ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ?

ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ ಎಂದು ಜನಕ ರಾಜ ಕೇಳುವ ಪ್ರಶ್ನೆಗೆ ಅಷ್ಟಾವಕ್ರ ನೀಡುವ ಉತ್ತರ ಹೀಗಿದೆ…. ~ ಸಾ.ಹಿರಣ್ಮಯಿ

ಅಷ್ಟಾವಕ್ರ ಗೀತಾ : ಈವರೆಗಿನ ಸಂಚಿಕೆಗಳು

ಈವರೆಗೆ ಅಷ್ಟಾವಕ್ರ ಗೀತೆಯ 14 ಶ್ಲೋಕಗಳ ಅರ್ಥ ಮತ್ತು ತಾತ್ಪರ್ಯ ಪ್ರಕಟವಾಗಿದ್ದು, ಅವುಗಳ ಕೊಂಡಿಯನ್ನು ಒಟ್ಟಿಗೆ ನೀಡಲಾಗಿದೆ. ಬರುವ ದಿನಗಳಲ್ಲಿ ಅಷ್ಟಾವಕ್ರ ಗೀತೆಯ ಸರಣಿ ನಿರಂತರವಾಗಿ ಮುಂದುವರಿಯಲಿದೆ ~ ಸಾ.ಹಿರಣ್ಮಯಿ ಒಂದು ನಡು ಮಧ್ಯಾಹ್ನ ಜನಕ ಮಹಾರಾಜ ಆಸ್ಥಾನದಲ್ಲಿ ಕುಳಿತಿದ್ದ. ಹಾಗೇ ನಿದ್ರೆಯ ಜೊಂಪು ಹತ್ತಿತು. ಆ ನಿದ್ರೆಯಲ್ಲಿ ಸಣ್ಣದೊಂದು ಕನಸು. ಆ ಕನಸಿನಲ್ಲಿ ಜನಕ ಮಹಾರಾಜ ಊಟಕ್ಕಾಗಿ ಯಾರ ಬಳಿಯೋ ಯಾಚಿಸುತ್ತಿದ್ದಾನೆ. ಆದರೆ ಅವರು ಕೈಯಾಡಿಸಿ ಹೊರಟುಹೋಗುತ್ತಿದ್ದಾರೆ. ಒಂದೆಡೆ ಹಸಿವು, ಮತ್ತೊಂದೆಡೆ ನಿರಾಕರಣೆಯ ಸಂಕಟ. ಈ ನೋವು […]

ಭಗವದ್ಗೀತೆ; ಅಧ್ಯಾಯ 12 ಮತ್ತು 13 : ಸನಾತನ ಸಾಹಿತ್ಯ ~ ಮೂಲಪಾಠಗಳು #20

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 12 : ಭಕ್ತಿಯೋಗ ಭಗವಂತನು ಈ ಪ್ರಪಂಚವನ್ನು ಸೃಷ್ಟಿ ಮಾಡಿ, ಹದಿನೈದು ಬೇಲಿಗಳ ಸಂಸಾರದಲ್ಲಿ ಜೀವವನ್ನು ಇಟ್ಟ. ಈ ಹದಿನೈದು ಬೇಲಿಗಳೆಂದರೆ – ಶ್ರದ್ಧೆಯ ಬೇಲಿ, ಪಂಚಭೂತಗಳ ಬೇಲಿ (ಒಟ್ಟು 5), ಇಂದ್ರಿಯಗಳ ಬೇಲಿ, ಅಂತಃಕರಣದ ಬೇಲಿ, ಅನ್ನದ ಬೇಲಿ, ವೀರ್ಯದ ಬೇಲಿ, […]

ಮಾಸ್ತಿಯವರ ಅಂತರಗಂಗೆಯಿಂದ; ವೇದ – ಸಂಹಿತೆಗಳು ~ ಭಾಗ 1

ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರ ಪರಿಚಯ ಸರಣಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಅಂತರಗಂಗೆ’ ಕೃತಿಯ ಆಯ್ದ ಅಧ್ಯಾಯಗಳನ್ನು ಪ್ರಕಟಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೊದಲ ಕಂತು ವೇದಗಳ ಪರಿಚಯ. ಈ ಸಂಚಿಕೆಯಲ್ಲಿ ಸಂಹಿತೆಗಳ ಬಗೆಗಿನ ಲೇಖನದ ಮೊದಲ ಕಂತನ್ನು ನೀಡಲಾಗಿದೆ.  ಪ್ರಾಚೀನ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪರಿಚಯಿಸುವ ಕೃತಿ ‘ಅಂತರಗಂಗೆ’. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇದರ ಕರ್ತೃ. ವೇದೋಪನಿಷತ್ತುಗಳು, ಪುರಾಣಗಳು, ಪ್ರಮುಖ ಋಷಿಗಳು, ಜನಪದಗಳೆಲ್ಲದರ ಕಿರುಪರಿಚಯವನ್ನು ಈ ಕೃತಿಯು ಮಾಡಿಸುತ್ತದೆ. ಇಲ್ಲಿ ಕಿರುಪರಿಚಯವೆಂದರೆ, […]

ನಾವೇಕೆ ಗ್ರೀಕ್ ಪುರಾಣ ಕಥೆಗಳ ಸರಣಿ ಪ್ರಕಟಿಸುತ್ತಿದ್ದೇವೆ?

ಅರಳಿಮರ ಕಳೆದ ಕೆಲವು ದಿನಗಳಿಂದ ಗ್ರೀಕ್ ಪುರಾಣ ಕಥೆಗಳಸರಣಿಯನ್ನು ಪ್ರಕಟಿಸುತ್ತಿದೆ. ಇದಕ್ಕೆ ಅಂತಹಾ ಗಹನ ಕಾರಣಗಳೇನೂ ಇಲ್ಲ. ನೇರವಾಗಿ ಮತ್ತು ಸರಳವಾಗಿ ಹೇಳುವುದಾದರೆ ಜಗತ್ತಿನ ಬೇರೆಬೇರೆ ಭಾಗಗಳ ಕತೆಗಳನ್ನು ಓದಿಸುವುದಷ್ಟೆ ನಮ್ಮ ಮುಖ್ಯ ಉದ್ದೇಶ. ಇತ್ತೀಚಿನ ವರ್ಷಗಳಲ್ಲಿ ನಾವು ಕಥೆಗಳನ್ನು ಕಥೆಗಳನ್ನಾಗಿಯೇ ಓದುವ ಅಭ್ಯಾಸವನ್ನೇ ಬಿಟ್ಟುಬಿಟ್ಟಿದ್ದೇವೆ. ಪ್ರತಿಯೊಂದರಲ್ಲೂ ಏನಾದರೊಂದನ್ನು ಹುಡುಕುವುದು ನಮಗೆ ರೂಢಿಯಾಗಿಬಿಟ್ಟಿದೆ. ನೀತಿಯನ್ನೋ, ಮೌಲ್ಯವನ್ನೋ, ಸಂದೇಶವನ್ನೋ, ಒಳಿತನ್ನೋ, ಕೆಡುಕನ್ನೋ ನಾವು ಅಲ್ಲಿ ಹುಡುಕಲೇ ಬೇಕು. ಇದೊಂದು ಬೌದ್ಧಿಕ ಕಸರತ್ತು ಅಷ್ಟೇ. ಏಕೆಂದರೆ, ಹಾಗೆ ಕಥೆಗಳಿಗೆ ಏನಾದರೊಂದು […]