ಸಪ್ತಪದಿಯ ಏಳು ಹೆಜ್ಜೆಗಳು ಏನು ಹೇಳುತ್ತವೆ?

ವಿವಾಹ ಕಾಲದಲ್ಲಿ ನಡೆಸಲಾಗುವ ಸಪ್ತಪದಿ ಆಚರಣೆಯಲ್ಲಿ ವರನು ವಧುವಿಗೆ 7 ಕೋರಿಕೆಗಳನ್ನು ಮುಂದಿಡುತ್ತಾನೆ. ಪ್ರತಿಯೊಂದು ಕೋರಿಕೆಯನ್ನೂ ಒಂದು ಹೆಜ್ಜೆ ಮುಂದಿಡುವ ಮೂಲಕ ನೀಡಲಾಗುವ ಈ ಪ್ರಕ್ರಿಯೆಯನ್ನು ಸಪ್ತಪದಿ ಎಂದೇ ಕರೆಯಲಾಗಿದೆ. ಸಪ್ತಪದಿಯ 7 ಹೆಜ್ಜೆಗಳು ಸೂಚಿಸುವ ಈ ಕೋರಿಕೆಗಳೇನು, ನೋಡೋಣ…. ಮೊದಲನೆ ಹೆಜ್ಜೆ  ಓ ನನ್ನ ಹೃದಯ ಕದ್ದವಳೆ ನೀನು ಒಂದು ಹೆಜ್ಜೆ ಮುಂದಿಡು. ನೀನು ಕಾಲಿಟ್ಟ ಸ್ತಳದಲ್ಲೆಲ್ಲ ಅನ್ನ ಸಮೃದ್ದಿಯಾಗುವಂತೆಮಾಡು. ನನ್ನ ಸುಖದುಃಖಗಳಲ್ಲಿ ಜೊತೆಯಾಗಿ, ನನಗೆ ಅನುಕೂಲಕರ ಪತ್ನಿಯಾಗು. ನಮ್ಮ ಮುಂದಿನ ಬಾಳು ಹಸನಾಗುವಂತಾಗಲಿ. ಎರಡನೆ […]