ಶ್ರೀರಾಮ ಸೂಕ್ತಿ : ಬೆಳಗಿನ ಹೊಳಹು

ಶ್ರೀರಾಮನು ಭಕ್ತಶ್ರೇಷ್ಠನಾದ ಹನುಮನಿಗೆ ನೀಡಿದ ಉಪದೇಶಗಳು ‘ಶ್ರೀ ರಾಮ ಸೂಕ್ತಿ’ಯಲ್ಲಿ ಸಂಕಲನಗೊಂಡಿದೆ. ಅದರಿಂದ ಕೆಲವು ಹೊಳಹುಗಳು, ನಿಮಗಾಗಿ… “ಪರಮಾತ್ಮನ  ನೆರಳೇ  ಎಲ್ಲ ಜೀವಿಗಳಲ್ಲಿ ಜೀವಾತ್ಮನಾಗಿ ಪ್ರತಿಬಿಂಬಿತವಾಗಿದೆ. ವಿಶಾಲವಾದ ಆಕಾಶವೇ ಎಲ್ಲ ನದಿ, ಸರೋವರಗಳಲ್ಲಿ ಪ್ರತಿಬಿಂಬಿಸುತ್ತದೆ” ~ ಶುದ್ಧವಾದ ಜ್ಞಾನವು ಎಲ್ಲ ಆಸೆ ಮತ್ತು ಆಸಕ್ತಿಗಳನ್ನು ಕೊಲ್ಲುತ್ದೆ. ಸಕಾಮಕರ್ಮ ಯಾವುದೇ ಆಗಿರಲಿ, ಅದನ್ನು ಬಿಡಬೇಕು. ಅದು ವ್ಯಕ್ತಿಯನ್ನು ಜನನ – ಮರಣದ ಸಂಕೋಲೆಯಲ್ಲಿ ಬಂಧಿಸುತ್ತದೆ.  ನಿಜವಾದ ಜ್ಞಾನವನ್ನು ಹೊಂದಲು ಅದು ಅಡ್ಡಿಯಾಗುವುದು. ~ ಪಂಚಭೂತಗಳಿಂದ, ಅತ್ಯಂತ ಸೀಮಿತವೂ ನಾಶವುಳ್ಳದ್ದೂ […]

ಶ್ರೀ ಕೃಷ್ಣ ಸೂಕ್ತಿ : ಬೆಳಗಿನ ಹೊಳಹು

ಜನನ ಮರಣಗಳನ್ನು ದಾಟಿ ಅಮೃತತ್ವದ ದಡವನ್ನು ಸೇರುವುದೇ ಇಹಜೀವನದ ಗುರಿ. ~ ರಾಜ್ಯವೇ ಮೊದಲಾದ ಬಾಹ್ಯ ವಸ್ತುಗಳನ್ನು ತ್ಯಜಿಸುವುದರಿಂದ ಮೋಕ್ಷವು ಲಭಿಸಲಾರದು; ಇಂದ್ರಿಯಸುಖವನ್ನು ತಣಿಸುವ ವಿಷಯಗಳನ್ನು ತ್ಯಜಿಸುವುದರಿಂದ ಅದರ ಲಾಭವುಂಟಾಗುವುದು. ~ ಮಾನವ ದೇಹವು ದೋಣಿ ಇದ್ದಂತೆ. ಜನನ ಮರಣವೆಂಬ ಸಾಗರವನ್ನು ದಾಟಿಸಿ ಅಮೃತತ್ವದ ದಡವನ್ನು ತಲುಪಿಸುವುದೇ ಅದರ ಮೊದಲನೆಯ ಹಾಗೂ ಅತ್ಯತ್ತಮವಾದ ಉಪಯೋಗ. ~ ಗುರು ಸಮರ್ಥನಾದ ಅಂಬಿಗ; ಭಗವತ್ ಕೃಪೆ ಸಹಕಾರಿಯಾದ ಗಾಳಿ. ಇವೆರಡೂ ಇರುವಾಗ ಮನುಷ್ಯನು ಸಂಸಾರ ಸಾಗರವನ್ನು ದಾಟಲು ಯತ್ನಿಸದಿದ್ದರೆ, ಅವನು […]