ಯಾರು ಯಾರಿಗೆ ಕನ್ನಡಿ…!? : ಅರಳಿಮರ POSTER

“ಜಗತ್ತು ಭಗವಂತನ ಕನ್ನಡಿ, ಮತ್ತು ಮನುಷ್ಯನ ಹೃದಯ ಜಗತ್ತಿನ ಕನ್ನಡಿ” ಅನ್ನುತ್ತದೆ ಸೂಫಿ ಚಿಂತನೆ. ಅಧ್ಯಾತ್ಮ ಯಾನಿಯು ಭಗವಂತನನ್ನು ಅರಿಯಬೇಕೆಂದರೆ ತನ್ನ ಹೃದಯದೊಳಕ್ಕೇ ಅವನನ್ನು ಅರಸಬೇಕು. ಬೆಳಕನ್ನು ಪಡೆಯಬೇಕೆಂದರೆ ತನ್ನ ಹೃದಯದಾಳಕ್ಕೆ ಧುಮುಕಬೇಕು. ಏಕೆಂದರೆ ನಮ್ಮ ಹೃದಯ ಜಗತ್ತಿನ ಕನ್ನಡಿಯಾಗಿದೆ; ಮತ್ತು ಜಗತ್ತು ಭಗವಂತನ ಕನ್ನಡಿಯಾಗಿದೆ. ನಮ್ಮೊಳಗೆ ಹೊಕ್ಕು ಹುಡುಕಿದರೆ ನಾವು ಯಾವತ್ತೂ ನಂದದ ಬೆಳಕನ್ನು ಹೊಂದುತ್ತೇವೆ, ಭಗವಂತನನ್ನು ಪಡೆಯುತ್ತೇವೆ – ಇದು ಮೇಲಿನ ಸೂಫಿ ಚಿಂತನೆಯ ವಿಸ್ತೃತಾರ್ಥ.  ಸೃಷ್ಟಿ ಮತ್ತು ಭಗವಂತ ಪರಸ್ಪರ ಎದುರುಬದುರಿಟ್ಟ ಕನ್ನಡಿಗಳಂತೆ. ಒಬ್ಬರೊಬ್ಬರ […]

ಜೇಡ ಹೆಣೆದ ಬಲೆಯಂತೆ ಭಗವಂತನ ಸೃಷ್ಟಿ : ಬೆಳಗಿನ ಹೊಳಹು

ಯಥೋರ್ಣ ನಾಭಿಃ ಸೃಜತೇ ಗೃಹ್ಣತೇ ಚ : ತನ್ನದೇ ಹೊಕ್ಕುಳಿಂದ ಸ್ರವಿಸಿ ಬಲೆ ಹೆಣೆದು ಜೇಡವು ಅದನ್ನು ಪ್ರವೇಶಿಸುವಂತೆ.. (ಪರಮ ಅಸ್ತಿತ್ವವು ಜಗತ್ತನ್ನು ಸೃಷ್ಟಿಸಿ ಅದರೊಳಗೆ ಒಂದಾಗಿದೆ) ~ ಮುಂಡಕ ಉಪನಿಷತ್ತು   “ಜೇಡವು ತನ್ನೊಳಗಿನ ದ್ರವವನ್ನು ಸ್ರವಿಸಿ, ಅದರಿಂದ ಬಲೆಯನ್ನು ಸೃಷ್ಟಿಸುತ್ತದೆ. ಅನಂತರ ಆ ಬಲೆಯನ್ನು ಪ್ರವೇಶಿಸಿ, ಅದರೊಳಗೆ ನಡೆಯುವ ವಿದ್ಯಮಾನಗಳಿಗೆ ಸೂತ್ರಧಾರನಾಗಿಯೂ ಸ್ವತಃ ಪಾತ್ರಧಾರಿಯೂ ಆಗುತ್ತದೆ. ಈ ಸೃಷ್ಟಿ ಮತ್ತು ಅದರೊಳಗೆ ಭಗವಂತನ ಲೀಲೆಯನ್ನು ಅರ್ಥ ಮಾಡಿಕೊಳ್ಳಬೇಕಾದ ವಿಧಾನ ಇದು” ಅನ್ನುತ್ತದೆ ಮುಂಡಕ ಉಪನಿಷತ್ತು. 

