ಸೋಲುವುದು ಸುಲಭವಲ್ಲ, ಮೊದಲು ಅದನ್ನು ಕಲಿಯೋಣ : ಅಧ್ಯಾತ್ಮ ಡೈರಿ

ಕೆಲವೆಡೆ ನಾವು ಸೋಲುವುದೇ ಹೆಚ್ಚು ಲಾಭಾದಯಕವಾಗಿರುತ್ತದೆ. ಕೆಲವು ಸೋಲುಗಳು ಜಾಣತನವೆನಿಸುತ್ತವೆ ಕೂಡಾ. ಸೋಲು ನಮಗೆ ಗೆಲುವಿನ ಅವಕಾಶಗಳನ್ನು ನಿಚ್ಚಳಗೊಳಿಸುವ ಸಂಗತಿ ~ ಅಲಾವಿಕಾ

ಅಧ್ಯಾತ್ಮ ಡೈರಿ : ನನಗೇ ಏಕೆ ಹೀಗಾಗುತ್ತದೆ?

ನಿಮ್ಮ ಬದುಕು ಸುಂದರವಾಗಿರಬೇಕು ಎಂದಾದಲ್ಲಿ, ನೀವು ಒಂದು ಮಾತು ನೆನಪಿಟ್ಟುಕೊಳ್ಳಬೇಕು; ಅದು, “ಹೋಲಿಕೆಗಿಂತ ಕುರೂಪವಾದುದು ಸೃಷ್ಟಿಯಲ್ಲಿ ಯಾವುದೂ ಇಲ್ಲ” ಅನ್ನೋದು. ಈ ಕುರೂಪ ನಮ್ಮ ಅಂತರಂಗ ಹೊಕ್ಕಿತೆಂದರೆ, ನಮ್ಮ ಜೀವನ ಸೌಂದರ್ವೇ ನಾಶವಾಗಿ ಹೋಗುತ್ತದೆ. ಸದಾ ಅತೃಪ್ತಿ ನಮ್ಮಲ್ಲಿ ಮನೆ ಮಾಡುತ್ತದೆ. ಈ ಅತೃಪ್ತಿಯೇ ಬಹಳ ಬಾರಿ ನಮ್ಮ ಯಶಸ್ಸಿಗೆ ಅಡ್ಡಿಯಾಗೋದು ~ ಅಲಾವಿಕಾ “ನಾನು ಯಾವ ಕೆಲಸ ಮಾಡಲು ಹೋದರೂ ಸುಸೂತ್ರ ಆಗೋದಿಲ್ಲ. ನನಗಿಂತ ಕಡಿಮೆ ಎಫರ್ಟ್ ಹಾಕಿದ್ರೂ ಅವರದು ಆಗಿಬಿಡತ್ತೆ. ಯಾಕೆ ಯಾವಾಗ್ಲೂ ನನಗೇ […]

ನಿಮಗಾಗಿ ನೀವು ಓಡಿ, ಸ್ಪರ್ಧೆಗಾಗಿ ಅಲ್ಲ : ಬೆಳಗಿನ ಹನಿ

  ನಿಮಗಾಗಿ ನೀವು ಗುರಿ ನಿಕ್ಕಿ ಮಾಡಿಕೊಳ್ಳಿ, ನಿಮ್ಮ ಓಟ ನೀವು ಓಡಿ. ನೀವು ನಿಗದಿಪಡಿಸಿಕೊಂಡ ಅವಧಿಯಲ್ಲಿ ಗುರಿ ತಲುಪುವಿರೋ ಇಲ್ಲವೋ ಗಮನಿಸಿ. ಸಾಧ್ಯವಾಗದೆ ಹೋದರೆ, ಗುರಿಯ ವ್ಯಾಪ್ತಿಯನ್ನೆ ಒಂದಷ್ಟು ಚಿಕ್ಕದಾಗಿಸಿಕೊಳ್ಳಿ. ಇದರಿಂದ ನಷ್ಟವೇನಾಗದು. ನೀವು ಯಾರಿಗೂ ಏನನ್ನೂ ಪ್ರೂವ್ ಮಾಡಬೇಕಿಲ್ಲ. ನೀವು ಖುಷಿಯಿಂದ ಇರುವುದಷ್ಟೆ ಮುಖ್ಯ ~ ಚೈತನ್ಯ ಬಹುತೇಕವಾಗಿ ನಾವೆಲ್ಲರೂ ನಮ್ಮ ವೈಫಲ್ಯಗಳನ್ನು ಯಾರ ಮೇಲಾದರೂ ಹೊರಿಸಿ ಪಾರಾಗುವ ಯೋಚನೆಯನ್ನು ಮಾಡುತ್ತಿರುತ್ತೇವೆ. ಹೀಗೆ ನಮ್ಮ ಸೋಲಿನ ಹೊಣೆ ಹೊರಲಿಕ್ಕೆ ಸುಲಭವಾಗಿ ಸಿಗುವ ಹೆಗಲು ‘ವಿಧಿ’ಯದ್ದು. […]

