ಕೃತಘ್ನರ ಪಾಡು : ಇಂದಿನ ಸುಭಾಷಿತ, ರಾಮಾಯಣದಿಂದ

ಇಂದಿನ ಸುಭಾಷಿತ, ರಾಮಾಯಣದಿಂದ…

ಸಕಾರಾತ್ಮಕ ಚಿಂತನೆಗೆ 10 ಸಂಸ್ಕೃತ ಸೂಕ್ತಿಗಳು

ದಿನದ ಆರಂಭ ಸದಾ ಸಕಾರಾತ್ಮಕ ಚಿಂತನೆಯಿಂದಲೇ ಆರಂಭವಾಗಬೇಕು. ಅದರಲ್ಲೂ ಸುತ್ತ ಮುತ್ತ ಬರೀ ಸಾವುನೋವುಗಳೇ ಕಾಣುತ್ತಿರುವ ಈ ದಿನಗಳಲ್ಲಿ ಸಕಾರಾತ್ಮಕ ಚಿಂತನೆ ನಮ್ಮಲ್ಲಿ ಹೆಚ್ಚಿನ ಧೈರ್ಯವನ್ನೂ ಛಲವನ್ನೂ ತುಂಬುತ್ತವೆ. ಈ ನಿಟ್ಟಿನಲ್ಲಿ 10 ಸಂಸ್ಕೃತ ಸೂಕ್ತಿಗಳು ಮತ್ತು ಸರಳ ಕನ್ನಡಾನುವಾದವನ್ನು ಈ ಚಿಕ್ಕ ವಿಡೀಯೋದಲ್ಲಿ ನೀಡಲಾಗಿದೆ.

ತುಳಸೀದಾಸರ ಸೂಕ್ತಿಗಳು : ಬೆಳಗಿನ ಹೊಳಹು

ದಿನವನ್ನು ಶುಭಕರವಾಗಿಸುವ ತುಳಸೀದಾಸರ ಕೆಲವು ಸೂಕ್ತಿಗಳು ಇಲ್ಲಿವೆ: ವಿವೇಕವನ್ನುಕೊಡಲಾಗದು, ಪಡೆಯಲಾಗದು. ಅದು ಅತ್ಯಂತ ಕಷ್ಟ. ಹೇಗೋ ಅದೃಷ್ಟದಿಂದ ಅದನ್ನು ಪಡೆದರೂ, ಅದನ್ನು ಹಿಡಿದಿಟ್ಟುಕೊಳ್ಳಲು ಹಲವು ಅಡ್ಡಿ ಆತಂಕಗಳು ಬರುತ್ತವೆ. ಆದ್ದರಿಂದ ವಿವೇಕವನ್ನು ನಾವೇ ನಮ್ಮೊಳಗೆ ಮೂಡಿಸಿಕೊಳ್ಳಬೇಕು. * ಆಸೆ ಎಂಬ ದೇವತೆ ನಿಜಕ್ಕೂ ವಿಚಿತ್ರ. ಅವಳನ್ನು ಪೂಜಿಸಿದಷ್ಟೂ ದುಃಖ ನೀಡುತ್ತಾಳೆ; ಕಡೆಗಣಿಸಿದಷ್ಟೂ ಆನಂದ ನೀಡುತ್ತಾಳೆ! ** ಸಹಾನುಭೂತಿಯ ಮಾತುಗಳು ದ್ವೇಷಕ್ಕೆ ಮದ್ದು. ಇತರರಿಗೆ ಒಳಿತನ್ನುಂಟು ಮಾಡುವುದೇ ಸೌಹಾರ್ದಕ್ಕೆ ಮೂಲ. ನಿಂದೆಯಿಂದ, ಕೆಟ್ಟ ಮಾತುಗಳಿಂದ ಗೆಲುವು ಲಭಿಸಿದರೆ, ವಾಸ್ತವದಲ್ಲಿ […]