ಯಾವ ದಿಕ್ಕಿಗೆ ಯಾವ ದೇವತೆಯ ರಕ್ಷಣೆ? ಅಷ್ಟದಿಕ್ಪಾಲಕರ ಮಾಹಿತಿ ನೀಡುವ 8 ಚಿತ್ರಿಕೆಗಳು

ಹಿಂದೂ ಪುರಾಣಗಳ ಪ್ರಕಾರ ಪ್ರತಿಯೊಂದು ದಿಕ್ಕಿಗೂ ಒಬ್ಬ ಅಧಿಪತಿಯಿದ್ದಾರೆ. ಅವರನ್ನು ದಿಕ್ಪಾಲಕರೆಂದು ಕರೆಯಲಾಗಿದೆ. ಎಂಟು ದಿಕ್ಕುಗಳನ್ನು ಕಾಯುತ್ತಿರುವ ದೇವತೆಗಳೇ ಈ ದಿಕ್ – ಪಾಲಕರು. ಅಷ್ಟೇ ಅಲ್ಲದೆ ಊರ್ಧ್ವ ಮತ್ತು ಅಧಃ – ಮೇಲೆ ಮತ್ತು ಕೆಳಗನ್ನೂ ದಿಕ್ವೆಕುಗಳೆಂದು ಪರಿಗಣಿಸಿ ದಶದಿಕ್ಪಾಲಕರೆಂದೂ ಹೇಳುವುದುಂಟು. ಅದರ ಪ್ರಕಾರ ಊರ್ಧ್ವ ದಿಕ್ಕಿಗೆ ವಿಷ್ಣು ಪಾಲಕನಾದರೆ, ಅಧಃ ದಿಕ್ಕಿಗೆ ಬ್ರಹ್ಮ ಪಾಲಕ.  ಪುರಾಣ ಮೂಲದಿಂದ ಸಂಗ್ರಹಿಸಿದ 8 ದಿಕ್ಪಾಲಕರ ಹೆಸರು ಮತ್ತು ಕಿರುಮಾಹಿತಿ ಈ ಚಿತ್ರಿಕೆಗಳಲ್ಲಿದೆ… 1 ಕುಬೇರ 2 ಯಮ 3 ಇಂದ್ರ 4 ವರುಣ 5 ಈಶಾನ […]

ದಶನಾಮಿ ಪದ್ಧತಿ| ಸನಾತನ ಸಾಹಿತ್ಯ ~ ಮೂಲಪಾಠಗಳು #45

ಸನ್ಯಾಸದಲ್ಲಿ ನಾಲ್ಕು ವಿಧಗಳು. ಕುಟಿಚಕ, ಬಹುಚಕ, ಹಂಸ ಮತ್ತು ಪರಮಹಂಸ. ಶಂಕರಾಚಾರ್ಯರು ದಶನಾಮಿ ಪದ್ಧತಿಯನ್ನು ಪರಿಚಯಿಸಿದರು. 1.ತೀರ್ಥ  2.ಆಶ್ರಮ  3.ವನ  4.ಅರಣ್ಯ  5. ಗಿರಿ 6.ಪರ್ವತ 7ಸಾಗರ 8.ಸರಸ್ವತಿ 9.ಭಾರತೀ ಮತ್ತು 10. ಪುರೀ – ಇವು ಸಂನ್ಯಾಸ ಪರಂಪರೆಯ ಹತ್ತು ಉಪಾಧಿಗಳು.  ಈ ದಶನಾಮಗಳನ್ನು ಯಾರಿಗೆ ನೀಡಲಾಗುತ್ತದೆ ಅನ್ನುವ ಕಿರು ವಿವರ ಮುಂದಿದೆ : ಭಾರತೀ ನಾಮ ವಿದ್ಯಾಭಾರೇಣ ಸಂಪೂರ್ಣಃ ಸರ್ವಭಾರಂ ಪರಿತ್ಯಜೇತ್ | ದುಃಖ ಭಾರಂ ನ ಜಾನತಿ ಭಾರತೀ ಪರಿಕೀರ್ತಿತಃ || ಯಾವ […]

