ಮನೋಚಾಂಚಲ್ಯ ನಿವಾರಿಸಿ ಸ್ಥಿರತೆ ನೀಡುವ ಶ್ರೀ ಶಿವ ಸ್ತೋತ್ರ ~ ನಿತ್ಯ ಪಾಠ

ಮಹಾದೇವ ಶಿವನ ನಿಲುವನ್ನೂ ಮಹಿಮೆಯನ್ನೂ ವರ್ಣಿಸುವ 6 ಶ್ಲೋಕಗಳ ಸ್ತೋತ್ರಮಾಲೆಯ ಮೂಲಪಾಠ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ. ಭಕ್ತಿಯಿಂದ ಸ್ತೋತ್ರ ಪಠಣ ಮಾಡಿ, ಶ್ರದ್ಧೆಯಿಂದ ಭಗವಂತನಲ್ಲಿ ಮನಸ್ಸು ನಿಲ್ಲಿಸಿದರೆ ಏಕಾಗ್ರತೆ ಸಿದ್ಧಿಯಾಗಿ, ಮನೋಶುದ್ಧಿಯಾಗಿ, ಸ್ಥಿರತೆ ನೆಲೆಯಾಗುವುದು. ನಿಖಿಲಭುವನಜನ್ಮಸ್ಥೇಮಭಂಗಪ್ರರೋಹಾಃ ಅಕಲಿತಮಹಿಮಾನಃ ಕಲ್ಪಿತಾ ಯತ್ರ ತಸ್ಮಿನ್ | ಸುವಿಮಲಗಗನಾಭೇ ಈಶಸಂಸ್ಥೇsಪ್ಯನೀಶೇ ಮಮಭವತು ಭವೇsಸ್ಮಿನ್ ಭಾಸುರೋ ಭಾವಬಂಧಃ ||1|| ಭಾವಾರ್ಥ : ಮಹಾದೇವ ಶಿವನ ಹಿರಿಮೆಯನ್ನು ವರ್ಣಿಸಲಸದಳ. ಅವನು ಆಕಾಶದಂತೆ ನಿರ್ಮಲ. ಸಮಸ್ತ ಬ್ರಹ್ಮಾಂಡದ ಉತ್ಪತ್ತಿ, ಪಾಲನೆ, ಪ್ರಳಯಗಳು ನಡೆಯುವುದು ಅವನಲ್ಲಿಯೇ. […]