ವಲಸೆಯನ್ನೇ ಅರಿಯದ ನವಾಹೋ ಜನಾಂಗ : ಸೃಷ್ಟಿ ಕಥನಗಳು

“ನಮ್ಮ ಸಂಪ್ರದಾಯದಲ್ಲಿ ವಲಸೆ ಅನ್ನುವ ಅರ್ಥ ಹೊಂದಿರುವ ಯಾವ ಪದವೂ ಇಲ್ಲ. ನಮ್ಮಲ್ಲಿ ವಲಸೆ ಹೋಗುವುದು ಅಂದರೆ ಇಲ್ಲವಾಗುವುದು ಎಂದೇ ಅರ್ಥ” ~ ಇದು ನವಾಹೋಗಳ ಮಾತು.  ಕೊಲರಾಡೋದ ಸಿಸ್ನಾಜಿನಿ (ಬ್ಲಾಂಕಾ ಶಿಖರ) ಹಾಗೂ ಡಿಬೆ ನಿಸಾ (ಹೆಸ್ಪಿರಸ್ ಶಿಖರ), ನ್ಯೂ ಮೆಕ್ಸಿಕೋದ ಸೂಡ್ಜಿ (ಮೌಂಟ್ ಟೇಲರ್ ಶಿಖರ), ಆರಿಜೋನಾದ ಡೂಕ್ ‘ಒ ಊಸ್ಲಿಡ್ (ಸ್ಯಾನ್‍ಫ್ರಾನ್ಸಿಸ್ಕೋ ಶಿಖರ) – ಈ ನಾಲ್ಕು ಬೆಟ್ಟಗಳ ನಡುವೆ ಜೀವಿಸುವ ಜನಾಂಗವೇ ನವಾಹೋ ಜನಾಂಗ. ನವಾಹೋ ಜನಗಳು ತಮ್ಮ ನೆಲವನ್ನು ಅತ್ಯಂತ ಪೂಜ್ಯ […]

ಹಾಲಿನ ಹನಿಯಿಂದ ‘ಗುನೋ’ವರೆಗೆ : ಆಫ್ರಿಕನ್ನರ ಸೃಷ್ಟಿ ಕಥನಗಳು #1

ಜಗತ್ತಿನಾದ್ಯಂತ ವಿವಿಧ ಜನಪದಗಳು ಹೆಣೆದ ಸೃಷ್ಟಿಕಥೆಗಳು ತಮ್ಮ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿವೆ. ಸ್ವಾರಸ್ಯಕರವಾದ ಈ ಕಥನಗಳ ಗರ್ಭದಲ್ಲಿ ಅಡಗಿರುವ ಗೂಢಾರ್ಥಗಳನ್ನು ಹೆಕ್ಕಿ ತೆಗೆಯುವುದು ಓದಿನ ಒಂದು ಚೆಂದದ ಅನುಭವವೇ ಸರಿ. ಸಂಗ್ರಹ ಮತ್ತು ಅನುವಾದ : ಕೆ.ಎಸ್.ಇಂದ್ರಾಣಿ ಮೊದಲು ಹಾಲಿನ ದೊಡ್ಡ ಹನಿ ಇತ್ತು. ದೇವರು ಇಳಿದು ಬಂದು ಕಲ್ಲನ್ನು ಸೃಷ್ಟಿಸಿದ. ಕಲ್ಲು ಕಬ್ಬಿಣವನ್ನು ಸೃಷ್ಟಿಸಿತು ಕಬ್ಬಿಣ ಬೆಂಕಿಯನ್ನು ಸೃಷ್ಟಿಸಿತು ಬೆಂಕಿ ನೀರನ್ನು ಸೃಷ್ಟಿಸಿತು ದೇವರು ಎರಡನೇ ಬಾರಿ ಭೂವಿಗಿಳಿದ ಪಂಚ ಭೂತಗಳ ಬೆಸೆದು ಮನುಷ್ಯನನ್ನು ಸೃಷ್ಟಿಸಿದ […]

ಕಥಾ ಸರಿತ್ಸಾಗರ : ಶಿವನು ಸ್ಮಶಾನವಾಸಿಯಾಗಿದ್ದು ಯಾಕೆ? : ಕಾಣಭೂತಿ ಹೇಳಿದ ಕಥೆ

ವಿಂಧ್ಯಾಟವಿಯಲ್ಲಿ ಕಾಣಭೂತಿ ಮತ್ತು ವರರುಚಿಯ ಭೇಟಿಯಾಯಿತು. ವರರುಚಿಯು ಕಾಣಭೂತಿಯ ಬಗ್ಗೆ ವಿಚಾರಿಸಿದಾಗ, ಅವನು ಶಿವ ಪಾರ್ವತಿಯರಿಂದ ತನ್ನ ಬಗ್ಗೆ ತನಗೆ ತಿಳಿದುಬಂದ ವಿಷಯಗಳನ್ನು ಹೇಳತೊಡಗಿದನು. ಅದರ ಜೊತೆಗೆ ಶಿವಪಾರ್ವತಿಯರು ಸೃಷ್ಟಿಯ ಬಗ್ಗೆ ನಡೆಸಿದ ಸಂವಾದವನ್ನೂ ಅವನು ಯಥಾವತ್ತಾಗಿ ಹೇಳಿದನು. ಪ್ರಳಯ ಉಂಟಾಗಿ ಯುಗಾಂತಗೊಂಡಾಗ ಎಲ್ಲೆಲ್ಲೂ ನೀರೇ ತುಂಬಿಕೊಂಡಿತ್ತು. ಆಗ ಶಿವನು ತನ್ನ ತೊಡೆಯನ್ನು ಸೀಳಿ ರಕ್ತದ ಹನಿಯೊಂದನ್ನು ಅದರಲ್ಲಿ ಬೀಳಿಸಿದನು. ನೀರಲ್ಲಿ ಬಿದ್ದ ಆ ಹನಿಯು ಮೊಟ್ಟೆಯಾಯಿತು. ಅದನ್ನು ಎರಡು ಭಾಗಗಳಾಗಿ ಒಡೆದಾಗ ಒಂದು ಭಾಗದಿಂದ ಪುರುಷನೂ […]