ಶ್ರೀ ಯಂತ್ರದ ಒಂಬತ್ತು ಚಕ್ರಗಳು

೧. ತೈಲೋಕ್ಯ ಮೋಹನ ಚಕ್ರ : ಮೊದಲನೆಯ ಭೂಪುರದ ಪಶ್ಚಿಮ ದಿಕ್ಕಿನಲ್ಲಿ ಸರ್ವಸಂಕ್ಷೋಭಿಣಿ , ಉತ್ತರದಲ್ಲಿ ವಿಧಾರಿಣಿ , ಪೂರ್ವದಲ್ಲಿ ಸರ್ವಾಕರ್ಷಿಣಿ , ದಕ್ಷಿಣದಲ್ಲಿ ಸರ್ವ ಶಂಕರಿ , ವಾಯುವ್ಯದಲ್ಲಿ ಸರ್ವೋನ್ಮಾದಿನಿ , ಈಶಾನ್ಯದಲ್ಲಿ ಸರ್ವ ಮಹಾಂಕುಶಾ , ಆಗ್ನೇಯದಲ್ಲಿ ಖೇಚರಿ , ನಿಋಋತಿಯಲ್ಲಿ ಸರ್ವಬೀಜಾ, ಅದೋಭಾಗದಲ್ಲಿ ಸರ್ವಯೋನಿ , ಊರ್ಧ್ವದಲ್ಲಿ ಸರ್ವೇಶ್ವರಿ ಎಂಬ ಮುದ್ರಾಶಕ್ತಿಗಳಿರುವರು. ೨. ಸರ್ವಾಶಾಪರಿಪೂರಕ ಚಕ್ರ : ಎರಡನೆಯ ಷೋಡಶದಳಪದ್ಮದಲ್ಲಿ ಪೂರ್ವದಿಂದ ಅಪ್ರದಕ್ಷಿಣವಾಗಿ – ಕಾಮಾಕರ್ಷಿಣಿ , ಸರ್ವಾಕರ್ಷಿಣೀ , ಬುದ್ದಾಕರ್ಷಿಣೀ, ಅಹಂಕಾರಾಕರ್ಷಿಣೀ, […]

ಮಹಾಭಾರತ ವಂಶಾವಳಿ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #43

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 6ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM  ಹಿಂದಿನ ಭಾಗ ಇಲ್ಲಿ ಓದಿ : https://aralimara.com/2018/11/17/vamsha/ ಶಂತನುವು ಗಂಗೆ ಭಾಗೀರಥಿಯನ್ನು ವಿವಾಹವಾದನು. ಅವಳಲ್ಲಿ ದೇವವ್ರತನು ಜನಿಸಿದನು. ಅವನನ್ನು ಭೀಷ್ಮ ಎಂದು ಕರೆದರು. ತನ್ನ ತಂದೆಗೆ ಪ್ರಿಯವಾದದ್ಡನ್ನು ಮಾಡಲೋಸುಗ ಭೀಷ್ಮನು ತಾಯಿ ಸತ್ಯವತಿಯನ್ನು ಕರೆತಂದು ಅವನಿಗೆ ಮದುವೆ ಮಾಡಿಸಿದನು. ಅವಳನ್ನು ಗಂಧಕಾಲೀ ಎಂದೂ ಕರೆಯುತ್ತಿದ್ದರು. ಅವಳು ಕನ್ಯೆಯಾಗಿರುವಾಗಲೇ ಪರಾಶರನಿಂದ ದ್ವೈಪಾಯನನಿಗೆ ಜನ್ಮವಿತ್ತಿದ್ದಳು. ಅವಳು ಶಂತನುವಿನಿಂದ ಈರ್ವರು ಪುತ್ರರನ್ನು ಪಡೆದಳು: ಚಿತ್ರಾಂಗದ […]

