ಎಷ್ಟು ಬಗೆಯ ನರಕಗಳಿವೆ, ಅವುಗಳ ಹೆಸರೇನು ಗೊತ್ತೆ? ಇಲ್ಲಿ ನೋಡಿ…

ಮನುಷ್ಯರನ್ನು ಸನ್ಮಾರ್ಗದಲ್ಲಿ ನಡೆಸಲು ದಾನ – ದಂಡ ಮಾರ್ಗ ಹಿಡಿದ ಪೂರ್ವಜರು ವಿವಿಧ ಬಗೆಯ ನರಕಗಳನ್ನೂ ಅಲ್ಲಿ ವಿಧಿಸುವ ಶಿಕ್ಷೆಗಳನ್ನೂ ಭಯಹುಟ್ಟಿಸುವಂತೆ ವಿವರಿಸಿದ್ದಾರೆ. ಅದರಂತೆ, ಭಾಗವತ ಪುರಾಣ & ದೇವಿ ಪುರಾಣ, ವಿಷ್ಣು ಪುರಾಣ, ಮನುಸ್ಮೃತಿ ಮತ್ತು ಬೌದ್ಧ ಧರ್ಮದ ಅಭಿದಮ್ಮ ಕೋಶ ಹೇಳುವ ವಿವಿಧ ಬಗೆಯ ನರಕಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಪ್ರತಿಯೊಂದು ಧರ್ಮವು ತಪ್ಪಿಗೆ ಶಿಕ್ಷೆಯನ್ನೂ ಒಳಿತಿಗೆ ಬಹುಮಾನವನ್ನೂ ಪ್ರೋತ್ಸಾಹಿಸುತ್ತದೆ. ಮನುಷ್ಯರು ತಪ್ಪು ಮಾಡಲು ಹೆದರಲೆಂದು ನರಕಗಳ ಕಲ್ಪನೆಯನ್ನೂ ಒಳಿತನ್ನು ಪ್ರೋತ್ಸಾಹಿಸಲು ಸ್ವರ್ಗದ ಕಲ್ಪನೆಯನ್ನೂ […]

ಶ್ರುತಿ – ಸ್ಮೃತಿಗಳು ಯಾವುವು?: ಸನಾತನ ಸಾಹಿತ್ಯ ~ ಮೂಲಪಾಠಗಳು #1

ಯಾವುದೇ ಧರ್ಮದ ಕುರಿತು ಪ್ರಾಥಮಿಕ ಮಾಹಿತಿ ಹೊಂದಲು ನಾವು ಧಾರ್ಮಿಕ ಮನಸ್ಥಿತಿಯನ್ನು ಹೊಂದಿರಲೇಬೇಕೆಂದಿಲ್ಲ. ಆಯಾ ಧರ್ಮದ ಕುರಿತು ಗೌರವ, ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಈ ತಿಳಿವಳಿಕೆ ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಹಿಂದೂ ಧರ್ಮದ ಕುರಿತು ಕೆಲವು ಪ್ರಾಥಮಿಕ ಸಂಗತಿಗಳ ಮಾಹಿತಿ ಸರಣಿಯನ್ನು ಪ್ರಕಟಿಸುತ್ತಿದ್ದೇವೆ ~ ಅರಳಿ ಬಳಗ ಅತ್ಯಂತ ಪ್ರಾಚೀನ ಧರ್ಮವೆಂದು ಹೇಳಲಾಗುವ ಹಿಂದೂ ಧರ್ಮ, ಧರ್ಮಕ್ಕಿಂತ ಹೆಚ್ಚಾಗಿ ಜೀವನ ಮಾರ್ಗ ಎಂದು ಬಣ್ಣಿಸಲ್ಪಡುತ್ತದೆ. ಸನಾತನವೂ ಬದಲಾವಣೆಗಳಿಗೆ ಅಪರಿಮಿತ ಅವಕಾಶಗಳಿರುವುದರಿಂದ ನಿತ್ಯನೂತನವೂ ಆಗಿರುವ […]