lotus

ತಿಳಿವು ಘಟಿಸುವ ಘಳಿಗೆಯೇ ಜ್ಞಾನೋದಯ

ಈವರೆಗೆ ಜ್ಞಾನೋದಯ ಹೊಂದಿದವರೆಲ್ಲರೂ ಹುಟ್ಟು – ಬೆಳವಣಿಗೆಯೊಂದಿಗೆ ತಮ್ಮ ಸುತ್ತ ಕಟ್ಟಿಕೊಂಡ ಗೋಡೆ – ಮಾಡುಗಳನ್ನು ಭಂಜಿಸುವ ಪ್ರಯತ್ನ ನಡೆಸಿದವರೇ. ಆ ಪ್ರಯತ್ನದ ಕೊನೆಯ ಉಳಿಪೆಟ್ಟು ಬಿದ್ದ ಘಳಿಗೆಯೇ ಜ್ಞಾನೋದಯದ ಘಟನೆ ~ ಚೇತನಾ ತೀರ್ಥಹಳ್ಳಿ ವಾಸ್ತವದಲ್ಲಿ ಕತ್ತಲೆಂಬುದಿಲ್ಲ. ಇರುವುದೇನಿದ್ದರೂ ಬೆಳಕಿನ ಗೈರು ಹಾಜರಿಯಷ್ಟೆ. ಬೇಕಿದ್ದರೆ ಪರಿಶೀಲಿಸಿ. ಕತ್ತಲು ತುಂಬಿದ ಕೋಣೆಯಲ್ಲಿ ಒಂದು ದೀಪದ ಕುಡಿ ಬೆಳಕು ತರಬಲ್ಲದು. ಆದರೆ ಬೆಳಕೇ ಬೆಳಕಾಗಿರುವ ಕಡೆ ಕತ್ತಲನ್ನು ತಂದು ತುಂಬಲು ಸಾಧ್ಯವಿಲ್ಲ. ಬೆಳಕನ್ನು ತಡೆದು, ಕೃತಕವಾಗಿ ಕತ್ತಲನ್ನು ಸೃಷ್ಟಿಸಬಹುದು. […]

ಸೂಫಿ ಪರಂಪರೆ : ಪ್ರೇಮದ ಹಾದಿಯ ಆತ್ಮಾನುಭೂತಿ

ಸೂಫಿ ಪರಂಪರೆ ಪ್ರೇಮದ ಹಾದಿಯ ಆತ್ಮಾನುಭೂತಿಯನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡು ಬೆಳೆದದ್ದು. ಯಾರು ಪ್ರೇಮದಲ್ಲಿ ಮತ್ತನಾಗಿರುತ್ತಾನೋ ಅವನೇ ಸೂಫಿ. ಎದೆಯಲ್ಲಿ ಪ್ರೇಮ, ಅದನ್ನು ಅಭಿವ್ಯಕ್ತಿಸುವ ಕಾವ್ಯಗಳನ್ನು ಬರೆಯದ ಯಾರೊಬ್ಬರೂ ಈ ಪರಂಪರೆಯಲ್ಲಿ ಕಾಣಸಿಗುವುದಿಲ್ಲ! ಅಷ್ಟರಮಟ್ಟಿಗೆ ಸೂಫಿಗಳ ಅಧ್ಯಾತ್ಮ ಪ್ರೇಮ ಮತ್ತು ಕಾವ್ಯಗಳೊಂದಿಗೆ ಹೆಣೆದುಕೊಂಡಿದೆ ~ ಚೇತನಾ  “ಪ್ರಾಣ ನೀನು. ನಿನ್ನನ್ನು ಮನುಷ್ಯ ಎಂದೇಕೆ ಅಂದುಕೊಂಡಿದ್ದೀಯ? ನೀನು ನೀರು. ಆದರೆ ಗಡಿಗೆ ಎಂದುಕೊಂಡುಬಿಟ್ಟಿದ್ದೀಯ. ಬೇರೆ ವಸ್ತುಗಳು ಹುಡುಕುವುದರಿಂದ ಸಿಗುತ್ತವೆ. ಆ ಪ್ರಿಯತಮನ ವಿಷಯದಲ್ಲಿ ಒಂದು ಸೋಜಿಗ. ಅವನನ್ನು ಪಡೆಯುವ ಮುನ್ನ […]

