿ ಹಾಗೂ […]

ದೈನಂದಿನ ಬದುಕಿಗೆ ಭಗವದ್ಗೀತೆಯ ಸೂತ್ರಗಳು

ಭಗವದ್ಗೀತೆಯು ಲೌಕಿಕ – ಪರಮಾರ್ಥಗಳೆರಕ್ಕೂ ಸಲ್ಲುವ ಧಾರ್ಮಿಕ ಸಾಹಿತ್ಯವಾಗಿದೆ. ಯಾವುದೇ ರಚನೆ – ಬೋಧನೆ – ನಿರ್ಣಯಗಳು ಎಷ್ಟೇ ಸಾರ್ವಕಾಲಿಕವಾಗಿದ್ದರೂ ಆಯಾ ಕಾಲದ ಅಗತ್ಯವನ್ನೂ ಚಿಂತನೆಯನ್ನೂ ಹೊತ್ತುಕೊಂಡಿರುತ್ತದೆ. ಭಗವದ್ಗೀತೆಯ ಜ್ಞಾನಸಾಗರದಲ್ಲಿ ಮುತ್ತುಗಳನ್ನು ಆಯ್ದುಕೊಳ್ಳುವ ಸಹನೆ ಮತ್ತು ಶ್ರದ್ಧೆ ನಮ್ಮದಾಗಿರಬೇಕಷ್ಟೆ. ಆಧುನಿಕ ಧಾವಂತದ ಬದುಕಿನಲ್ಲಿ ಮಾನವನ ಮುಖ್ಯ ಸಮಸ್ಯೆ ಎಂದರೆ ನಿರ್ವಹಣೆಯದ್ದು. ನಾವು ಇಂದು ಯಾವುದನ್ನೂ ಸರಿಯಾಗಿ, ಸಮರ್ಥವಾಗಿ ನಿರ್ವಹಿಸಲಾಗದ ಅಶಕ್ತ ಸ್ಥಿತಿಯಲ್ಲಿದ್ದೇವೆ. ನಾವು ನಮ್ಮ ಆರ್ಥಿಕತೆಯನ್ನು ನಿರ್ವಹಿಸಲಾರೆವು. ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲಾರೆವು. ಸಂಬಂಧಗಳಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲಾರೆವು. […]

ಯಾವಾಗ ಯಾವ ಶ್ಲೋಕ ಹೇಳಬೇಕು ? : ನಿತ್ಯಪಾಠ

ಮುಂಜಾನೆ ಏಳುವಾಗಿಂದ ರಾತ್ರಿ ಮಲಗುವವರೆಗೆ ವಿವಿಧ ಕಾರ್ಯಗಳಲ್ಲಿ ವಿವಿಧ ಶ್ಲೋಕವನ್ನು ಹೇಳಬೇಕೆನ್ನುವುದು ಆಚರಣೆಯಲ್ಲಿತ್ತೋ ಇಲ್ಲವೋ, ಅಂಥದೊಂದು ಇಂಗಿತವಂತೂ ಇತ್ತು. ಈಗಲೂ ಅವೆಲ್ಲವನ್ನೂ ಅಲ್ಲವಾದರೂ ಏಳುವಾಗ ‘ಕರಾಗ್ರೇ ವಸತೇ’, ಊಟ ಮಾಡುವಾಗ ‘ಅನ್ನಪೂರ್ಣೇ ಸದಾಪೂರ್ಣೇ’, ಮಲಗುವಾಗ ‘ರಾಮಸ್ಕಂದಮ್’ ಶ್ಲೋಕಗಳನ್ನು ಹೇಳುವ ಅಭ್ಯಾಸ ಕೆಲವರಿಗಿದೆ. ಹೀಗೆ ವಿವಿಧ ದೈನಂದಿನ ಚಟುವಟಿಕೆಗಳ ವೇಳೆ ಯಾವ ಶ್ಲೋಕಗಳನ್ನು ಹೇಳಬೇಕು ಅನ್ನುವುದರ ‘ನಿತ್ಯಪಾಠ’ ಇಲ್ಲಿದೆ… ಬೆಳಿಗ್ಗೆ ಎದ್ದಕೂಡಲೇ ಕೈಗಳನ್ನು ನೋಡುತ್ತಾ: ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ […]

