ಗರುಡನಿಗೂ ಸರ್ಪಗಳಿಗೂ ವೈರವೇಕೆ? ಕದ್ರು ತನ್ನದೇ ಮಕ್ಕಳಿಗೆ ಶಾಪ ಕೊಟ್ಟಿದ್ದೇಕೆ!?

ಪ್ರಜಾಪತಿ ಕಶ್ಯಪನ ಅನೇಕಾನೇಕ ಪತ್ನಿಯರಲ್ಲಿ ಕದ್ರು ಮತ್ತು ವಿನತೆಯೂ ಇದ್ದರು. ಕದ್ರುವಿಗೆ ಸರ್ಪಗಳು ಮಕ್ಕಳಾಗಿ ಹುಟ್ಟಿದರು. ವಿನತೆಗೆ ಅರುಣ ಮತ್ತು ಗರುಡ ಮಕ್ಕಳಾದರು. ಮುಂದೆ ಅಂಗ ನ್ಯೂನತೆಯಿದ್ದ ಅರುಣನು ಸೂರ್ಯನ ಸಾರಥಿಯಾದನು. ಗರುಡನು ಮಹಾಶಕ್ತಿಶಾಲಿಯಾಗಿ ಬೆಳೆದನು. ಕಾಲಾಂತರದಲ್ಲಿ ದೇವಾಸುರರು ಸೇರಿ ಅಮೃತ ಪಡೆಯಲೆಂದು ಸಾಗರ ಮಥನ ನಡೆಸಿದರು. ಅಮೃತಕ್ಕೆ ಮೊದಲು ಹೊರಬಂದ ಅಮೂಲ್ಯ ಉಚ್ಚೈಶ್ರವಸ್ ಎಂಬ ಕುದುರೆಯೂ ಇತ್ತು. ಆ ಕುದುರೆ ಹಾಲಿನಂತೆ ಬೆಳ್ಳಗಿತ್ತು. ಅತ್ಯಾಕರ್ಷವಾಗಿತ್ತು. ಅದನ್ನು ನೋಡಲೆಂದೇ ಮೂರು ಲೋಕಗಳಿಂದ ದೇವ ದಾನವ ಮನುಷ್ಯರೂ ತಂಡೋತಂಡವಾಗಿ […]

ತನ್ನನ್ನೇ ತಾನು ಬದುಕಿಸಿಕೊಂಡ ಅಸ್’ಕ್ಲೀಪಿಯಸ್ : ಗ್ರೀಕ್ ಪುರಾಣ ಕಥೆಗಳು  ~ 33

ಅಪೋಲೋನ ಅವಕೃಪೆಗೆ ಪಾತ್ರಳಾಗಿ ಸತ್ತ ಕೊರೊನಿಸಾಳ ಹೊಟ್ಟೆಯ ಭ್ರೂಣವನ್ನು ಹರ್ಮಿಸ್ ಬದುಕಿಸಿದ ಕಥೆಯನ್ನು (ಕೊಂಡಿ ಇಲ್ಲಿದೆ: ) ಓದಿದ್ದೀರಿ. ಮುಂದೆ ಈ ಮಗುವೇ ದೇವ ವೈದ್ಯ ಅಸ್’ಕ್ಲೀಪಿಯಸ್ ಎನ್ನುತ್ತದೆ ಗ್ರೀಕ್ ಪುರಾಣಕಥನದ ಒಂದು ಪಠ್ಯ. ಪಾಠಾಂತರದ ಪ್ರಕಾರ ಬೇರೊಂದೇ ಕಥೆ ಇದ್ದು, ಅದು ಹೀಗಿದೆ: ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಉತ್ತರ ಥೆಸಲಿಯಲ್ಲಿ ಲ್ಯಾಪಿತ ಜನಾಂಗದ ಪಾರಮ್ಯವಿತ್ತು. ದೊರೆ ಫ್ಲೆಜಿಯಸ್ ಅದರ ಆಳ್ವಿಕೆ ನಡೆಸುತ್ತಿದ್ದ. ಆತನ ಮಗಳು ಕೊರೊನಿಸಾ ಪರಮ ಸುಂದರಿ. ಅವಳ ಸೌಂದರ್ಯದ […]

ಹೈಡ್ರಾ ಸರ್ಪ ಮತ್ತು ಹೆರಾಕ್ಲೀಸ್ ಮುಖಾಮುಖಿ  :  ಗ್ರೀಕ್ ಪುರಾಣ ಕಥೆಗಳು  ~ 17

ಹೆರಾಕ್ಲೀಸ್  ಅಯೊಲಾಸನೊಡನೆ ಸೇರಿ ಹೈಡ್ರಾ ಸರ್ಪದ ತಲೆಗಳನ್ನು ಕಡಿದು, ಕೊಂದುಹಾಕಿದ. ಈ ಮೂಲಕ ಯೂರಿಸ್ತ್ಯೂಸ್ ನೀಡಿದ ಎರಡನೇ ಪರೀಕ್ಷೆಯನ್ನೂ ಗೆದ್ದುಕೊಂಡ .  (ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ) ಹೆರಾಕ್ಲೀಸನ ಮೇಲೆ ಮತ್ಸರ ತಾಳಿದ್ದ ಹೀರಾದೇವಿಯು ಯೂರಿಸ್ತ್ಯೂಸನ ಜೊತೆ ಸೇರಿ ಪಿತೂರಿ ಹೂಡಿದ್ದಳು. ಯೂರಿಸ್ತ್ಯೂಸನ ಗುಲಾಮನಾಗಿದ್ದ ಹೆರಾಕ್ಲೀಸನಿಗೆ 12 ಕಠಿಣತರ ಕೆಲಸಗಳನ್ನು ಕೊಡುವಂತೆ ಸೂಚಿಸಿದ್ದಳು. ಅದರಂತೆ ಮೊದಲನೆಯದಾಗಿ ನೆಮಿಯಾದ ಸಿಂಹವನ್ನು ಕೊಲ್ಲಬೇಕು ಎನ್ನುವುದಾಗಿತ್ತು. ಅದನ್ನು ಹೆರಾಕ್ಲೀಸ್ ನಿರಾಯಾಸವಾಗಿ ನೆರವೇರಿಸಿದ. ಈಗ, ಎರಡನೆಯದಾಗಿ ಯೂರಿಸ್ತ್ಯೂಸ್ ಹೈಡ್ರಾ ಸರ್ಪವನ್ನು ಕೊಲ್ಲುವಂತೆ […]