ಸಹಜ, ಸಾಮಾನ್ಯ : ತಾವೋ ಧ್ಯಾನ ~ 11

ಅಧ್ಯಾತ್ಮ ನೀವು ಆಡುವ ಚೆಂಡಿನಾಟದಂತೆ, ನೀವು ಮಾಡುವ ಕೆಲಸದಂತೆ, ನೀವು ಮಾಡಿದ ಪ್ರೇಮದಂತೆ, ಉಣ್ಣುವ ಊಟದಂತೆ ಅಷ್ಟೇ ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಬೆಳಕು, ಬಯಲು, ಆಕಾಶ ದಿವ್ಯಕ್ಕೆ ಭಾಷೆಯಿಲ್ಲ. ಸಾಮಾನ್ಯದಲ್ಲಿಯೇ ಅಸಾಮಾನ್ಯದ ವಿಳಾಸ. ಸಾಮಾನ್ಯಕ್ಕೆ ಹೋಲಿಸದೆ ಯಾರಿಗೂ ಅಧ್ಯಾತ್ಮವನ್ನು ವಿವರಿಸಲು ಆಗುವುದೇ ಇಲ್ಲ. ಒಂದು ಶಾಸ್ತ್ರ,  ದಿವ್ಯವನ್ನು  “ಅನುಗ್ರಹ” ಎಂದು ವರ್ಣಿಸಿದರೆ  ಇನ್ನೊಂದು ಶಾಸ್ತ್ರ “ಬೆಳಕು” ಎಂದು ವ್ಯಾಖ್ಯಾನ ಮಾಡುತ್ತದೆ. ಸ್ವರ್ಗವೂ ಆಕಾಶದಲ್ಲಿಯೇ ಇದೆಯಂತೆ, ಕಾಮವನ್ನು ನಿರಾಕರಿಸುವ ಸಾಧಕರು ಕೂಡ ಜ್ಞಾನೋದಯವನ್ನು ವಿವರಿಸಲು […]

ಮೈಕೇಲ್ ಏಂಜೆಲೋ ನೀಡಿದ ಉತ್ತರ

ಪ್ರಸಿದ್ಧ ಶಿಲ್ಪ ಕಲಾವಿದ ಮೈಕೇಲ್ ಎಂಜೆಲೋನ ಕಲಾಕೇಂದ್ರಕ್ಕೆ ಒಮ್ಮೆ ಕಲಾಪ್ರೇಮಿ ಸಂದರ್ಶಕನೊಬ್ಬ ಬಂದನಂತೆ. ಮೈಕೇಲ್ ತಾನು ಸದ್ಯ ತಯಾರಿಸುತ್ತಿದ್ದ ಮೂರ್ತಿಯನ್ನು ಕುರಿತು ವಿವರಿಸುತ್ತಿದ್ದ. ಆ ಮೂರ್ತಿಯ ನಿರ್ಮಾಣ ಕಾರ್ಯವನ್ನು ನೋಡಲು ಅದೇ ಸಂದರ್ಶಕ ಹಿಂದೆಯೂ ಒಮ್ಮೆ ಬಂದಿದ್ದ. ಅವನು ಬಂದು ಹೋದಾಗಿನಿಂದ ಏನೆಲ್ಲ ಕೆಲಸಗಳು ನಡೆದವು ಎಂಬುದನ್ನು ಮೈಕೇಲ್ ವಿವರಿಸಿದ : “ಆ ಭಾಗವನ್ನು ಸ್ವಲ್ಪ ಬದಲಿಸಿದೆ, ಕೈಗಳ ಮಾಂಸಖಂಡ ಬಲಿಷ್ಠವಾಗಿ ತೋರುವಂತೆ ಮಾಡಿದೆ, ತುಟಿಗಳಲ್ಲಿ ಕೊಂಚ ಭಾವ ಪ್ರಕಾಶವಾಗುವ ಹಾಗೆ ಮಾಡಿದೆ, ಕಾಲುಗಳು ಶಕ್ತವಾಗಿ ಕಾಣುವಂಥ […]