ನೊಬುಶಿ ಒಬ್ಬ ಸಮುರಾಯ್. ಅವನು ಒಮ್ಮೆ ಝೆನ್ ಗುರು ಹಕುಇನ್ ಬಳಿ ಬಂದ. ಅವನಿಗೆ ಸ್ವರ್ಗ, ನರಕಗಳ ಬಗ್ಗೆ ಕೇಳುವುದಿತ್ತು. “ಮಾಸ್ಟರ್, ಸ್ವರ್ಗ ಎಂದರೇನು? ನರಕ ಎಂದರೇನು?” ಅವನು ಕೇಳಿದ. “ನೀನು ಯಾರು ಅನ್ನೋದನ್ನು ಮೊದಲು ಹೇಳು” ವಿಚಾರಿಸಿದ ಹಕುಇನ್. “ನಾನೊಬ್ಬ ಸಮುರಾಯ್” ನೊಬುಶಿ ಉತ್ತರಿಸಿದ. “ಓಹೋ! ನೀನೊಬ್ಬ ಸಮುರಾಯ್!! ಅಂದರೆ ನೀನು ಯೋಧನೋ?” ಎಂದು ಕೇಳಿದ ಹಕುಇನ್, “ಯಾವ ಮೂರ್ಖ ದೊರೆ ನಿನ್ನನ್ನು ತನ್ನ ರಕ್ಷಣೆಗೆ ಇಟ್ಟುಕೊಳ್ಳುವನು? ನಿನ್ನನ್ನು ನೋಡಿದರೆ ಕೆಲಸಕ್ಕೆ ಬಾರದ ತಿರುಕನಂತೆ ಅನ್ನಿಸುತ್ತದೆ” […]