ಅಧ್ಯಾತ್ಮ ಡೈರಿ : ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ….

ನೀರಿಗೆ ಬಿದ್ದಾಗ ಈಜುವುದು ಜಾಣತನ. ಅದನ್ನು ಬಿಟ್ಟು ನೀರಿಗೆ ಹೇಗೆ ಬಿದ್ದೆ, ಯಾಕೆ ಬಿದ್ದೆ, ಯಾರಾದರೂ ದೂಡಿದರೋ ನಾನೇ ಬಿದ್ದೆನೋ ಎಂದೆಲ್ಲ ಯೋಚಿಸುತ್ತ ಆ ಒಂದು ಘಟನೆಯನ್ನು ಸಮಸ್ಯೆಯನ್ನಾಗಿ ಮಾರ್ಪಡಿಸಿಕೊಳ್ಳುತ್ತೇವೆ! ~ ಅಲಾವಿಕಾ

ಸಮಸ್ಯೆ ಮತ್ತು ಪರಿಹಾರ : ಶಾಂತಿದೇವನ ನಿಶ್ಚಿಂತೆ ಸೂತ್ರ

“ಸಮಸ್ಯೆಗೆ ಪರಿಹಾರವಿದೆಯೇ? ಚಿಂತೆ ಬಿಡಿ. ಸಮಸ್ಯೆಗೆ ಪರಿಹಾರವಿಲ್ಲವೆ? ಚಿಂತೆ ಬಿಡಿ!” ಅನ್ನುತ್ತಾನೆ ಶಾಂತಿ ದೇವ. ನಾವೆಷ್ಟು ತಲೆಕೆಳಗು ಮಾಡಿ ನಿಂತರೂ ವಿಷಯ ಇರುವುದಿಷ್ಟೇ. ಪರಿಹಾರವಿದ್ದರೆ, ಅದನ್ನು ಹುಡುಕಿ, ಪ್ರಯತ್ನಿಸಿ ಮತ್ತು ಪ್ರಯೋಗಿಸಿ. ಪರಿಹಾರವಿಲ್ಲವಾದರೆ ಸುಮ್ಮನಿರಿ. ಎರಡೂ ಸಂದರ್ಭಗಳಲ್ಲೂ ಚಿಂತೆಗೇನು ಕೆಲಸ? ಅದು ನಿಮ್ಮ ಮನಸ್ಸನ್ನು ಕುಗ್ಗಿಸಿ ಜೀವನೋತ್ಸಾಹವನ್ನೆ ನುಂಗಿನೊಣೆಯುತ್ತದೆ. ಆದ್ದರಿಂದ, ಅನವಶ್ಯಕವಾದ, ನಿಷ್ಪ್ರಯೋಜಕವಾದ, ಮಾರಕವಾದ ಚಿಂತೆಯನ್ನು ದೂರವಿಡಿ. ಪ್ರಯತ್ನದಿಂದ ಸಿದ್ಧಿಸದೆ ಇರುವುದು ಯಾವುದೂ ಇಲ್ಲ. ಹಾಗೆಯೇ ಅರಿವಿನ ಮುಂದೆ ಯಾವ ಸಮಸ್ಯೆಯೂ ನಿಲ್ಲುವುದಿಲ್ಲ! ಆದ್ದರಿಂದ; ಶಾಂತಿದೇವನ ಸೂತ್ರವನ್ನು […]

