ಭಯ ಮತ್ತು ಬಯಕೆಗಳಾಚೆ ಇರುವುದೇ ನಿಜವಾದ ಪ್ರೇಮ

ಪ್ರೇಮವೊಂದೇ ಆತ್ಯಂತಿಕವಾದದ್ದು. ಭಗವಂತನೇ ಅಲ್ಲಿ ಪ್ರಿಯತಮ. ಆತನ ಮೇಲೆ ಯಾವುದೇ ಬಯಕೆ ಮತ್ತು ಭಯಗಳು ಇರುವುದಿಲ್ಲ. ಅದಕ್ಕೆ ರಾಬಿಯಾಳ ಈ ಸಾಲುಗಳಿಗಿಂತ ಬೇರೆ ಸಾಕ್ಷಿ ಬೇಕಾಗಿಲ್ಲ  : ಸಾಕಿ ಧರ್ಮಗಳು ದೇವರನ್ನು ನಿರ್ಗುಣ ನಿರಾಕಾರ ಎನ್ನುತ್ತಲೇ ಸ್ವರ್ಗ-ನರಕಗಳನ್ನೂ ದೇವರೇ ಸೃಷ್ಟಿಸಿದ ಎಂದು ಹೇಳುತ್ತವೆ. ಆ ಮೂಲಕ ನರಕದ ಶಿಕ್ಷೆಗಳ ಭಯದಿಂದಲೂ ಸ್ವರ್ಗದ ಅನಂತ ಸುಖ ಸಾಗರದ ಆಸೆಯಿಂದಲೂ ದೇವರನ್ನು ಪ್ರೀತಿಸಿ ಎಂದು ಧರ್ಮ ಗ್ರಂಥಗಳ ಮೂಲಕ ಸಾರುತ್ತವೆ. ಧರ್ಮಗಳ ಹುಟ್ಟಿನ ಸಂದರ್ಭದಲ್ಲಿ ಇಂತಹ ಮೋಹ ಮತ್ತು ಭಯಗಳ […]

ನೀವು ಚೆನ್ನಾಗಿಲ್ಲ ಅಂದ್ರೆ ತಲೆ ಕೆಡಿಸ್ಕೊಳ್ಬೇಡಿ, ಅದು ನೋಡುಗರ ಕೊರತೆ : ಅರಳಿಮರ Audio

“ನಾನು ನೋಡ್ಲಿಕ್ಕೆ ಚೆನ್ನಾಗಿಲ್ಲ. ಅದಕ್ಕೇ ನನ್ ಮಗಳು ನನ್ ಜೊತೆ ಹೊರಗೆ ಓಡಾಡೋಕೆ ಹಿಂಜರೀತಾಳೆ. ಯಾರಿಗೂ ಪರಿಚಯ ಮಾಡಿಸೋದಿಲ್ಲ. ಇದೆಲ್ಲ ನನಗೆ ನೋವು ತಂದಿದೆ. ಇದನ್ನು ಮೀರೋದು ಹೇಗೆ” ಅಂತ ಮಹಿಳೆಯೊಬ್ಬರು ಪ್ರಶ್ನೆ ಕೇಳಿದ್ದರು. ಯಾವುದನ್ನು ಹೇಗೆ ನೋಡಬೇಕು ಅನ್ನೋದು ಅಂತರಂಗಕ್ಕೆ ಸಂಬಂಧಿಸಿದ್ದು. ಪ್ರತಿ ವ್ಯಕ್ತಿಯ ವೈಯಕ್ತಿಕ ಆಲೋಚನಾಕ್ರಮದ ಮೇಲೆ ಅವಲಂಬಿತವಾಗಿರುವಂಥದ್ದು. ಈ ವಿಷಯದಲ್ಲಿ ನೀವು ಇದನ್ನು ಹೀಗೇ ನೋಡಬೇಕು ಎಂದು ನಿರ್ದೇಶಿಸಲಾಗಲೀ ಬೋಧಿಸಲಾಗಲೀ ಬರುವುದಿಲ್ಲ. ಆದರೆ ನಮ್ಮ ನೋಟವನ್ನು ಆರೋಗ್ಯಪೂರ್ಣವಾಗಿರಿಸಿಕೊಳ್ಳಬಲ್ಲ ಚಿಂತನೆ ಇದು ಎಂದು ಬೆರಳು […]

