ಸಮಯ ವ್ಯರ್ಥ ಮಾಡದಿರೋಣ : ಈ ದಿನದ ಸುಭಾಷಿತ

“ಸಕಲ ಐಶ್ವರ್ಯಗಳನ್ನು ಕೊಟ್ಟರೂ ನಾವು ಒಂದು ಕ್ಷಣವನ್ನು ಕೂಡಾ ಮರಳಿ ಪಡೆಯಲಾರೆವು. ಆದ್ದರಿಂದ, ಸಮಯವನ್ನು ವೃಥಾ ವ್ಯಯ ಮಾಡುವುದು ದೊಡ್ಡ ಪ್ರಮಾದವೇ ಸರಿ” ಅನ್ನುತ್ತದೆ ಸುಭಾಷಿತ.

ಪ್ರತಿ ದಿನಕ್ಕೂ ತನ್ನದೇ ಸ್ವಾದವಿದೆ ~ ರೂಮಿ

ಸಮಯ ಸಾಲುವುದಿಲ್ಲ ಎಂಬ ಮಾತು ಇಲ್ಲಿ ಅಪ್ರಸ್ತುತ. ಯಾಕೆಂದರೆ ಇಲ್ಲಿ ಹೇಳುತ್ತಿರುವುದು ಪ್ರತಿಕ್ಷಣವನ್ನೂ ಆಸ್ವಾದಿಸು ಎಂದು. ಹಾಗಿರುವಾಗ ಅದಕ್ಕೆಂದೇ ಸಮಯ ಮೀಸಲಿಡುವ ಅಗತ್ಯವಾದರೂ ಹೇಗೆ ಬರುತ್ತದೆ? ~ ಸಾಕಿ ನಾಳೆಯ ಕೆಲಸ ಇಂದು ಮಾಡು, ಇಂದಿನ ಕೆಲಸ ಈ ಕೂಡಲೇ ಮಾಡು ಎಂದು ಹೇಳುವುದನ್ನು ಕೇಳಿದ್ದೇವೆ. ನಮ್ಮ ಜೀವನಶೈಲಿ ಎಷ್ಟೊಂದು ವೇಗವಾಗಿದೆ ಎಂಬುದನ್ನು ಈ ಮಾತು ಸೂಕ್ಷ್ಮವಾಗಿ ತೋರಿಸುತ್ತದೆ. ಆದರೆ ಇಂತಹ ಅತಿವೇಗದಿಂದಾಗಿ ನಾವು ಕಳೆದುಕೊಳ್ಳುತ್ತಿರುವ ಸಣ್ಣಪುಟ್ಟ ಖುಷಿಗಳಿಗೆ ಲೆಕ್ಕವಿಟ್ಟವರಿಲ್ಲ; ಅಲ್ಲವೇ? ಎಂದೇ ರೂಮಿ ಇದಕ್ಕೆಲ್ಲ ವ್ಯತಿರಿಕ್ತವಾಗಿ […]