ಸಾವಿಗಿಂತ ದೊಡ್ಡ ಶಿಕ್ಷಕ ಮತ್ತೊಂದಿಲ್ಲ. ಮಹಾಭಾರತದಲ್ಲಿ ಒಂದು ಮಾತು ಬರುತ್ತದೆ. “ದಿನದಿನವೂ ಜನ ಸಾಯುವುದನ್ನು ನೋಡಿದರೂ ತಮಗೆ ಸಾವೇ ಇಲ್ಲ ಅನ್ನುವಂತೆ ಆಡುವವರನ್ನು ನೋಡುವುದಕ್ಕಿಂತ ದೊಡ್ಡ ಆಶ್ಚರ್ಯವೇನಿದೆ?” ಎಂದು.
ಬಾಶೋನ ಒಂದು ಸಾವಿನ ಪದ್ಯ
ಹೈಕು ಕವಿ ಬಾಶೋನ ಸಾವಿನ ಪದ್ಯ, ಕನ್ನಡಕ್ಕೆ : ಚಿದಂಬರ ನರೇಂದ್ರ
ಹಳಿಯ ಮೇಲೆ ಹಾದುಹೋಯ್ತು ಸಾವಿನ ರೈಲು : ಕೊರೊನಾ ಕಾಲದ ಕಥೆಗಳು #6
ಬೇರೆ ದಾರಿಯಾದರೂ ಏನಿತ್ತು? ಅಷ್ಟು ದೂರ ಜೊತೆ ಸಾಗಿ ಬಂದಿದ್ದ ಗೆಳೆಯರು ಈಗ ಇಲ್ಲ… ಅದೂ ಎಂಥಾ ದುರಂತ ಸಾವು! ಶಿವಬಾನನ ಕಣ್ಣೆದುರೇ ಮುನ್ನುಗ್ಗಿ ಬಂದ ಗೂಡ್ಸ್ ರೈಲು ಅವನು ಬಾಯಿ ತೆರೆಯುವುದರೊಳಗೆ ಆ ಹದಿನಾಲ್ಕು ಜನರ ಮೇಲೆ ಹರಿದುಹೋಗಿತ್ತು. ಅವರ ದೇಹಗಳು ಕತ್ತರಿಸಿ ಹಳಿಯ ಆಚೀಚೆ ಛಿದ್ರವಾಗಿ ಬಿದ್ದವು. ಆ ಹೊಡೆತಕ್ಕೆ ಅವರು ಕೂಗಿದರೋ ಇಲ್ಲವೋ…. ಅದು ಕೆಳದಷ್ಟು ದೂರದಲ್ಲಿ ಒಂದು ಮರದ ಕೆಳಗೆ ಉಸಿರುಗಟ್ಟಿಕೊಂಡು ನೋಡುತ್ತಿದ್ದ ಶಿವಬಾನ್… | ಚೇತನಾ ತೀರ್ಥಹಳ್ಳಿ
ಸಾವಿನ ಮನೆ ತಲುಪಿಸಿದ ಪಯಣ… : ಕೊರೊನಾ ಕಾಲದ ಕಥೆಗಳು #1
ಇನ್ನು ಮೂವತ್ತೇಮೂವತ್ತು ಕಿಲೋಮೀಟರ್ ಹೆಜ್ಜೆ ಹಾಕಿದ್ದರೆ ಹೈಸರ್ ತಲುಪಿಬಿಡುತ್ತಿದ್ದ. ಈ ದುರಿತ ಕಾಲದಲ್ಲಿ ಮುಂಬಯಿಯಿಂದ ಉತ್ತರಪ್ರದೇಶಕ್ಕೆ ಪ್ರಯಾಣಿಸಿ ಮನೆ ತಲುಪುವುದು ಅಂದರೆ ಸುಮ್ಮನೆ ಮಾತೇ? ರಾಮ್ ಕೃಪಾಲ ಮನಸು ಮಾಡಿಬಿಟ್ಟಿದ್ದ. ತಾನು ಆಗಾಗ ಮಾಡುವಂತೆ ಕಬೀರರ ದೋಹೆ ಗುನುಗುತ್ತಾ ಉಲ್ಲಾಸ ತುಂಬಿಕೊಂಡ. ಆದರೆ…. | ಚೇತನಾ ತೀರ್ಥಹಳ್ಳಿ
ಸಾವನ್ನು ಕಲಿಯುವುದು ಎಂದರೆ….