ಸಂಪೂರ್ಣ ವಂಶಾವಳಿ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #42

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 5ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM  ಹಿಂದಿನ ಭಾಗ ಇಲ್ಲಿ ಓದಿ : https://aralimara.com/2018/11/16/sanatana-3/ ದಕ್ಷನಿಂದ ಅದಿತಿ. ಅದಿತಿಯಿಂದ ವಿವಸ್ವತ. ವಿವಸ್ವತನಿಂದ ಮನು. ಮನುವಿನಿಂದ ಇಲ. ಇಲನಿಂದ ಪುರೂರವ. ಪುರೂರವನಿಂದ ಆಯುಸ್. ಆಯುಸನಿಂದ ನಹುಷ. ನಹುಷನಿಂದ ಯಯಾತಿ. ಯಯಾತಿಗೆ ಈರ್ವರು ಪತ್ನಿಯರು. ಉಶನಸನ ಪುತ್ರಿ ದೇವಯಾನಿ ಮತ್ತು ವೃಷಪರ್ವನ ಮಗಳು ಶರ್ಮಿಷ್ಠೆ. ಯದು ಮತ್ತು ತುರ್ವಸು ದೇವಯಾನಿಯಲ್ಲಿ ಮತ್ತು ದ್ರುಹ್ಯು, ಅನು […]

ಪೌರವ ವಂಶಾವಳಿ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #41

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 4ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM   ಪುರುವು ಪೌಷ್ಟಿಯಲ್ಲಿ ಮೂವರು ಮಹಾರಥಿ ಪುತ್ರರನ್ನು ಪಡೆದನು: ಪ್ರವೀರ, ಈಶ್ವರ, ಮತ್ತು ರೌದ್ರಾಶ್ವ. ಅವರಲ್ಲಿ ಪ್ರವೀರನು ವಂಶವನ್ನು ಮುಂದುವರಿಸಿದನು. ರಾಜನು ಶೇನಿಯಲ್ಲಿ ಮನಸ್ಯು ಎಂಬ ಶೂರ ಮಗನನ್ನು ಪಡೆದನು. ಆ ರಾಜೀವಲೋಚನನು ಭೂಮಿಯ ನಾಲ್ಕೂ ದಿಕ್ಕುಗಳನ್ನು ಆಳಿದನು. ಮನಸ್ಯುವು ಸೌವೀರಿಯಲ್ಲಿ ಮೂರು ಮಕ್ಕಳನ್ನು ಪಡೆದನು: ಸುಭ್ರು, ಸಂಹನನ, ಮತ್ತು ವಾಗ್ಮಿ. ಈ ಎಲ್ಲ ಪುತ್ರರೂ […]

ಸಹಜ ಸನಾತನಿಗಳ ಮೇಲೆ ನಾಲ್ದೆಸೆಯ ಪ್ರಹಾರ ~ ಧರ್ಮೋ ರಕ್ಷತಿ ರಕ್ಷಿತಃ #2

ತಾರತಮ್ಯ ವ್ಯವಸ್ಥೆ ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧ.ಇದಕ್ಕೆ ಶಾಸ್ತ್ರದ ಆಧಾರವಿಲ್ಲ ಎನ್ನುವುದನ್ನು ಹಿಂದಿನ ಲೇಖನದಲ್ಲಿ  ( https://aralimara.com/2018/11/09/dharma/ )  ನೋಡಿದ್ದೇವೆ. ಈ ಲೇಖನದಲ್ಲಿ ಇನ್ನಷ್ಟು… ~ ಅಪ್ರಮೇಯ ಜಾತಿ ವ್ಯವಸ್ಥೆಯೊಂದು ಮಹಾ ಪ್ರಮಾದವಾಗಿಬಿಟ್ಟಿದೆ. ಜಾತಿವ್ಯವಸ್ಥೆಯ ಪರಸ್ಪರ ವಿರೋಧ ಮನೋಭಾವದಿಂದಾಗಿ ಸನಾತನ ಧರ್ಮ ಒಡೆದು ನುಚ್ಚುನೂರಾದಂತಹ ಮನೆಯಂತಾಗಿದೆ. ಈ ಮನೆಯನ್ನು ಯಾರು ಬೇಕಾದರೂ ಸುಲಭವಾಗಿ ದೋಚಿಬಿಡಬಹುದು. ಮೊಘಲರು, ಬ್ರಿಟಿಷರು ಮುಸ್ಲಿಮರೆಲ್ಲರೂ ಈ ಜಾತಿ ವ್ಯವಸ್ಥೆಯ ಪ್ರಯೋಜನ ಪಡೆದುಕೊಂಡವರೆ ಆಗಿದ್ದಾರೆ. ಇತಿಹಾಸವನ್ನೂಮ್ಮೆ ಸೂಕ್ಷ್ಮವಾಗಿ ಅವಲೋಕಿಸಿ ನೋಡಿರಿ ಮುಸ್ಲಿಮರು ಭಾರತದ ಮೇಲೆ ಆಕ್ರಮಣ ಮಾಡಿ […]

