ಧರ್ಮ ಸ್ಮೃತಿಗಳು ಎಷ್ಟಿವೆ? ಅವು ಯಾವುವು ? ~ ಸನಾತನ ಸಾಹಿತ್ಯ ಮೂಲ ಪಾಠಗಳು #48

ಹಿಂದೂ ಧಾರ್ಮಿಕ ಸಾಹಿತ್ಯವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಎಂದು ಎರಡು ಭಾಗವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ವೇದೋಪನಿಷತ್ತುಗಳು ಅತ್ಯಂತ ಪ್ರಾಚೀನವೂ ಅಧಿಕಾರಯುತವೂ ಆಗಿವೆ. ವೇದ, ಉಪನಿಷತ್ತು, ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು – ಇವೆಲ್ಲ ‘ಶ್ರುತಿ’ಗಳಾಗಿವೆ. ಪುರಾಣ, ಆಗಮ, ಶಾಸ್ತ್ರಗ್ರಂಥಗಳು ‘ಸ್ಮೃತಿ’ಗಳೆಂದು ಕರೆಸಿಕೊಳ್ಳುತ್ತವೆ. ಭಗವದ್ಗೀತೆಯು ಭಗವಂತನಿಂದ ಹೇಳಲ್ಪಟ್ಟಿರುವುದರಿಂದ ‘ಶ್ರುತಿ’ಯಾಗಿಯೂ, ಮಹಾಭಾರತ ಮಹಾಕಾವ್ಯದಲ್ಲಿ ವ್ಯಾಸರ ಮೂಲಕ ಬರೆಯಲ್ಪಟ್ಟಿರುವುದರಿಂದ ‘ಸ್ಮೃತಿ’ಯಾಗಿಯೂ ಪರಿಗಣಿಸಲ್ಪಡುತ್ತದೆ. ಸ್ಮೃತಿಗಳಲ್ಲಿ ಆಯಾ ಕಾಲಘಟ್ಟಕ್ಕೆ ಸೂಕ್ತವಾದ ರೀತಿ ನೀತಿಗಳನ್ನೂ, ನಡೆ – ನಿಯಮಾವಳಿಗಳನ್ನೂ ಸೂಚಿಸುವ ವಿಭಾಗಕ್ಕೆ ‘ಧರ್ಮ ಸ್ಮೃತಿ’ಗಳೆಂದು […]

ದಶನಾಮಿ ಪದ್ಧತಿ| ಸನಾತನ ಸಾಹಿತ್ಯ ~ ಮೂಲಪಾಠಗಳು #45

ಸನ್ಯಾಸದಲ್ಲಿ ನಾಲ್ಕು ವಿಧಗಳು. ಕುಟಿಚಕ, ಬಹುಚಕ, ಹಂಸ ಮತ್ತು ಪರಮಹಂಸ. ಶಂಕರಾಚಾರ್ಯರು ದಶನಾಮಿ ಪದ್ಧತಿಯನ್ನು ಪರಿಚಯಿಸಿದರು. 1.ತೀರ್ಥ  2.ಆಶ್ರಮ  3.ವನ  4.ಅರಣ್ಯ  5. ಗಿರಿ 6.ಪರ್ವತ 7ಸಾಗರ 8.ಸರಸ್ವತಿ 9.ಭಾರತೀ ಮತ್ತು 10. ಪುರೀ – ಇವು ಸಂನ್ಯಾಸ ಪರಂಪರೆಯ ಹತ್ತು ಉಪಾಧಿಗಳು.  ಈ ದಶನಾಮಗಳನ್ನು ಯಾರಿಗೆ ನೀಡಲಾಗುತ್ತದೆ ಅನ್ನುವ ಕಿರು ವಿವರ ಮುಂದಿದೆ : ಭಾರತೀ ನಾಮ ವಿದ್ಯಾಭಾರೇಣ ಸಂಪೂರ್ಣಃ ಸರ್ವಭಾರಂ ಪರಿತ್ಯಜೇತ್ | ದುಃಖ ಭಾರಂ ನ ಜಾನತಿ ಭಾರತೀ ಪರಿಕೀರ್ತಿತಃ || ಯಾವ […]