ನಮಗೆ ಸಾಯಲಿಕ್ಕೂ ಅಹಂತೃಪ್ತಿಯಾಗಬೇಕು! : ಅಧ್ಯಾತ್ಮ ಡೈರಿ
ಒಳಿತಿನೆಡೆಗೆ ಇರಲಿ ನಡಿಗೆ : ಬೃಹದಾರಣ್ಯಕ ಉಪನಿಷತ್
ಹುಳುಗಳು ಕೂಡಾ ತಮ್ಮ ರೆಕ್ಕೆ ಸುಟ್ಟರೂ ದೀಪವನ್ನರಸಿ ಬರುತ್ತವೆ. ಹೀಗಿರುವಾಗ, ನಾವು ಮನುಷ್ಯರೇಕೆ ಕತ್ತಲಲ್ಲಿ ಕೊಳೆಯಬೇಕು? ಅಸತೋಮಾ ಸದ್ ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ಅನ್ನುತ್ತದೆ ಬೃಹದಾರಣ್ಯಕ ಉಪನಿಷತ್ತು. ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನಮ್ಮನ್ನು ನಡೆಸು ಎನ್ನುವ ಪ್ರಾರ್ಥನೆ ಇದು. ನಮ್ಮ ದೈನಂದಿನ ಬದುಕಿಗೂ ಈ ಪ್ರಾರ್ಥನೆ ಮಾರ್ಗಸೂಚಿಯಾಗಿದೆ. ನಮ್ಮ ನಡಿಗೆ ಎಲ್ಲಿಂದ ಎಲ್ಲಿಗೆ ಇರಬೇಕು ಎನ್ನುವುದನ್ನು ಇದು ಸೂಚಿಸುತ್ತದೆ. ನಾವು ನಮ್ಮ ಹೆಸರು, ಹುದ್ದೆ, ಸಂಪತ್ತು ಮೊದಲಾದವುಗಳಿಂದ ನಮ್ಮನ್ನು ಗುರುತಿಸಿಕೊಳ್ಳುತ್ತಾ […]
ಸಾವಿಗೆ ನಮ್ಮ ಸ್ಪಂದನೆ ಹೇಗಿರಬೇಕು?
ಮುಖ್ಯವಾಗಿ ಭಗವದ್ಗೀತೆ ಮಾಡುವುದು ಇದನ್ನೇ. ಸಾವೆಂಬ ಶಾಶ್ವತ ಸತ್ಯವನ್ನು ಅದು ನಮ್ಮ ಮುಖದ ಮುಂದೆ ಹಿಡಿಯುತ್ತದೆ. ನಮ್ಮ ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದೇ ನಮ್ಮ ಆಪ್ತೇಷ್ಟರ ಮತ್ತು ಇತರರ ಸಾವನ್ನು ಎದುರುಗೊಳ್ಳುವ, ಅದಕ್ಕೆ ನ್ಯಾಯ ಸಲ್ಲಿಸುವ ಸಮರ್ಥ ಮಾರ್ಗವೆಂದು ಮನದಟ್ಟು ಮಾಡುತ್ತದೆ ~ ಸಾ.ಹಿರಣ್ಮಯಿ ಮಾಗಿದ ಹಣ್ಣು ತೊಟ್ಟು ಕಳಚಿ ಬೀಳುವುದಕ್ಕೂ, ಅದನ್ನು ಕಿತ್ತು ತಿನ್ನುವುದಕ್ಕೂ, ಕಲ್ಲು ಬೀಸಿ ಅದರ ಮೈತುಂಬ ಗಾಯ ಮಾಡಿ ನುಜ್ಜುಗುಜ್ಜಾಗಿಸುವುದಕ್ಕೂ ವ್ಯತ್ಯಾಸವಿದೆ. ಈ ಯಾವುದೇ ಬಗೆಯಲ್ಲಿ ಹಣ್ಣು ಕಳಚಿಬಿದ್ದರೂ ಕಳೆದುಕೊಳ್ಳುವುದು ಮರವೇ. […]
