ನಾಲ್ಕು ನಗರಗಳು ಮತ್ತು ಒಂದು ಮೂಟೆ ಬೀಜ : ಸೂಫಿ ದೃಷ್ಟಾಂತ ಕತೆ

ನಾಲ್ಕು ನಗರಗಳು ಅಕ್ಕಪಕ್ಕದಲ್ಲಿದ್ದವು. ಈ ನಾಲ್ಕೂ ನಗರಗಳ ಜನ ಕ್ಷಾಮಡಾಮರಕ್ಕೆ ತುತ್ತಾಗಿ, ತಿನ್ನಲು ಏನೂ ಇಲ್ಲದೆ ಒದ್ದಾಡುತ್ತಿದ್ದರು. ಈ ನಾಲ್ಕೂ ನಗರಗಳಲ್ಲಿ ತಲಾ ಒಂದು ಮೂಟೆ ಬೀಜವಿತ್ತು.ಮೊದಲನೆಯ ನಗರದಲ್ಲಿ ಬೀಜದ ಮೂಟೆಯನ್ನು ತೆಗೆದುಕೊಂಡು ಏನು ಮಾಡಬೇಕೆಂದೇ ಯಾರಿಗೂ ತಿಳಿದಿರಲಿಲ್ಲ. ಅವರೆಲ್ಲ ಕಣ್ಣೆದುರೇ ಮೂಟೆಯಿದ್ದರೂ ಹೊಟ್ಟೆಗಿಲ್ಲದೆ ಸತ್ತರು. ಎರಡನೆಯ ನಗರದಲ್ಲಿ ಒಬ್ಬನಿಗೆ ಮಾತ್ರ ಬೀಜದ ಮೂಟೆಯನ್ನು ಹೇಗೆ ಬಳಸಬೇಕೆಂದು ಗೊತ್ತಿತ್ತು. ಆದರೆ ನಾನೇ ಯಾಕೆ ಅದನ್ನು ಮಾಡಬೇಕು? ಎಂದು ಭಾವಿಸಿ ಸುಮ್ಮನಾದ. ಪರಿಣಾಮವಾಗಿ, ಅವನೂ ಸೇರಿದಂತೆ ಇಡಿಯ ನಗರ […]