ಸಮಸ್ಯೆಯ ಹೊರಗೆ ನಿಂತು ನೋಡಿ : ಅರಳಿಮರ ಸಂವಾದ

ನಾವು ಸಮಸ್ಯೆಯೊಳಗೆ ಇಳಿದುಬಿಟ್ಟರೆ ಅದರ ವ್ಯಾಪ್ತಿ ನಮಗೆ ತಿಳಿಯುವುದಿಲ್ಲ. ಅದನ್ನು ಹೊರಹಾಕುವ ಧಾವಂತದಲ್ಲಿ ಮತ್ತೇನನ್ನಾದರೂ ಕಳೆದುಕೊಳ್ಳುತ್ತೇವೆಯೋ ಅನ್ನುವ ಚಿಂತೆ ನಮ್ಮನ್ನು ಕಾಡತೊಡಗುತ್ತದೆ ~ ಚಿತ್ಕಲಾ ಬೇರೆಯವರ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಹೇಳುವ ನನಗೆ, ನನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನೇ ಪರಿಹಾರ ಹೇಳುವ ಸ್ಥಾನದಲ್ಲಿ ಇರುವುದರಿಂದ, ಬೇರೆಯವರನ್ನು ಕೇಳಲು ಮನಸ್ಸು ಬರುತ್ತಿಲ್ಲ. ಏಕೆ ಹೀಗಾಗುತ್ತದೆ? ಇದು ಹೆಸರು ಹೆಳಲು ಇಚ್ಛಿಸದ, ವೃತ್ತಿಯಿಂದ ಬ್ಯಾಂಕ್ ಉದ್ಯೋಗಿಯಾಗಿರುವ ಅರಳಿಮರ ಓದುಗರೊಬ್ಬರ ಪ್ರಶ್ನೆ. ಸರಿಯಾಗಿ ಗಮನಿಸಿದರೆ, ಈ ಪ್ರಶ್ನೆಯಲ್ಲೇ ಉತ್ತರವಿದೆ. […]

ಸಮಸ್ಯೆಯ ಮೂಲ ನಮ್ಮೊಳಗೇ ಇದೆ ಎಂದು ಒಪ್ಪಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ!

ವಾಸ್ತವವಾಗಿ ಕೊಳದ ನೀರು ನೆಲದ ಕಂಪನದಿಂದ ಕಲಕಿ ರಾಡಿಯಾಗುತ್ತ ಇರುತ್ತದೆ. ನಾವು ಮಾತ್ರ ಯಾರೋ ಹೊರಗಿನಿಂದ ಕಲ್ಲೆಸೆಯುತ್ತ ಇದ್ದಾರೆಂದು ದೂರುತ್ತೇವೆ. ಸಮಸ್ಯೆಯ ಮೂಲ ನಮ್ಮೊಳಗೇ ಇದೆ ಎಂಬುದನ್ನು ಕಂಡುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ…. ~ ಆನಂದಪೂರ್ಣ ಮನುಷ್ಯ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ, ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನ್ನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. ಜನರ ಗಮನ ಸೆಳೆಯಲು ತಂತ್ರಗಳನ್ನು ಹೂಡುತ್ತಾನೆ. ಇದು ಅತಿರೇಕಕ್ಕೆ ಹೋದಾಗಲೇ ಅಪರಾಧಗಳು ಸಂಭವಿಸುವುದು. ತನ್ನ ಅಹಂಕಾರ […]

ತಾವೋ ತಿಳಿವು #50 ~ ಸಂತನಿಗೆ ಸಮಸ್ಯೆಯೇ ಅಲ್ಲ!

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಕೆಲಸದಲ್ಲಿ ದುಡಿಮೆ ಬೇಡ, ಹೆದೆಯೇರಿಸಿದರೂ ಸ್ನಾಯುಗಳು ಮೈ ಮುರಿಯದಿರಲಿ, ಕಣ್ಣೀರಿನಲ್ಲಿ ಸಮುದ್ರ ಕಾಣಿಸಲಿ, ಕೆಲವನ್ನು ಹಲವೆಂದು ಬಗೆ, ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ದೊಡ್ಡ ಬೆಟ್ಟವನ್ನು ಹತ್ತು. ಮಹತ್ವಕ್ಕೆ ಕೈಚಾಚದಿರುವುದರಿಂದಲೇ ಸಂತ ಮಹಾತ್ಮನಾಗಿದ್ದಾನೆ; ಹುಲಿ ಏರಿ ಬಂದಾಗ ಅವ ಓಡಿ ಹೋಗುವುದಿಲ್ಲ ಅದನ್ನು ಹಾರಿ ತಬ್ಬಿಕೊಳ್ಳುತ್ತಾನೆ; ಪರಿಹಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂತೆಯೇ ಅವನಿಗೆ ಸಮಸ್ಯೆ, ಸಮಸ್ಯೆಯೇ ಅಲ್ಲ.