ಮನುಷ್ಯರ ಸಾವು ನಿಕ್ಕಿಯಾಗಿದ್ದು ಹೇಗೆ? : ಝುಲು ಜನಪದ ಕಥೆ
ಒಮ್ಮೆ ಉನ್’ಲುಕುಲು ದೇವರು ದೇವಲೋಕದಿಂದ ಎದ್ದು ಬಂದು, ಮನುಷ್ಯರನ್ನೂ, ಪ್ರಾಣಿಗಳನ್ನೂ, ಹಾವು, ಮೀನು, ಪಕ್ಷಿ ಇತ್ಯಾದಿಗಳನ್ನೂ ಸೃಷ್ಟಿ ಮಾಡಿದ. ಆಮೇಲೆ ಗೋಸುಂಬೆಯನ್ನು ಕರೆದು, “ಹೋಗು! ಮನುಷ್ಯರ ಬಳಿ ಹೋಗಿ ನಿಮಗೆ ಸಾವಿಲ್ಲ ಎಂದು ತಿಳಿಸು” ಅಂತ ಆದೇಶ ನೀಡಿದ. ಗೋಸುಂಬೆ ಹೊರಟಿತು. ಅದರ ನಡಿಗೆ ನಿಧಾನ. ಹೆಚ್ಚೂಕಡಿಮೆ ತೆವಳಿದಂತೆ ಸಾಗುತ್ತಾ, ದಾರಿಯಲ್ಲಿ ಹಸಿವಾಗಿ ಬಕ್ವೆಬೆಜೇನ್ ಎಂಬ ಗಿಡವನ್ನು ತಿನ್ನುತ್ತಾ ಕುಳಿತುಕೊಂಡಿತು. ಗೋಸುಂಬೆ ಹೋಗಿ ಬಹಳ ಕಾಲವಾದ್ದರಿಂದ, ದೇವರು ಕಪ್ಪೆಯನ್ನು ಕರೆದು, “ಹೋಗು! ಮನುಷ್ಯರ ಬಳಿ ಹೋಗಿ ನಿಮಗೂ […]
ಸಾವನ್ನು ಕಲಿಯುವುದು ಎಂದರೆ…
ಅದು ದುರಂತ ಸಾವಿರಲಿ, ಸಹಜ ಸಾವು…. ಶೋಕದಲ್ಲಿ ಮಿಡಿಯುವುದು ಮಾನವ ಸಹಜ ಗುಣ. ಅದು ಮಾನವೀಯತೆಯ ಗುಣ. ಅದರ ಕಾರಣಗಳನ್ನು ಚರ್ಚಿಸುವುದು ಸಾಮಾಜಿಕ ಜವಾಬ್ದಾರಿ ಕೂಡಾ. ಈ ಗುಣವನ್ನು ಒಳಗೊಳಿಸಿಕೊಂಡೇ, ಈ ಜವಾಬ್ದಾರಿಯನ್ನು ಪಾಲಿಸುತ್ತಲೇ, ನಾವು ಸಾವನ್ನು ಕಲಿಯಬೇಕಿದೆ. ಇಲ್ಲವಾದರೆ ಈ ಮಿಡಿತಕ್ಕೆ, ಶೋಕಕ್ಕೆ ಯಾವ ಅರ್ಥವೂ ಇರುವುದಿಲ್ಲ ~ ಗಾಯತ್ರಿ ಬೆಳಗನ್ನು ಯಾರೂ ಸಾವಿನ ಉಲ್ಲೇಖದೊಡನೆ ಮಾಡಲು ಇಷ್ಟ ಪಡುವುದಿಲ್ಲ. ಏಕೆಂದರೆ ಬೆಳಗು ಒಂದು ಆರಂಭ; ಮತ್ತು ಸಾವು, ಒಂದು ಅಂತ್ಯ. ಇಲ್ಲಿ ‘ಒಂದು’ ಆರಂಭ, […]