ದುಷ್ಕರ್ಮಗಳಿಂದ ಸುಖ ಲಭಿಸದು

ದುಷ್ಕರ್ಮಗಳನ್ನು ಮಾಡುವ ವ್ಯಕ್ತಿಯ ಬದುಕು ಯಾವತ್ತೂ ಸುಲಭದ್ದಾಗಿರುವುದಿಲ್ಲ : ಅಥರ್ವ ವೇದ ಕೆಟ್ಟ ಕೆಲಸಗಳನ್ನು ಮಾಡುವುದು ಬಹಳ ಸುಲಭ. ಕೆಟ್ಟ ಕೆಲಸ ಮಾಡಲಿಕ್ಕೆ ಬೇರೆ ಶ್ರಮ ಬೇಕಾಗಿಲ್ಲ. ನಮ್ಮಲ್ಲಿ ಸ್ವಲ್ಪ ಅಹಂಕಾರ, ಸ್ವಲ್ಪ ಸ್ವಾರ್ಥ, ಮದ ಮೋಹಾದಿ ಅರಿಷಡ್ವರ್ಗಗಳು ಇದ್ದರೆ ಸಾಕು. ನಮ್ಮ ಲಾಭಕ್ಕೆ, ನಮ್ಮ ಅಹಮಿಕೆಯ ತೃಪ್ತಿಗೆ ನಾವು ಯಾವ ಹಂತಕ್ಕೆ ಬೇಕಾದರೂ ಇಳಿಯಬಲ್ಲೆವು. ಆದರೆ ಒಳ್ಳೆಯ ಕೆಲಸ ಮಾಡುವುದು ಬಹಳ ಕಷ್ಟ. ಒಳ್ಳೆಯದನ್ನು ಮಾಡಲು ನಮ್ಮಲ್ಲಿ ಏನೂ ಇಲ್ಲದೆ ಇರುವುದು ಮುಖ್ಯವಾಗುತ್ತದೆ. ಹೇಗೆ ಕೆಡುಕನ್ನು […]