ಒಳ್ಳೆಯ ಸುದ್ದಿ ಎಂದರೆ… : ಒಂದು ಪದ್ಯ

ಮೂಲ: Thich Nhat Hanh | ಕನ್ನಡಕ್ಕೆ: ಚಿದಂಬರ ನರೇಂದ್ರ ಅವರು ಮುದ್ರಿಸದ ಒಳ್ಳೆಯ ಸುದ್ದಿಗಳನ್ನ ನಾವು ಪ್ರಕಟ ಮಾಡುತ್ತೆವೆ. ಪ್ರತೀ ಕ್ಷಣಕ್ಕೊಂದರಂತೆ ಪ್ರಕಟವಾಗುತ್ತವೆ ನಮ್ಮ ವಿಶೇಷ ಸಂಚಿಕೆಗಳು, ಕೇವಲ ನಿಮಗಾಗಿ ಎಂಬಂತೆ. ಒಳ್ಳೆಯ ಸುದ್ದಿ ಎಂದರೆ, ನೀವು ಇನ್ನೂ ಬದುಕಿರುವುದು ಮತ್ತು, ಚಳಿಗಾಲದ ಕೊರೆವ ಚಳಿಯ ನಡುವೆಯೂ ನಿಂಬೆಯ ಗಿಡ ತಲೆ ಎತ್ತಿ ನಿಂತಿರುವುದು. ಒಳ್ಳೆಯ ಸುದ್ದಿ ಎಂದರೆ, ನಿನಗೆ ಸುಂದರವಾದ ಕಣ್ಣುಗಳಿವೆ , ನೀಲಿ ಆಕಾಶದ ಮೂಲೆ ಮೂಲೆಗಳನ್ನು ಮುಟ್ಟಲು. ಒಳ್ಳೆಯ ಸುದ್ದಿ ಎಂದರೆ, […]