ಮಹಾಭಾರತ ವಂಶಾವಳಿ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #43

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 6ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM  ಹಿಂದಿನ ಭಾಗ ಇಲ್ಲಿ ಓದಿ : https://aralimara.com/2018/11/17/vamsha/ ಶಂತನುವು ಗಂಗೆ ಭಾಗೀರಥಿಯನ್ನು ವಿವಾಹವಾದನು. ಅವಳಲ್ಲಿ ದೇವವ್ರತನು ಜನಿಸಿದನು. ಅವನನ್ನು ಭೀಷ್ಮ ಎಂದು ಕರೆದರು. ತನ್ನ ತಂದೆಗೆ ಪ್ರಿಯವಾದದ್ಡನ್ನು ಮಾಡಲೋಸುಗ ಭೀಷ್ಮನು ತಾಯಿ ಸತ್ಯವತಿಯನ್ನು ಕರೆತಂದು ಅವನಿಗೆ ಮದುವೆ ಮಾಡಿಸಿದನು. ಅವಳನ್ನು ಗಂಧಕಾಲೀ ಎಂದೂ ಕರೆಯುತ್ತಿದ್ದರು. ಅವಳು ಕನ್ಯೆಯಾಗಿರುವಾಗಲೇ ಪರಾಶರನಿಂದ ದ್ವೈಪಾಯನನಿಗೆ ಜನ್ಮವಿತ್ತಿದ್ದಳು. ಅವಳು ಶಂತನುವಿನಿಂದ ಈರ್ವರು ಪುತ್ರರನ್ನು ಪಡೆದಳು: ಚಿತ್ರಾಂಗದ […]

ಅದ್ವೈತ, ವಿಶಿಷ್ಟಾದ್ವೈತ, ದ್ವೈತ | ಸನಾತನ ಸಾಹಿತ್ಯ ~ ಮೂಲಪಾಠಗಳು #34

ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಮತಗಳು ಉಪನಿಷತ್ , ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳ ಅರ್ಥೈಸುವಿಕೆಯಿಂದ ಹೊಮ್ಮಿದ ಮತಗಳಾಗಿವೆ. ಕ್ರಮವಾಗಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಈ ಮೂರು ಸಿದ್ಧಾಂತಗಳ ಪ್ರವರ್ತಕರಾಗಿದ್ದಾರೆ. ಈ ಮೂವರು ಆಚಾರ್ಯರಿಗೂ ಕೃಷ್ಣದ್ವೈಪಾಯನ ವ್ಯಾಸರೇ ಮೂಲ ಗುರುವಾಗಿದ್ದಾರೆ. ಈ ಮೂರೂ ಮತಗಳು ವೈದಿಕ ಸಂಪ್ರದಾಯದಲ್ಲೇ ಬರುತ್ತದೆ. ಇವು ಮೂರೂ ವೇದಾಂತ ದರ್ಶನಗಳೇ ಆಗಿದ್ದು, ತಮ್ಮ ತಮ್ಮ ಆಧ್ಯಾತ್ಮಿಕ‌ ಅನುಭವದ ಆಧಾರದ ಮೇಲೆ ಆಚಾರ್ಯರು ಜನರಿಗೆ ಇವನ್ನು ತಿಳಿಸಿದ್ದಾರೆ. ಮೊದಲು ಶಂಕರಾಚಾರ್ಯರು ಅದ್ವೈತ […]

ಮಹಾಭಾರತ : ಪ್ರಾಥಮಿಕ ಸಂಗತಿಗಳು | ಸನಾತನ ಸಾಹಿತ್ಯ ~ ಮೂಲಪಾಠಗಳು #31

ಕೃಷ್ಣ ದ್ವೈಪಾಯನ ವ್ಯಾಸರಿಂದ ರಚಿಸಲ್ಪಟ್ಟ ಮಹಾಭಾರತ ಮಹತ್ಕೃತಿಯು ಭಾರತೀಯ / ಸನಾತನ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನಮಾನವನ್ನು ಹೊಂದಿದೆ. ಈ ಕೃತಿಯ ಕೆಲವು ಪ್ರಾಥಮಿಕ ಮಾಹಿತಿ ಇಲ್ಲಿದೆ… ಐದನೆಯ ವೇದ ಎಂದೇ ಕರೆಸಿಕೊಳ್ಳುವ ಮಹಾಭಾರತವು ಮೂಲತಃ ‘ಜಯ’ ಎಂಬ ಹೆಸರಿನಲ್ಲಿ ವ್ಯಾಸ ಮಹರ್ಷಿಯಿಂದ ರಚಿಸಲ್ಪಟ್ಟ ಮಹತ್ ಕೃತಿ. ನಾಲ್ಕು ಪುರುಷಾರ್ಥಗಳಾದ ಅರ್ಥ, ಕಾಮ, ಧರ್ಮ ಮತ್ತು ಮೋಕ್ಷ ಸಾಧನೆಯ ಬಗ್ಗೆ ತಿಳಿಸುವುದೇ ಈ ಕೃತಿಯ ಮುಖ್ಯ ಉದ್ದೇಶವೆಂದು ರಚನೆಕಾರರು ಒಂದೆಡೆ ಹೇಳಿಕೊಂಡಿದ್ದಾರೆ. ಕುರುವಂಶದ ಒಳಗಿನ ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಅನ್ಯಾಯದ […]

