ಪ್ರವಾದಿ ಯೂಸುಫರು ನೀಡಿದ ಸ್ವಪ್ನ ಫಲ ವಿವರಣೆ

ಅರಳಿಮರ ಸಂಗ್ರಹದಿಂದ | ಆಕರ: ಪವಿತ್ರ ಕುರ್ ಆನ್; ಅಧ್ಯಾಯ 12, ಯೂಸುಫ್ ಒಮ್ಮೆ ಅಝೀಝ್ ಎನ್ನುವವನ ಹೆಂಡತಿಯ ಕುತಂತ್ರದಿಂದಾಗಿ ಪ್ರವಾದಿ ಯೂಸುಫರು ಸೆರೆಮನೆಯಲ್ಲಿ ಇರಬೇಕಾಗಿ ಬಂತು. ಅವರನ್ನಿರಿಸಿದ ಸೆರೆಕೋಣೆಗೆ ಇಬ್ಬರು ಗುಲಾಮರು ಬಂದು ಸೇರಿದರು. ಒಂದು ದಿನ ಅವರಲ್ಲೊಬ್ಬನು ತಾನು ಸಾರಾಯಿ ಭಟ್ಟಿ ಇಳಿಸುತ್ತಿರುವುದಾಗಿ ಕನಸು ಕಂಡನು. ಇನ್ನೊಬ್ಬನು, ತನ್ನ ತಲೆಯ ಮೇಲೆ ರೊಟ್ಟಿ ಇರಿಸಿದಂತೆಯೂ ಪಕ್ಷಿಗಳು ಬಂದು ಅದನ್ನು ತಿನ್ನುತ್ತಿರುವಂತೆಯೂ ಕನಸು ಕಂಡನು. ಅವರಿಬ್ಬರೂ ಯೂಸುಫರ ಬಳಿ ಬಂದು, “ನೀವು ಖಂಡಿತವಾಗಿಯೂ ಸಜ್ಜನರೇ ಇದ್ದೀರಿ. ನಿಮಗೆ […]