ಹಫೀಝ್ ಹೇಳಿದ್ದು : ಅರಳಿಮರ POSTER

ನಿಮಗೆ ಯಾವುದು ಸಂತಸ ನೀಡುವುದೋ, ಯಾವುದು ನಿಮ್ಮನ್ನು ಜೀವಂತಿಕೆಯಿಂದ ಇರಿಸುವುದೋ, ಸದಾ ಅದರ ಸನಿಹದಲ್ಲಿರಿ. ~ ಹಫೀಜ್ ನಾವು ಮಾಡುವ ಕೆಲಸ, ನಾವು ಬೆಳೆಸುವ ಸಂಬಂಧಗಳು, ನಾವು ಆಯ್ಕೆ ಮಾಡಿಕೊಳ್ಳುವ ಗೆಳೆಯ ಗೆಳರಿಯರು ನಮಗೆ ಖುಷಿ ಕೊಡುವಂತಿರಬೇಕು. ಹಾಗಿಲ್ಲವಾದರೆ, ಅವುಗಳು ಖುಷಿ ಕೊಡುತ್ತಿಲ್ಲವಾದರೆ, ನಮ್ಮ ಆಯ್ಕೆಯಲ್ಲಿ ತಪ್ಪಿದೆ ಹೊರತು, ಅವುಗಳಲ್ಲಿ ಅಲ್ಲ. ಆದರೆ ನಾವು ಮಾಡುವುದೇನು? ಕೆಲಸವನ್ನು ದೂರುತ್ತೇವೆ. ಸಂಬಂಧಗಳನ್ನು ದೂರುತ್ತೇವೆ. ಸಂಗಾತಿಗಳನ್ನು ದೂರುತ್ತೇವೆ. ದೂರುವುದೇ ನಮಗೆ ಕೆಲಸ. ಇದರಿಂದ ಹದಗೆಡುವುದು ನಮ್ಮದೇ ಮನಸ್ಸು.  ಇದು ಬಹಳ […]