ಭಕ್ತ ಸಿರಿಯಾಳ ಶಿವನಿಗೆ ಮಗನನ್ನು ಉಣಬಡಿಸಿದ ಕಥೆ

ಶಿವ ಸಿರಿಯಾಳನ ಭಕ್ತಿಯನ್ನು ಪರೀಕ್ಷಿಸಲು  ವೇಷ ಮರೆಸಿಕೊಂಡು ಬಂದು, “ನಿನ್ನ ಮಗನನ್ನೇ ಅಟ್ಟುಣಿಸು” ಎಂದು ತಾಕೀತು ಮಾಡಿದ. ಆಗ ಸಿರಿಯಾಳ ಏನು ಮಾಡಿದನೆಂದು ನೀವು ಊಹಿಸಲು ಸಾಧ್ಯವೇ?  ಒಂದಾನೊಂದು ಕಾಲದಲ್ಲಿ ಸಿರಿಯಾಳನೆಂಬ ಶ್ರೇಷ್ಠ ಶಿವಭಕ್ತನಿದ್ದನು. ಅವನ ಶಿವಭಕ್ತಿ ಲೋಕಪ್ರಸಿದ್ಧವಾಗಿತ್ತು. ಆದರೂ ಶಿವನೊಗೆ ಒಮ್ಮೆ ತನ್ನ ಭಕ್ತನನ್ನು ಪರೀಕ್ಷಿಸಬೇಕೆಂಬ ಮನಸಾಯಿತು. ಅದಕ್ಕಾಗಿ ಜಂಗಮನಂತೆ ವೇಷ ಮರೆಸಿಕೊಂಡು ಸಿರಿಯಾಳನ ಮನೆಗೆ ಬಂದನು. ತನಗೆ ಹಸಿವಾಗಿದೆ ಎಂದೂ ಉಣ್ಣಲು ಏನಾದರೂ ಕೊಡೆಂದೂ ಕೇಳಿದನು. ಆ ಕ್ಷಣದಲ್ಲಿ ಸಿರಿಯಾಳನ ಮನೆಯಲ್ಲಿ ಹಿಡಿ ಅಕ್ಕಿಗೂ […]