ಅಂಗೈಯಗಲ ಭೂಮಿಯನ್ನು ಅಗಾಧವಾಗಿಸಿದಳು ಸಿದಿಯಾಕ್! : ಸೃಷ್ಟಿಕಥನಗಳು #4

ಬಟಾಕ್ ಪುರಾಣ ಕಥನಗಳ ಪ್ರಕಾರ :ಸಿದಿಯಾಕಳ ಮಕ್ಕಳು ತೋಬಾ ಸರೋವರದ ಪಶ್ಚಿಮ ದಡದಲ್ಲಿರುವ ಪುಸುಕ್ ಬುಹಿತ್ ಜ್ವಾಲಾಮುಖಿ ಬಳಿ ನೆಲೆಸಿದರು. ಅಲ್ಲಿಯೇ ‘ಸಿ ಅಂಜೂರ್ ಮೂಲಾಮೂಲ’ ಹೆಸರಿನ ಹಳ್ಳಿಯನ್ನು ನಿರ್ಮಿಸಿದರು. ಅಲ್ಲಿಯೇ ಸಂತಾನ ಬೆಳೆಸಿ, ಭೂಮಿಯನ್ನು ಮನುಷ್ಯರಿಂದ ತುಂಬುತ್ತಾ ಹೋದರು… ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಮೊದಲು ಇದ್ದುದು ಆಕಾಶ ಮತ್ತು ಸಮುದ್ರ ಮಾತ್ರ. ಆಕಾಶದಲ್ಲಿ ಏಳು ಪದರಗಳಿದ್ದು, ಎಲ್ಲಕ್ಕಿಂತ ಮೇಲಿನ ಪದರದಲ್ಲಿ ದೇವತೆಗಳ ತಂದೆ, ಆದಿ ದೇವ ಮೂಲ ಜಾದಿ ನಬೋಲನ್ (ಅಥವಾ […]