ಈ ಮನ್ವಂತರದ ಸಪ್ತರ್ಷಿಗಳು ಯಾರು? : ಸನಾತನ ಸಾಹಿತ್ಯದ ಮೂಲಪಾಠಗಳು #51

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿ ಮತ್ತು ಪರಿಚಯವನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  

ಯಾವ ಮನ್ವಂತರದಲ್ಲಿ ಯಾರು ಸಪ್ತರ್ಷಿಗಳು ? : ಸನಾತನ ಸಾಹಿತ್ಯ ~ ಮೂಲಪಾಠಗಳು #35

ಸನಾತನ ಋಷಿಗಳ ಯಾದಿಯಲ್ಲಿ ಸಪ್ತರ್ಷಿಗಳಿಗೆ ವಿಶಿಷ್ಟ ಸ್ಥಾನವಿದೆ. ವಿವಿಧ ಮನ್ವಂತರಗಳಲ್ಲಿ ವಿವಿಧ ಋಷಿಗಳು ಮಂಡಲದಲ್ಲಿ ಉಲ್ಲೇಖಗೊಂಡಿದ್ದಾರೆ. ಕೆಲವು ಋಷಿಗಳು ಎಲ್ಲ ಮನ್ವಂತರದಲ್ಲೂ ಸಾಮಾನ್ಯವಾಗಿ ಕಾಣಸಿಗುತ್ತಾರೆ. ವಿವಿಧ ಸನಾತನ ಸಾಹಿತ್ಯದಲ್ಲಿ ಪ್ರಸ್ತುತ ಮನ್ವಂತರದ ಸಪ್ತರ್ಷಿಗಳ ಪಟ್ಟಿಯಲ್ಲಿ ವ್ಯತ್ಯಾಸವಿದ್ದು, ಅವು ಹೀಗಿವೆ: ಜೈಮಿನಿ ಬ್ರಾಹ್ಮಣದಲ್ಲಿ : ಅಗಸ್ತ್ಯ, ಅತ್ರಿ, ಭಾರದ್ವಾಜ, ಗೌತಮ, ಜಮದಗ್ನಿ, ವಸಿಷ್ಠ ಮತ್ತು ವಿಶ್ವಾಮಿತ್ರ ಬೃಹದಾರಣ್ಯಕ ಉಪನಿಷತ್ತಿನಲ್ಲಿ : ಗೌತಮ, ಭಾರದ್ವಾಜ, ವಿಶ್ವಾಮಿತ್ರ, ಜಮದಗ್ನಿ, ವಸಿಷ್ಠ, ಕಶ್ಯಪ, ಅತ್ರಿ ಮತ್ತು ಭೃಗು ಗೋಪಥ ಬ್ರಾಹ್ಮಣದಲ್ಲಿ : ಭಾರದ್ವಾಜ, […]