ರಾಮಾಯಣದ ಬಗ್ಗೆ ನಿಮಗೆಷ್ಟು ಗೊತ್ತು? : ಪ್ರಾಥಮಿಕ ಮಾಹಿತಿ ಇಲ್ಲಿದೆ

ರಾಮಾಯಣವು ಸನಾತನ ಸಾಹಿತ್ಯದ ಪ್ರಮುಖ ಕೃತಿಗಳಲ್ಲೊಂದು. ಇದು ತ್ರೇತಾಯುಗದಲ್ಲಿ ಸೂರ್ಯವಂಶದಲ್ಲಿ ಜನಿಸಿದ ಶ್ರೀ ರಾಮನ ಕಥನವಾದ್ದರಿಂದ, ಇದಕ್ಕೆ ‘ರಾಮಾಯಣ’ವೆಂದು ಹೆಸರು. ಆದಿಕವಿ ಎಂಬ ಖ್ಯಾತಿ ಪಡೆದ ವಾಲ್ಮೀಕಿಯು ರಚಿಸಿದ ಮೂಲ ರಾಮಾಯಣವು 24,000 ಶ್ಲೋಕಗಳಿಂದ ಕೂಡಿದ್ದು, 7 ಕಾಂಡಗಳಲ್ಲಿ ನಿರೂಪಿಸಲ್ಪಟ್ಟಿದೆ. ರಾಮಾಯಣದ ಕಥೆ ವಾಲ್ಮೀಕಿಯು ಕಾವ್ಯ ರೂಪದಲ್ಲಿ ರಚಿಸುವ ಮೊದಲೇ ಜನಜನಿತವಾಗಿತ್ತೆಂದು ತೋರುತ್ತದೆ. ಇದು ಕೇವಲ ಕಲ್ಪಿತ ಕಾವ್ಯವಾಗಿರದೆ, ಐತಿಹಾಸಿಕ ಸತ್ಯ ಎಂದೂ ಹೇಳಲಾಗುತ್ತದೆ. ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಅಯೋಧ್ಯೆ, ಮಿಥಿಲೆ, ಚಿತ್ರಕೂಟ, ಗೋಮತಿ, ತಮಸಾನದಿ, ದಂಡಕಾರಣ್ಯ, ಕಿಷ್ಕಿಂಧೆ […]

ಧರ್ಮ ಸ್ಮೃತಿಗಳು ಎಷ್ಟಿವೆ? ಅವು ಯಾವುವು ? ~ ಸನಾತನ ಸಾಹಿತ್ಯ ಮೂಲ ಪಾಠಗಳು #48

ಹಿಂದೂ ಧಾರ್ಮಿಕ ಸಾಹಿತ್ಯವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಎಂದು ಎರಡು ಭಾಗವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ವೇದೋಪನಿಷತ್ತುಗಳು ಅತ್ಯಂತ ಪ್ರಾಚೀನವೂ ಅಧಿಕಾರಯುತವೂ ಆಗಿವೆ. ವೇದ, ಉಪನಿಷತ್ತು, ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು – ಇವೆಲ್ಲ ‘ಶ್ರುತಿ’ಗಳಾಗಿವೆ. ಪುರಾಣ, ಆಗಮ, ಶಾಸ್ತ್ರಗ್ರಂಥಗಳು ‘ಸ್ಮೃತಿ’ಗಳೆಂದು ಕರೆಸಿಕೊಳ್ಳುತ್ತವೆ. ಭಗವದ್ಗೀತೆಯು ಭಗವಂತನಿಂದ ಹೇಳಲ್ಪಟ್ಟಿರುವುದರಿಂದ ‘ಶ್ರುತಿ’ಯಾಗಿಯೂ, ಮಹಾಭಾರತ ಮಹಾಕಾವ್ಯದಲ್ಲಿ ವ್ಯಾಸರ ಮೂಲಕ ಬರೆಯಲ್ಪಟ್ಟಿರುವುದರಿಂದ ‘ಸ್ಮೃತಿ’ಯಾಗಿಯೂ ಪರಿಗಣಿಸಲ್ಪಡುತ್ತದೆ. ಸ್ಮೃತಿಗಳಲ್ಲಿ ಆಯಾ ಕಾಲಘಟ್ಟಕ್ಕೆ ಸೂಕ್ತವಾದ ರೀತಿ ನೀತಿಗಳನ್ನೂ, ನಡೆ – ನಿಯಮಾವಳಿಗಳನ್ನೂ ಸೂಚಿಸುವ ವಿಭಾಗಕ್ಕೆ ‘ಧರ್ಮ ಸ್ಮೃತಿ’ಗಳೆಂದು […]

ಭಗವಾನ್ ವಿಷ್ಣುವನ್ನು ‘ವಷಟ್ಕಾರ’ ಎಂದೇಕೆ ಕರೆಯುತ್ತಾರೆ? : ವಿಷ್ಣುಸಹಸ್ರನಾಮದ ವಿಶಿಷ್ಟ ಹೆಸರುಗಳು #1

