ರಾಮಕೃಷ್ಣ ಪರಮಹಂಸರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದರಿಂದ ಎಂಥಾ ಕಷ್ಟದ ಕಾರ್ಯವನ್ನೂ ಸಾಧಿಸಬಹುದು ಎಂದು ದೃಷ್ಟಾಂತಗಳ ಮೂಲಕ ಹೇಳುತ್ತಿದ್ದರು. ಸಾಧನೆಯ ಹಾದಿಯಲ್ಲಿ ತೊಡಕುಗಳು ಎದುರಾಯಿತೆಂದು ಶಿಷ್ಯರು ಅವರ ಬಳಿ ಬಂದಾಗೆಲ್ಲ ಅವರು ಛಲ ಬಿಡದೆ ಪ್ರಯತ್ನ ಮುಂದುವರೆಸಿ ಎಂದೇ ಹೇಳುತ್ತಿದ್ದುದು. ಅಂತಹ ಒಂದು ಪ್ರಸಂಗದಲ್ಲಿ ನೀಡಿದ ಬೋಧನೆ ಇಲ್ಲಿದೆ: ಸಮುದ್ರದಲ್ಲಿ ಒಮ್ಮೆ ಮುಳುಗಿದಾಗ ಅಲ್ಲಿ ಮುತ್ತು ಸಿಗದೇ ಇದ್ದರೆ ಅಲ್ಲಿ ಮುತ್ತೇ ಇಲ್ಲವೆಂದು ತಿಳಿಯಬೇಡಿ. ಸಮುದ್ರದಲ್ಲಿ ಲೆಕ್ಕವಿಲ್ಲದಷ್ಟು ಮುತ್ತುಗಳು ಹುದುಗಿವೆ. ಸ್ವಲ್ಪ ಸಾಧನೆಯನ್ನು ಮಾಡಿದ ಮೇಲೆ ಫಲ ದೊರೆಯುವ […]