ಸುಲಿದು ನೋಡದೆ ತಿರುಳ ತಿಳಿಯುವುದು ಹೇಗೆ?

ಬದುಕಿನ ಎಲ್ಲ ಸಾಧ್ಯತೆಗಳನ್ನೂ ಸ್ವತಃ ನಾವೇ ಬಗೆದು ನೋಡಬೇಕು. ಆ ಎಲ್ಲ ಪ್ರಕ್ರಿಯೆಯನ್ನೂ ಹಾದು ಹೋಗಬೇಕು. ಇಲ್ಲವಾದರೆ, ತಿರುಗದೆ ಬಿಟ್ಟ ತಿರುವು ಸದಾ ಕಾಡುವಂತೆ ನಮ್ಮ ಮನಸ್ಸು ನಾವು ಬಳಸದೆ ಬಿಟ್ಟ ಅವಕಾಶಗಳ ಸುತ್ತಲೇ ತಿರುಗುತ್ತ ಉಳಿಯುತ್ತದೆ ~ ಆನಂದಪೂರ್ಣ ಅಲ್ಲಿ ಸುಖವಿದೆಯೋ ದುಃಖವಿದೆಯೋ ಗೊತ್ತಿಲ್ಲ. ಅಥವಾ ಅವೆರಡೂ ಇಲ್ಲದ ನಿರ್ಲಿಪ್ತ ಶಾಂತಿ ಇದೆಯೋ ಅನ್ನುವುದೂ ತಿಳಿದಿಲ್ಲ. ಯಾರೋ ನಡು ಹಾದಿಯಲ್ಲಿ ಮರಳಿ ಬಂದರು ಅನ್ನುವ ಕಾರಣಕ್ಕೆ ನಾವೂ ಹೆಜ್ಜೆ ಹಿಂತಿರುಗಿಸುತ್ತೇವೆ. ಯಾರೋ ಅವರ ಗ್ರಹಿಕೆಗೆ ತಕ್ಕಂತೆ […]