ತಾವೋ ತಿಳಿವು #28 ~ ಇವರು ತಾವೋದಲ್ಲಿ ಮಗ್ನರು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಅತ್ಯುತ್ತಮ ಕ್ರೀಡಾಪಟುವಿಗೆ ಸರಿ ಸಮನಾದ ಸ್ಪರ್ಧಿಯ ಬಯಕೆ. ಅತ್ಯುತ್ತಮ ದಂಡನಾಯಕನಿಗೆ ವೈರಿಯ ಮನಸ್ಸನ್ನು ನಿಯಂತ್ರಿಸುವ ಇಚ್ಛೆ. ಅತ್ಯುತ್ತಮ ವ್ಯಾಪಾರಿ ಸುತ್ತ ಮುತ್ತಲಿನವರ ಹಿತವನ್ನು ಬಯಸುತ್ತಾನೆ. ಅತ್ಯುತ್ತಮ ನಾಯಕ ಜನರ ಅವಶ್ಯಕತೆಗಳನ್ನು ಹಿಂಬಾಲಿಸುತ್ತಾನೆ. ಈ ಯಾರಿಗೂ ಸ್ಪರ್ಧೆಯ ಹಂಬಲವಿಲ್ಲ. ಸ್ಪರ್ಧೆಯ ಬಗ್ಗೆ ತಕರಾರಿಲ್ಲದಿದ್ದರೂ ಸ್ಪರ್ಧೆಗಿಂತ ಆಟದ ಬಗ್ಗೆಯೇ ಹೆಚ್ಚು ಆಸಕ್ತಿ. ಈ ವಿಷಯದಲ್ಲಿ ಇವರು ಮಕ್ಕಳಂತೆ ಪೂರ್ತಿಯಾಗಿ ತಾವೋದಲ್ಲಿ ಮಗ್ನರು.

ಆತ್ಮಾವಿಶ್ವಾಸದಿಂದಲೇ ಸಿದ್ಧಿಸುವುದು ಗೆಲುವು

ಎಲ್ಲಿಯವರೆಗೆ ಗೆಲುವನ್ನು ನಾವು ಅನಿವಾರ್ಯ ಎಂದು ಭಾವಿಸುವುದಿಲ್ಲವೋ, ಅದನ್ನು ಜೀವನದೊಂದಿಗೆ ತಾದಾತ್ಮ್ಯಗೊಳಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ಅದಕ್ಕಾಗಿ ನಮ್ಮ ಸಂಪೂರ್ಣ ಬದ್ಧತೆ, ಸಾಮರ್ಥ್ಯ, ಕೌಶಲ್ಯಗಳನ್ನು ಧಾರೆ ಎರೆಯುವುದಿಲ್ಲ. ನಮ್ಮ ಆತ್ಮ ವಿಶ್ವಾಸದ ಪ್ರಮಾಣ ಹೆಚ್ಚಿಸಿಕೊಳ್ಳುವುದಿಲ್ಲ. ಯಾವಾಗ ಅದು ಬದುಕಿನ ಪ್ರಶ್ನೆಯಾಗುತ್ತದೋ ಆಗ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಶುರುವಿಡುತ್ತೇವೆ. ಸೋಲು ಮತ್ತು ಗೆಲುವು ಸಾಂದರ್ಭಿಕ ಸತ್ಯಗಳು. ಇವೆರಡೂ ತಾತ್ಕಾಲಿಕ. ಆದರೆ ಈ ಎರಡು ಸಂಗತಿಗಳು ಹಲವು ಆಯಾಮಗಳಲ್ಲಿ ಹಲವು ಪಾಠಗಳನ್ನು ಕಲಿಸುತ್ತವೆ. ಕಲಿಕೆ ಕೇವಲ ಗೆಲುವಿನಲ್ಲಿ ಇರುವುದಿಲ್ಲ. ವಾಸ್ತವದಲ್ಲಿ ಸೋಲುಂಡ […]