ಜಾಗತಿಕ ಸಾಹಿತ್ಯದಲ್ಲಿ ಭಗವದ್ಗೀತೆ : ಸನಾತನ ಸಾಹಿತ್ಯ ~ ಮೂಲಪಾಠಗಳು #23

ಭಗವದ್ಗೀತೆಯು ಲೌಕಿಕ – ಪರಮಾರ್ಥಗಳೆರಕ್ಕೂ ಸಲ್ಲುವ ಧಾರ್ಮಿಕ ಸಾಹಿತ್ಯವಾಗಿದೆ. ಯಾವುದೇ ರಚನೆ – ಬೋಧನೆ – ನಿರ್ಣಯಗಳು ಎಷ್ಟೇ ಸಾರ್ವಕಾಲಿಕವಾಗಿದ್ದರೂ ಆಯಾ ಕಾಲದ ಅಗತ್ಯವನ್ನೂ ಚಿಂತನೆಯನ್ನೂ ಹೊತ್ತುಕೊಂಡಿರುತ್ತದೆ. ಭಗವದ್ಗೀತೆಯ ಜ್ಞಾನಸಾಗರದಲ್ಲಿ ಮುತ್ತುಗಳನ್ನು ಆಯ್ದುಕೊಳ್ಳುವ ಸಹನೆ ಮತ್ತು ಶ್ರದ್ಧೆ ನಮ್ಮದಾಗಿರಬೇಕಷ್ಟೆ. ಕುರುಕ್ಷೇತ್ರದಲ್ಲಿ ಪುನರುಚ್ಚರಿಸಲ್ಪಟ್ಟ ಭಗವದ್ಗೀತೆಯನ್ನು ಕೃಷ್ಣ ದ್ವೈಪಾಯನರು ಮಹಾಭಾರತದಲ್ಲಿ ಮುಖ್ಯವಾಗಿ ಸೇರಿಸಿದರು. ಮಹಾಭಾರತದ ಅಂಗವಾಗಿಯೇ ಇದ್ದ ಭಗವದ್ಗೀತೆಯು ಅದರ ಹೊರತಾಗಿಯೂ ಪ್ರತ್ಯೇಕ ಗುರುತು ಪಡೆದು ಜಾಗತಿಕ ಮನ್ನಣೆ ಪಡೆಯಿತು. ಇದಕ್ಕೆ ಕಾರಣ ಗೀತೆಯಲ್ಲಿನ ವಿಜ್ಞಾನ ಮತ್ತು ತತ್ತ್ವಜ್ಞಾನ. ಭಗವದ್ಗೀತೆ […]

ಭಗವದ್ಗೀತೆ; ಅಧ್ಯಾಯ 8 ಮತ್ತು 9 : ಸನಾತನ ಸಾಹಿತ್ಯ ~ ಮೂಲಪಾಠಗಳು #18

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 8 : ಅಕ್ಷರ ಬ್ರಹ್ಮ ಯೋಗ   ಅರ್ಜುನನು “ದೇಹತ್ಯಾಗ ಮಾಡುವಾಗ ಮಾನಸಿಕ ಚಿಂತನೆ ಹೇಗಿರಬೇಕು? ದೇಹತ್ಯಾಗ ನಂತರ ಜೀವ ಯಾವ ಮಾರ್ಗದಲ್ಲಿ ಚಲಿಸುತ್ತದೆ?” ಇತ್ಯಾದಿ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಎಂಟನೇ ಅಧ್ಯಾಯ ಪ್ರಾರಂಭವಾಗುತ್ತದೆ. ಈ ಪ್ರಶ್ನೆಗೆ ಗೀತಾಚಾರ್ಯನ ವಿವರಗಳು ಈ ಅಧ್ಯಾಯವನ್ನು ಆವರಿಸಿವೆ. ಅಸ್ತಿತ್ವ ಹಾಗೂ […]

