ಸೈತಾನ ಕಂಡರೆ, ದೇವರೂ ಕಾಣುವನು : ಶಮ್ಸ್

“ಸೈತಾನ ನಮ್ಮೊಳಗೇ ಇದ್ದಾನೆ. ಅವನನ್ನು ಹುಡುಕಿಕೊಳ್ಳಲು ನಮಗೆ ಸಾಧ್ಯವಾದರೆ, ನಾವು ನಮ್ಮೊಳಗಿನ ದೇವರನ್ನೂ ಹುಡುಕಿಕೊಳ್ಳಬಲ್ಲೆವು” ಅನ್ನುತ್ತಾನೆ ಸೂಫಿ ಶಮ್ಸ್ ತಬ್ರೀಜಿ . ನಾವು ನಮ್ಮೆಲ್ಲ ಕೆಡುಕುಗಳಿಗೆ ಇನ್ಯಾರನ್ನೋ ಹೊಣೆಯಾಗಿಸಲು ಹೆಣಗುತ್ತೇವೆ. ವಾಸ್ತವವಾಗಿ ನಮ್ಮ ನಮ್ಮ ಕೆಡುಕಿಗೆ, ನಮ್ಮ ದುಷ್ಟತನಕ್ಕೆ ನಾವೇ ಕಾರಣ. ನಮ್ಮ ದಾರಿ ತಪ್ಪಿಸುವ ಸೈತಾನ  ಹೊರಗೆಲ್ಲೋ ಇಲ್ಲ. ಅವನನ್ನು ಮತ್ತೊಬ್ಬರೊಳಗೆ ಹುಡುಕುತ್ತಿದ್ದರೆ ಯಾವತ್ತೂ ಸಿಗಲಾರ. ಸೈತಾನ ಇರುವುದು ನಮ್ಮೊಳಗೇನೇ. ನಮ್ಮೊಳಗಿನ ಕೆಟ್ಟ ಆಲೋಚನೆಗಳಲ್ಲಿ ಆತ ನೆಲೆಸಿರೋದು. ನಮ್ಮನ್ನು ಪಾಪ ಮಾಡುವಂತೆ ಪ್ರೇರೇಪಿಸೋದು ಈ ಸೈತಾನನೇ […]