ಸಹಾಯ ಸ್ವೀಕರಿಸಿದವರಿಗೆ ಕೃತಜ್ಞರಾಗಿರಿ : ಸ್ವಾಮಿ ವಿವೇಕಾನಂದ

ಕೆಲವೊಮ್ಮೆ ನಾವು ಯಾರು ಯಾರಿಗೋ ಮಾಡಿದ ಸಹಾಯವನ್ನು ನೆನೆಯುತ್ತ “ಅವರಿಗೆ ಉಪಕಾರಸ್ಮರಣೆಯೇ ಇಲ್ಲ… ಅವರು ನನಗೆ ಕೃತಜ್ಞರಾಗಿರಬೇಕಿತ್ತು” ಎಂದೆಲ್ಲ ಗೊಣಗುತ್ತಾ ಇರುತ್ತೇವೆ. ವಾಸ್ತವದಲ್ಲಿ ಸಹಾಯ ಮಾಡುವುದು ನಮ್ಮ ಹೆಚ್ಚುಗಾರಿಕೆಯಲ್ಲ, ಅದು ಸಮಾಜಕ್ಕೆ ಪ್ರತಿಯಾಗಿ ನಮ್ಮ ಕರ್ತವ್ಯ. ಆದ್ದರಿಂದ, ಮತ್ತೊಬ್ಬರು ನಮ್ಮ ಸಹಾಯ ಸ್ಮರಿಸುತ್ತಾ ನಮ್ಮ ಹಿಡಿತದಲ್ಲಿ, ನಮ್ಮ ಮುಲಾಜಿನಲ್ಲಿ ಇರಬೇಕೆಂದು ಬಯಸುವುದು ನಮ್ಮ ವ್ಯಕ್ತಿತ್ವಕ್ಕೆ ಕುಂದು ತರುವ ಸಂಗತಿ.  ಇದಕ್ಕೆ ಸಂಬಂಧಿಸಿದಂತೆ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: ಸಮಾಜ ನಮಗೆ ಏನೆಲ್ಲವನ್ನೂ ನೀಡಿದೆ. ಅದಕ್ಕೆ ಪ್ರತಿಯಾಗಿ ನಮ್ಮ […]

ತ್ಯಾಗ ಮತ್ತು ಸೇವೆ : ವಿವೇಕ ವಿಚಾರ

ತ್ಯಾಗವಿಲ್ಲದೆ ಯಾವುದೂ ಸಾಧ್ಯವಿಲ್ಲ. ಇತರರಗೆ ನೀವು ಸಹಾಯ ಮಾಡಬೇಕೆಂದಿದ್ದರೆ ಮೊದಲು ನಿಮ್ಮ ಸ್ವಾರ್ಥ ಹೋಗಬೇಕು. ಹೌದು. ಕ್ರಿಸ್ತನು ಹೇಳುವಂತೆ ನೀವು ದೇವರನ್ನೂ ಸಂಪತ್ತನ್ನೂ ಒಟ್ಟಿಗೆ ಒಲಿಸಿಕೊಳ್ಳಲಾರಿರಿ. ಒಟ್ಟಿಗೆ ಪೂಜಿಸಲಾರಿರಿ. ಜನರು ತಮ್ಮ ಸ್ವಂತ ಮೋಕ್ಷಕ್ಕಾಗಿ ಮಾತ್ರ ಐಹಿಕ ಬಿಡುತ್ತಾರೆ. ಎಲ್ಲವನ್ನೂ ತ್ಯಜಿಸಿಬಿಡಿ. ನಿಮ್ಮ ಸ್ವಂತ ಮೋಕ್ಷವನ್ನೂ ಬಿಸಾಡಿ ಹೋಗಿ, ಇತರರ ಸೇವೆ ಮಾಡಿ. ~ ಈಗ ನಾವು ಕಲಿತುಕೊಳ್ಳಬೇಕಾದ ಇನ್ನೊಂದು ಮುಖ್ಯವಾದ ವಿಷಯವಿದೆ.   ನಿಜವಾಗಿಯೂ ನೀವು ಇನ್ನೊಬ್ಬರಿಗೆ ಸಹಾಯ ಮಾಡಲಾರಿರಿ. ನಾವು ಪರಸ್ಪರ ಏನು ಮಾಡಬಲ್ಲೆವು? ನೀವು […]