ಸಹಾಯ ಸ್ವೀಕರಿಸಿದವರಿಗೆ ಕೃತಜ್ಞರಾಗಿರಿ : ಸ್ವಾಮಿ ವಿವೇಕಾನಂದ

ಕೆಲವೊಮ್ಮೆ ನಾವು ಯಾರು ಯಾರಿಗೋ ಮಾಡಿದ ಸಹಾಯವನ್ನು ನೆನೆಯುತ್ತ “ಅವರಿಗೆ ಉಪಕಾರಸ್ಮರಣೆಯೇ ಇಲ್ಲ… ಅವರು ನನಗೆ ಕೃತಜ್ಞರಾಗಿರಬೇಕಿತ್ತು” ಎಂದೆಲ್ಲ ಗೊಣಗುತ್ತಾ ಇರುತ್ತೇವೆ. ವಾಸ್ತವದಲ್ಲಿ ಸಹಾಯ ಮಾಡುವುದು ನಮ್ಮ ಹೆಚ್ಚುಗಾರಿಕೆಯಲ್ಲ, ಅದು ಸಮಾಜಕ್ಕೆ ಪ್ರತಿಯಾಗಿ ನಮ್ಮ ಕರ್ತವ್ಯ. ಆದ್ದರಿಂದ, ಮತ್ತೊಬ್ಬರು ನಮ್ಮ ಸಹಾಯ ಸ್ಮರಿಸುತ್ತಾ ನಮ್ಮ ಹಿಡಿತದಲ್ಲಿ, ನಮ್ಮ ಮುಲಾಜಿನಲ್ಲಿ ಇರಬೇಕೆಂದು ಬಯಸುವುದು ನಮ್ಮ ವ್ಯಕ್ತಿತ್ವಕ್ಕೆ ಕುಂದು ತರುವ ಸಂಗತಿ.  ಇದಕ್ಕೆ ಸಂಬಂಧಿಸಿದಂತೆ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: ಸಮಾಜ ನಮಗೆ ಏನೆಲ್ಲವನ್ನೂ ನೀಡಿದೆ. ಅದಕ್ಕೆ ಪ್ರತಿಯಾಗಿ ನಮ್ಮ […]

ಎತ್ತರ ಬೆಳೆದರೆ ಏನು ಬಂತು, ಖರ್ಜೂರದ ಮರದಂತೆ!?

ಲೌಕಿಕ ಜಗತ್ತಿನಲ್ಲಿ ಹಣ ಗಳಿಕೆಯನ್ನೇ ಸಾಧನೆ ಎಂದು ಪರಿಗಣಿಸಲಾಗುತ್ತದೆ. ಅಥವಾ ಗೆಲುವುಗಳನ್ನು. ಯಾವುದೇ ಕ್ಷೇತ್ರದಲ್ಲಿ ಪಡೆಯುವ ಪದಕಗಳೇ ಸಾಧನೆಗಳಾಗುತ್ತವೆ. ಬಹಳ ಬಾರಿ ಇಂಥಾ ಸಾಧಕರು ನೋಡಲಿಕ್ಕಷ್ಟೇ ದೊಡ್ಡ ಮನುಷ್ಯರು. ಇವರಿಂದ ಸಮಾಜಕ್ಕಾಗಲೀ ತಮ್ಮ ಸುತ್ತಲಿನ ಜನಕ್ಕಾಗಲೀ ಏನೂ ಪ್ರಯೋಜನವಿಲ್ಲ. ಪರರ ಕಷ್ಟಕ್ಕೆ ಇವರು ಮಿಡಿಯುವುದಿಲ್ಲ. ಸಂತೈಸುವುದಿಲ್ಲ. ಹಣದ ಮಾತಿರಲಿ, ಕನಿಷ್ಠ ಕಾಳಜಿಯನ್ನೂ ತೋರುವುದಿಲ್ಲ. ಇಂಥ ‘ಸಾಧಕ’ರಿಂದ ಏನು ತಾನೆ ಪ್ರಯೋಜನ? –  ಇದು ಸಂತ ಕಬೀರರು ಕೇಳುವ ಪ್ರಶ್ನೆ.  ಖರ್ಜೂರದ ಮರದ ಉದಾಹರಣೆ ಕೊಟ್ಟು ತಮ್ಮ ದೋಹೆಯಲ್ಲಿ […]

ಹೆಸರು ಅಳಿಯುವ ಹೆದರಿಕೆ ಏಕೆ!?

ನಮ್ಮನ್ನು ನಾವು ಭೌತಿಕವಾಗಿ ಸಾಬೀತುಪಡಿಸಿಕೊಳ್ಳಲು ಹೆಸರಿನ ಗುರುತಿಗೆ ಮೊರೆ ಹೋಗುತ್ತೇವೆ. ಸಂಪೂರ್ಣವಾಗಿ ಅದರ ಮೇಲೆ ಅವಲಂಬಿತರಾಗುತ್ತೇವೆ. ನಾವು ನಮ್ಮ ಗುರುತಿನ ವಲಯದಿಂದ ಅಂತರ ಕಾಯ್ದುಕೊಂಡರೆ, ಅದರಿಂದ ಹೊರಗೆ ಬಂದರೆ ಎಲ್ಲಿ ಜನ ನಮ್ಮನ್ನು ಮರೆತುಬಿಡುತ್ತಾರೋ ಅನ್ನುವ ಅಭದ್ರತಾ ಭಾವ ಕಾಡತೊಡಗುತ್ತದೆ.  ಕಣ್ಣಿಗೆ ಕಾಣದ್ದನ್ನು ನಿರಾಕರಿಸಬೇಕು, ಯಾವುದು ವೈಚಾರಿಕವಾಗಿ ಸ್ಥಾಪಿತವೋ ವೈಜ್ಞಾನಿಕವಾಗಿ ಸಾಬೀತಾಗಿದೆಯೋ ಅದನ್ನು ಒಪ್ಪಬೇಕು ಎಂದು ಅತೀತಗಳನ್ನು ಆಚೆಗಿಟ್ಟು ವಾದ ಹೂಡುವ ನಾವು, ಕಣ್ಣಿಗೆ ಕಾಣುವ, ವೈಚಾರಿಕವಾಗಿಯೂ ವೈಜ್ಞಾನಿಕವಾಗಿಯೂ ಸ್ಥಾಪಿತವಾಗಿರುವ ಸಾವನ್ನು ಮಾತ್ರ ಒಪ್ಪಿಕೊಳ್ಳಲು ಹಿಂಜರಿಯುತ್ತೇವೆ. ಮಾತುಕತೆಯಲ್ಲಿ […]