ಸೊಬಗಿನ ಹೊನಲು : ಕನ್ನಡದಲ್ಲಿ ಶ್ರೀ ಶಂಕರ ಕೃತ ಸೌಂದರ್ಯ ಲಹರಿ ~ ಭಾಗ 2

ಮೂಲ ಸಂಸ್ಕೃತದಲ್ಲಿರುವ ಸೌಂದರ್ಯ ಲಹರಿ ಶ್ಲೋಕಗಳನ್ನು ನಾಡಿನ ಮುಖ್ಯ ಕವಿಗಳಲ್ಲಿ ಒಬ್ಬರಾದ ಡಾ.ಎಚ್.ಎಸ್.ಶಿವಪ್ರಕಾಶ್ ಕನ್ನಡಕ್ಕೆ ಅನುವಾದಿಸಿದ್ದು ಅದನ್ನು ಎರಡು ಕಂತುಗಳಲ್ಲಿ ಪ್ರಕಟಿಸಿದ್ದೇವೆ. ಮೊದಲ ಕಂತು ಇಲ್ಲಿದೆ:  https://aralimara.com/2019/03/24/saundarya/   ಸೌಂದರ್ಯ ಲಹರೀ (42ರಿಂದ 100) ಮಾಣಿಕದ ಹರಳುಗಗಳೊಂದಾಗಿ ಹೊಳೆವ ನಿನ್ನ ಮಕುಟವ ಮನಸಾರೆ ಹಾಡಿಹೊಗಳುವಗ್ಗಳದ ಕವಿವರೇಣ್ಯನಿಗೆ ಈರಾರು ಸೂರಿಯರೊಂದಾಗಿ ಬೆಳಗುವ ಶಶಿ ಬಿಂಬ ಹಲರಂಗಿನ ಕಾಮನ ಬಿಲ್ಲಂತೆ ಕಂಡರೆ ಸೋಜಿಗವೆ? | 42 | ನಮ್ಮ ತಮ ಹರಿಸಲಿ ಬಿರಿದ ನೀಲಿಯ ತಾವರೆ ಗುಣ್ಪಂತೆ ನುಣ್ಣನೆಯ, ಒತ್ತಾದ, […]

ಸಾಧಕರು ಮತ್ತು ಸೌಂದರ್ಯ

ದೇಹ ಸೌಂದರ್ಯ ಸಾಧನೆಗೆ ಅಡ್ಡಿ ಅನ್ನುವುದು ಬಹುತೇಕ ಸಾಧಕರ ಅಭಿಮತ. ಹಾಗೆಂದು ಅವರು ಲೋಕದ ಚೆಲುವಿಗೆ ಮುಖ ತಿರುವಿದವರಲ್ಲ, ಸಾಧನೆಗಾಗಿ ಸ್ವತಃ ತಮ್ಮ ಚೆಲುವನ್ನೆ ಕುಂದಿಸಿಕೊಂಡವರು. ಮೀರಾ, ಅಕ್ಕ, ಶಾರದಾ ಮಾತೆ, ಝೆನ್ ಬಿಕ್ಖುಣಿ ರ್ಯೊನೆನ್, ಸಂತ ಅವ್ವೈಯಾರ್… ಈ ಸಾಲು ದೊಡ್ಡದಿದೆ. ಸೌಂದರ್ಯಕ್ಕೆ ಮನಸೋಲದವರಿಲ್ಲ. ಆದರೆ ಈ ಭರಾಟೆಯಲ್ಲಿ ಚೆಂದವಿಲ್ಲದ್ದನ್ನು ತಿರಸ್ಕರಿಸೋದು ಪ್ರಮಾದವೇ ಸರಿ. ವಾಸ್ತವವಾಗಿ `ಚೆಂದವಿಲ್ಲದ್ದು’ ಎನ್ನುವ ಯಾವ ವಸ್ತುವೂ, ಜೀವಿಯೂ ಸೃಷ್ಟಿಯಲ್ಲಿ ಇಲ್ಲ. `ಆಹ್! ಚೆಂದವಿದೆ ಎಂದುಕೊಳ್ಳುವ ಕ್ಷಣದಲ್ಲೇ ಕುರೂಪವೂ ಹುಟ್ಟಿಕೊಳ್ಳುತ್ತೆ’ ಎನ್ನುತ್ತದೆ […]