ಭಗವಂತನನ್ನು ಹಲವು ಹೆಸರುಗಳಿಂದ ಸ್ತುತಿಸುವಾಗ ನಮಗೆ ಆ ಹೆಸರನ್ನು ಏಕೆ ಬಳಸುತ್ತಿದ್ದೇವೆ ಎಂಬ ಅರಿವಿದ್ದರೆ, ನಮ್ಮ ಪ್ರಾರ್ಥನೆ ಮತ್ತಷ್ಟು ಅರ್ಥಪೂರ್ಣವಾಗುತ್ತದೆ…. ವಿಷ್ಣು ಸಹಸ್ರನಾಮವು ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ  ಎಂದು ಆರಂಭವಾಗುತ್ತದೆ. ಇಲ್ಲಿ ವಿಶ್ವ, ವಿಷ್ಣು, ವಷಟ್ಕಾರ ಮತ್ತು ಭೂತಭವ್ಯಭವತ್ಪ್ರಭು – ಎಂಬ ನಾಲ್ಕು ಹೆಸರುಗಳಿವೆ. ಇಲ್ಲಿ ಮೂರನೆ ಹೆಸರಾಗಿ ಬರುವ  ವಷಟ್ಕಾರ ಎನ್ನುವ ಹೆಸರಿನ ಅರ್ಥವೇನು ನೋಡೋಣ…  ವಷಟ್ಕಾರ ಎಂದು ಆರು ಮುಖಗಳಿರುವ ಭಗವಂತ. ಜ್ಞಾನ, ಶಕ್ತಿ, ಬಲ – ರಕ್ಷಣೆ, ಐಶ್ವರ್ಯ, ವೀರ್ಯ ಮತ್ತು ತೇಜಸ್ಸು ಇವೇ […]

ಯಾವ ದಿಕ್ಕಿಗೆ ಯಾವ ದೇವತೆಯ ರಕ್ಷಣೆ? ಅಷ್ಟದಿಕ್ಪಾಲಕರ ಮಾಹಿತಿ ನೀಡುವ 8 ಚಿತ್ರಿಕೆಗಳು

ಹಿಂದೂ ಪುರಾಣಗಳ ಪ್ರಕಾರ ಪ್ರತಿಯೊಂದು ದಿಕ್ಕಿಗೂ ಒಬ್ಬ ಅಧಿಪತಿಯಿದ್ದಾರೆ. ಅವರನ್ನು ದಿಕ್ಪಾಲಕರೆಂದು ಕರೆಯಲಾಗಿದೆ. ಎಂಟು ದಿಕ್ಕುಗಳನ್ನು ಕಾಯುತ್ತಿರುವ ದೇವತೆಗಳೇ ಈ ದಿಕ್ – ಪಾಲಕರು. ಅಷ್ಟೇ ಅಲ್ಲದೆ ಊರ್ಧ್ವ ಮತ್ತು ಅಧಃ – ಮೇಲೆ ಮತ್ತು ಕೆಳಗನ್ನೂ ದಿಕ್ವೆಕುಗಳೆಂದು ಪರಿಗಣಿಸಿ ದಶದಿಕ್ಪಾಲಕರೆಂದೂ ಹೇಳುವುದುಂಟು. ಅದರ ಪ್ರಕಾರ ಊರ್ಧ್ವ ದಿಕ್ಕಿಗೆ ವಿಷ್ಣು ಪಾಲಕನಾದರೆ, ಅಧಃ ದಿಕ್ಕಿಗೆ ಬ್ರಹ್ಮ ಪಾಲಕ.  ಪುರಾಣ ಮೂಲದಿಂದ ಸಂಗ್ರಹಿಸಿದ 8 ದಿಕ್ಪಾಲಕರ ಹೆಸರು ಮತ್ತು ಕಿರುಮಾಹಿತಿ ಈ ಚಿತ್ರಿಕೆಗಳಲ್ಲಿದೆ… 1 ಕುಬೇರ 2 ಯಮ 3 ಇಂದ್ರ 4 ವರುಣ 5 ಈಶಾನ […]

ಇನ್ನಿತರ ಗೀತೆಗಳು| ಸನಾತನ ಸಾಹಿತ್ಯ ~ ಮೂಲಪಾಠಗಳು #46

ನಮಗೆ ಭಗವದ್ಗೀತೆ ಗೊತ್ತು. ಭಗವದ್ಗೀತೆಯಂತೆಯೇ ಇನ್ನಿತರ ಕೆಲವು ತಿಳಿವಿನ ಗಣಿಗಳೂ ಇವೆ. ಅವುಗಳಲ್ಲಿ ಎಂಟು ಗೀತೆಗಳ ಕಿರು ಮಾಹಿತಿ ಇಲ್ಲಿದೆ… ಅನು ಗೀತಾ ಕುರುಕ್ಷೇತ್ರ ಯುದ್ಧಾನಂತರ ಪಾಂಡವರು ರಾಜ್ಯಕಾರ್ಯಗಳಲ್ಲಿ ನಿರತರಾಗುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಬೋಧಿಸಿದ ಗೀತೆ ಇದು. ಉದ್ಧವ ಗೀತಾ ಭಾಗವತ ಪುರಾಣದಲ್ಲಿ ಬರುವ ಉದ್ಧವ ಗೀತೆಯನ್ನು ಹಂಸ ಗೀತಾ ಎಂದೂ ಕರೆಯಲಾಗುತ್ತದೆ. ಶ್ರೀ ಕೃಷ್ಣ ತನ್ನ ಅವತಾರ ಲೀಲೆ ಮುಗಿಸಿ ವೈಕುಂಠಕ್ಕೆ ತೆರಳುವ ಮುನ್ನ ತನ್ನ ಸಂಗಾತಿ ಉದ್ಧವನಿಗೆ ನೀಡುವ ಬೋಧನೆ […]