ಮೂರ್ತಿಯಾಗುವುದು ಎಂದರೆ ಜಡವಾಗುವುದಲ್ಲ, ಸಾಕ್ಷೀಭಾವದಲ್ಲಿ ನೆಲೆಸುವುದು : ಸನಾತನ ಚಿಂತನೆ

ಮೂರ್ತಿಯಂತೆ ಮೌನವಾಗುವುದು ಎಂದರೆ ಕೇವಲ ಸಾಕ್ಷಿಯಾಗಿರುವುದು ಎಂದು. ಇದು ಕ್ರಿಯೆಯಲ್ಲ ಪ್ರತಿಕ್ರಿಯೆಯೂ ಅಲ್ಲ ನಿರ್ಲಿಪ್ತ ಅಥವಾ ಕೇವಲ ಅಸ್ತಿತ್ವದಲ್ಲಿರುವುದು. ಈ ಸಾಕ್ಷೀಭಾವವೇ ಪರಮ ಅಸ್ತಿತ್ವ. ಇದುವೇ ಭಗವಂತ. ~ ಅಪ್ರಮೇಯ  ದೇವರ ಮೂರ್ತಿಗಳ ಮೂಲ ಆಶಯವೇ ‘ಮೌನದ ಅನುಸಂಧಾನ’. ಮೌನಕ್ಕೆ ಇನ್ನೊಂದು ಹೆಸರೇ ಮೂರ್ತಿ. ದೇವರ ಮೂರ್ತಿಯ ಮುಂದೆ ಕುಳಿತು ಏನನ್ನೂ ಬೇಡಿಕೊಳ್ಳಬೇಕಾಗಿಲ್ಲ ಸುಮ್ಮನೆ ಕುಳಿತುಕೊಂಡರೆ ಸಾಕು.  ಹೀಗೆ ಮೂರ್ತಿಯೊಂದಿಗಿನ ಮೌನದ ಅನುಸಂಧಾನದಿಂದ ಚಿತ್ತವು ಶುದ್ಧವಾಗಿ ತಾನಾಗೇ ಧ್ಯಾನಾವಸ್ಥೆಗೆ ಕರೆದೊಯ್ಯುತ್ತದೆ. ಇದನ್ನು ಎಂದಾದರೂ ಗಮನಿಸಿದ್ದಿರಾ ? ಬಹುತೇಕವಾಗಿ ಇಲ್ಲ, ಅಲ್ಲವೆ? […]

