ಕೃಷ್ಣನು ರಾಮನ ಸೇತುವೆಯನ್ನು ಕಟ್ಟಿದ್ದು : ಕೃಷ್ಣನ ಬಾಲ ಲೀಲೆಗಳು #3

ಅದೊಂದು ಬಿರು ಬೇಸಗೆಯ ಮಧ್ಯಾಹ್ನ. ರಾಧೆ ಮತ್ತವಳ ಗೆಳತಿಯರಾದ ಲಲಿತಾ ಹಾಗೂ ವಿಶಾಖಾ ವೃಂದಾವನದ ಕಡೆ ಹೊರಟಿದ್ದರು. ಅವರು ತಮ್ಮ ಅಮ್ಮಂದಿರು ಗಡಿಗೆಗಳಲ್ಲಿ ತುಂಬಿಕೊಟ್ಟಿದ್ದ ಹಾಲನ್ನು ಗೋವರ್ಧನದಲ್ಲಿ ಮಾರಾಟ ಮಾಡಿ ಮರಳುತ್ತಿದ್ದರು. ಅವರು ಮೂವರೂ ಸರೋವರದ ಬಳಿ ತಲುಪುವ ವೇಳೆಗಾಗಲೇ ಬಿಸಿಲಿನ ಝಳಕ್ಕೆ ಸುಸ್ತಾಗಿ ಹೋಗಿದ್ದರು. ರಾಧೆಯು ಬೆವರು ಒರೆಸಿಕೊಳ್ಳುತ್ತಾ “ಈ ಸರೋವರಕ್ಕೊಂದು ಸೇತುವೆ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು! ಇದನ್ನು ಸುತ್ತುವರೆದುಕೊಂಡು ಅಷ್ಟು ದೂರ ನಡೆಯೋದು ತಪ್ಪುತ್ತಿತ್ತು” ಅಂದಳು. ಅವಳ ಗೆಳತಿಯರು ಉತ್ತರಿಸುವ ಮೊದಲೇ ಅಲ್ಲೊಂದು […]