ಸನಾಯಿ ಹೀಗೆ ಹೇಳಿದ…. : ಅರಳಿಮರ POSTER

“ಜಗತ್ತಿನಲ್ಲಿ ಎಷ್ಟೆಲ್ಲ ಸಾಮ್ರಾಟರಿದ್ದರೋ ಅವರೆಲ್ಲ ಇಟ್ಟಿಗೆ – ಮಣ್ಣಿನ ರಾಶಿಯಡಿಯಲ್ಲಿ ಹೂತು ಹೋಗಿದ್ದಾರೆ. ಹಾಗಿದ್ದೂ ಅವನು ಅರಸ, ಇವನು ಗುಲಾಮನೆಂದು ಭೇದವೇಕೆ ಮಾಡುವುದು? ಎಲ್ಲರನ್ನೂ ಸಮಾನವಾಗಿ ಪ್ರೀತಿಸು” ಅನ್ನುತ್ತಾನೆ  ಸನಾಯಿ ಘಜ್ನವಿ.   ನಾವು ಪ್ರೇಮದಲ್ಲೂ ತಾರತಮ್ಯ ಮಾಡುತ್ತೇವೆ. ಪ್ರೇಮದಲ್ಲಿ ಅಂದರೆ, ಭಾವಿಸಲ್ಪಟ್ಟ ಪ್ರೇಮದಲ್ಲಿ. ಯಾವುದು ವಾಸ್ತವದಲ್ಲಿ ಪ್ರೇಮವೋ ಅಲ್ಲಿ ತರತಮಕ್ಕೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ನಮ್ಮ ವ್ಯಾವಹಾರಿಕ ಅರ್ಥದ ಪ್ರೇಮದಲ್ಲಿ ನಾವು ತಾರತಮ್ಯ ತೋರುತ್ತೇವೆ. ಶ್ರೀಮಂತರನ್ನು, ಸುಂದರವಾಗಿರುವವರನ್ನು, ಬುದ್ಧಿವಂತರನ್ನು ಇತ್ಯಾದಿ ಹಲವು ಮಾನದಂಡಗಳ ಮೂಲಕ ನಮ್ಮ ಪ್ರೀತಿಯನ್ನು […]

ಸೂಫಿ ಅನುಭಾವಿ ಸನಾಯಿ : ಪದ್ಯ ಮತ್ತು ಪರಿಚಯ

ಲಾಯೇಖ್ವಾರನ ಮಾತುಗಳು ಸನಾಯಿಯ ಎದೆ ನಾಟಿದವು. ಆತ ನದಿಯಿಂದ ಮರಳಿ ದರ್ಬಾರಿಗೆ ಹೋಗಲೇ ಇಲ್ಲ. ಸೂಫೀ ಗುರುವೊಬ್ಬನ ಮಾರ್ಗದರ್ಶನದಲ್ಲಿ ತಾನೊಬ್ಬ ದರವೇಶಿಯಾದ. ಅಧ್ಯಾತ್ಮ ಕವಿಯಾಗಿ ಮನ್ನಣೆಯನ್ನೂ ಶಿಷ್ಯವರ್ಗವನ್ನೂ ಹೊಂದಿದ ~ ಅಲಾವಿಕಾ ಶಿಲೆಯಲ್ಲಿ ಅಗ್ನಿಯನ್ನು ಅಡಗಿಸಿಟ್ಟವರು ಯಾರು? ಕಪ್ಪು ಮಣ್ಣಿನಲ್ಲಿ ಕೆಂಪು ಹೂವನ್ನು ಬಿಡಿಸಿದವರು ಯಾರು? ನದಿಯಲ್ಲಿ ಮುತ್ತಿನ ಚಿಪ್ಪುಗಳನ್ನು, ಕಾಡಿನಲ್ಲಿ ಚಿಗರೆಗಳನ್ನು ಇಟ್ಟವರು ಯಾರು? ಅವೆಲ್ಲವನ್ನೂ ತಾವು ಇರುವಲ್ಲಿ ನೆಮ್ಮದಿಯಿಂದ ಇರುವಂತೆ ಮಾಡಿರುವುದು ಯಾರು? ~ ಎಂದು ಕೇಳುತ್ತಾನೆ ಸೂಫೀ ಕವಿ ಸನಾಯಿ. ಈತನ ಮೂಲ […]

ಪ್ರೇಮಿಯನ್ನು ಪಡೆಯಲು ನೀನು ಹುಡುಕಬೇಕಾಗಿಯೇ ಇಲ್ಲ!

ಪ್ರೇಮವನ್ನು ಹುಡುಕಿದರೆ ಎಲ್ಲೂ ಸಿಗದು; ಎಂದೇ ಪ್ರೇಮಿಯನ್ನೂ. ಪ್ರೇಮ ನಮ್ಮೊಳಗಿನ ಬೆಳಕು. ಅದನ್ನು ಹೊರಗೆಲ್ಲಿ ಹುಡುಕುವುದು. ಜೀವನವೇ ಒಂದು ಹುಡುಕಾಟ. ಸಂಪತ್ತಿಗಾಗಿ, ನೆಮ್ಮದಿಗಾಗಿ, ಕಳೆದುಕೊಂಡ ಸಂಬಂಧಗಳ ಕೊಂಡಿಗಾಗಿ ಜೀವನವಿಡೀ ಹುಡುಕುತ್ತಲೇ ಇರುತ್ತೇವೆ. ನೈಲ್ ನದಿಯ ಮೂಲ, ಅಪರೂಪದ ಆರ್ಕಿಡ್ ಹೂಗಳು, ಸಾಗರದಾಳದ ಜೀವ ವೈವಿಧ್ಯ, ಪರ್ವತಗಳ ತುತ್ತ ತುದಿ ಹುಡುಕಿ ಹೊರಟ ಸಾಹಸಿಗರನ್ನ ನಾವು ಕಂಡಿದ್ದೇವೆ. ಭೂಮಿಯಾಚೆಗಿನ ವಿಸ್ಮಯ, ಅನ್ಯ ಗ್ರಹಗಳು, ತಾರಾಮಂಡಲ, ವಿಜ್ಞಾನದ ಅತಿ ಕಠಿಣ ಸವಾಲುಗಳಿಗೂ ಮನುಷ್ಯನ ಹುಡುಕಾಟದಲ್ಲಿ ಉತ್ತರ ದೊರೆತವು. ಮನುಷ್ಯ ಯಾವುದರ […]