ಭಗವದ್ಗೀತೆ; ಅಧ್ಯಾಯ 6 ಮತ್ತು 7 : ಸನಾತನ ಸಾಹಿತ್ಯ ~ ಮೂಲಪಾಠಗಳು #17

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 6 : ಆತ್ಮ ಸಂಯಮ ಯೋಗ ಆರನೇ ಅಧ್ಯಾಯದಲ್ಲಿ ಧ್ಯಾನಯೋಗ ಮತ್ತು ಧ್ಯಾನಸಮಾಧಿಯನ್ನು ಕೃಷ್ಣ ತಳಸ್ಪರ್ಶಿಯಾಗಿ ವಿವರಿಸುತ್ತಾನೆ. ಯೋಗಭ್ಯಾಸ ಮಾಡಿ, ಭಗವಂತನ ಧ್ಯಾನಕ್ಕೆ ಪ್ರಯತ್ನಿಸಿ, ಕೆಲವು ಮೆಟ್ಟಲನ್ನೇರಿ ಯಾವುದೋ ಕಾರಣದಿಂದ, ಮನೋವಿಕ್ಷೇಪದಿಂದ ಅಥವಾ ಆಯಸ್ಸು ಮುಗಿದುದರಿಂದ, ಅಲ್ಲೇ ಅದನ್ನು ನಿಲ್ಲಿಸಿದವನ ಸಾಧನೆ ಎಂದೂ […]

ಭಗವದ್ಗೀತೆ ಅಧ್ಯಾಯ 1; ಅರ್ಜುನ ವಿಷಾದ ಯೋಗ: ಸನಾತನ ಸಾಹಿತ್ಯ ~ ಮೂಲಪಾಠಗಳು #14

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/07/02/sanatana13/ ಈ ಅಧ್ಯಾಯದಲ್ಲಿ ಧೃತರಾಷ್ಟ್ರನಿಗೆ ಸಂಜಯನು ಕುರುಕ್ಷೇತ್ರದ ಸನ್ನಿವೇಶವನ್ನು ವಿವರಿಸುತ್ತಾನೆ. ಅನಂತರದಲ್ಲಿ ಅರ್ಜುನನು ಕೃಷ್ಣನಲ್ಲಿ ತನ್ನ ಅಳಲನ್ನು ತೋಡಿಕೊಳ್ಳುವ ವಿವರಣೆ ಇದೆ.  ಧೃತರಾಷ್ಟ್ರನು ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನನ್ನವರು ಮತ್ತು ಪಾಂಡವರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸುವ ಮೂಲಕ ಗೀತೆ […]

ವೇದ ಎಂದರೇನು? ವೇದಗಳು ಎಷ್ಟಿವೆ?: ಸನಾತನ ಸಾಹಿತ್ಯ ~ ಮೂಲಪಾಠಗಳು #2

ಯಾವುದೇ ಧರ್ಮದ ಕುರಿತು ಪ್ರಾಥಮಿಕ ಮಾಹಿತಿ ಹೊಂದಲು ನಾವು ಧಾರ್ಮಿಕ ಮನಸ್ಥಿತಿಯನ್ನು ಹೊಂದಿರಲೇಬೇಕೆಂದಿಲ್ಲ. ಆಯಾ ಧರ್ಮದ ಕುರಿತು ಗೌರವ, ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಈ ತಿಳಿವಳಿಕೆ ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಹಿಂದೂ ಧರ್ಮದ ಕುರಿತು ಕೆಲವು ಪ್ರಾಥಮಿಕ ಸಂಗತಿಗಳ ಮಾಹಿತಿ ಸರಣಿಯನ್ನು ಪ್ರಕಟಿಸುತ್ತಿದ್ದೇವೆ. ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/06/14/hindu1/ ವಿದ್ ಎಂಬ ಧಾತುವಿನಿಂದ ವೇದ ಎಂಬ ಪದ ಬಂದಿದೆ – ‘ವಿದ್’ ಎಂದರೆ ಜ್ಞಾನ ,ತಿಳುವಳಿಕೆ ಎಂದರ್ಥ. ಯಾವ ತಿಳಿವಳಿಕೆಯು ನಮ್ಮ […]