ವೇದಗಳಲ್ಲಿ ಮುಖ್ಯ ನದಿಗಳ ನಿರುಕ್ತ | ಸನಾತನ ಸಾಹಿತ್ಯ ~ ಮೂಲಪಾಠಗಳು #37

ವೇದಗಳಲ್ಲಿ ಗಂಗೆ, ಯಮುನೆ, ಸರಸ್ವತೀ, ಶತುದ್ರೀ, ಪರುಷ್ಣೀ (ಇರಾವತೀ), ಸಿಂಧೂ, ಅಸಿಕ್ನೀ, ಮರುಧ್ವೃಧಾ, ವಿತಸ್ತಾ, ಅರ್ಜೀಕೀ, ಸುಷೋಮಾ ಮೊದಲಾದ ನದಿಗಳ ಉಲ್ಲೇಖವಿದೆ. ನಿರುಕ್ತದಲ್ಲಿ (9 : 26) ಈ ನದಿಗಳ ಅರ್ಥವನ್ನು ಹೀಗೆ ಹೇಳಲಾಗಿದೆ: ಗಂಗಾ : ‘ಗಮನಾತ್ ಇತಿ ಗಂಗಾ’ ಎಂದರೆ ಪ್ರವಹಿಸು ಎಂದು. ಇದು ‘ಗಮ್’ ಧಾತುವಿನಿಂದ ಬಂದಿದೆ. ಗಂಗಾ ಎಂದರೆ ನಿರಂತರವಾಗಿ ಹರಿಯುವವಳು ಎಂದರ್ಥ. ಯಮುನಾ : ‘ಪ್ರಯುವತಿ, ಗಚ್ಛತೀತಿ ವಾ’ – ಇತರ ನದಿಗಳೊಡನೆ ಕೂಡಿ ಹರಿಯುವುದರಿಂದಲೂ; ನಿಧಾನವಾಗಿ, ನಿಶ್ಶಬ್ದವಾಗಿ ಹರಿಯುವುದರಿಂದಲೂ ಈ […]

ಯಾವ ಮನ್ವಂತರದಲ್ಲಿ ಯಾರು ಸಪ್ತರ್ಷಿಗಳು ? : ಸನಾತನ ಸಾಹಿತ್ಯ ~ ಮೂಲಪಾಠಗಳು #35

ಸನಾತನ ಋಷಿಗಳ ಯಾದಿಯಲ್ಲಿ ಸಪ್ತರ್ಷಿಗಳಿಗೆ ವಿಶಿಷ್ಟ ಸ್ಥಾನವಿದೆ. ವಿವಿಧ ಮನ್ವಂತರಗಳಲ್ಲಿ ವಿವಿಧ ಋಷಿಗಳು ಮಂಡಲದಲ್ಲಿ ಉಲ್ಲೇಖಗೊಂಡಿದ್ದಾರೆ. ಕೆಲವು ಋಷಿಗಳು ಎಲ್ಲ ಮನ್ವಂತರದಲ್ಲೂ ಸಾಮಾನ್ಯವಾಗಿ ಕಾಣಸಿಗುತ್ತಾರೆ. ವಿವಿಧ ಸನಾತನ ಸಾಹಿತ್ಯದಲ್ಲಿ ಪ್ರಸ್ತುತ ಮನ್ವಂತರದ ಸಪ್ತರ್ಷಿಗಳ ಪಟ್ಟಿಯಲ್ಲಿ ವ್ಯತ್ಯಾಸವಿದ್ದು, ಅವು ಹೀಗಿವೆ: ಜೈಮಿನಿ ಬ್ರಾಹ್ಮಣದಲ್ಲಿ : ಅಗಸ್ತ್ಯ, ಅತ್ರಿ, ಭಾರದ್ವಾಜ, ಗೌತಮ, ಜಮದಗ್ನಿ, ವಸಿಷ್ಠ ಮತ್ತು ವಿಶ್ವಾಮಿತ್ರ ಬೃಹದಾರಣ್ಯಕ ಉಪನಿಷತ್ತಿನಲ್ಲಿ : ಗೌತಮ, ಭಾರದ್ವಾಜ, ವಿಶ್ವಾಮಿತ್ರ, ಜಮದಗ್ನಿ, ವಸಿಷ್ಠ, ಕಶ್ಯಪ, ಅತ್ರಿ ಮತ್ತು ಭೃಗು ಗೋಪಥ ಬ್ರಾಹ್ಮಣದಲ್ಲಿ : ಭಾರದ್ವಾಜ, […]