ಹನಿಯಂತಲ್ಲ, ಕಡಲಿನಂತಿರಬೇಕು; ಬೆರಕೆಯಲ್ಲೂ ಬದಲಾಗದಂತೆ…

ಹನಿಗಳು ಇಂಗಿಹೋಗುತ್ತವೆ. ಅಥವಾ ಇನ್ಯಾವುದರಲ್ಲೋ ಬೆರೆತು, ತಾವೂ ಅದರಂತಾಗಿ ತಮ್ಮನ್ನು ಕಳೆದುಕೊಳ್ಳುತ್ತವೆ. ಅಂಥಾ ಅಗಣಿತ ಹನಿಗಳಿಂದಾದ ಕಡಲು ಮಾತ್ರ ಬತ್ತುವುದೂ ಇಲ್ಲ, ಕಳೆಯುವುದೂ ಇಲ್ಲ. ಎಷ್ಟೆಲ್ಲ ನದಿಗಳು ಬಂದು ಬೆರೆತರೂ ಅದು ಬದಲಾಗುವುದೂ ಇಲ್ಲ! : ಸಾಕಿ ಹನಿ ಹನಿ ಸೇರಿ ಹಳ್ಳ. ಹಳ್ಳಗಳು ತೊರೆಯಾಗಿ, ಭೋರ್ಗರೆವ ನದಿಯಾಗಿ ಹರಿದು ಬಂದು ಕಡಲು ಸೇರುತ್ತದೆ. ಈ ಪಯಣದಲ್ಲಿ ನದಿ ಅದೆಷ್ಟು ಊರುಗಳ ಬೆಟ್ಟ, ಗುಡ್ಡ, ಕಾಡುಗಳ ಮೂಲಕ ಹಾಯ್ದು ಬಂದಿರುತ್ತದೆಯಲ್ಲವೇ? ಹಾಗಾದರೆ ಅದು ಅದೆಷ್ಟು ಸತ್ವಗಳ ತನ್ನೊಳಗೆ ಮೈಗೂಡಿಸಿಕೊಂಡಿರಬಹುದು! […]

ಎರಡು Zen ಹನಿಗಳು

ನಿನಗೆ ಹೇಗೆ ಗೊತ್ತು!? ಒಂದು ದಿನ ಚಾಂಗ್ ತ್ಸು ಮತ್ತು ಅವನ ಗೆಳೆಯ ನದಿಯ ಪಕ್ಕದಲ್ಲಿ ನಡೆಯುತ್ತಿದ್ದರು. `ಈಜುತ್ತಿರುವ ಮೀನು ನೋಡು, ಎಷ್ಟು ಖುಷಿಯಾಗಿದೆ’ ಅಂದ ಚಾಂಗ್ ತ್ಸು. `ನೀನು ಮೀನಲ್ಲ. ಆದ್ದರಿಂದ ಅವು ಖುಷಿಯಾಗಿವೆಯೋ ಇಲ್ಲವೋ ನಿನಗೆ ಗೊತ್ತಾಗುವುದು ಸಾಧ್ಯವಿಲ್ಲ’ ಅಂದ ಗೆಳೆಯ. ಚಾಂಗ್ ತ್ಸುವಿನ ಉತ್ತರ : `ನೀನು ನಾನಲ್ಲ, ಮೀನು ಖುಷಿಯಾಗಿದೆ ಅನ್ನುವುದು ನನಗೆ ಗೊತ್ತಿಲ್ಲ ಅಂತ ನಿನಗೆ ಹೇಗೆ ಗೊತ್ತಾಯಿತು!?’  ಜ್ಞಾನೋದಯ ಶಿಷ್ಯನೊಬ್ಬ ಗುರುವನ್ನು ಕೇಳಿದ: `ಗುರುವೇ, ಜ್ಞಾನೋದಯ ಎಂದರೆ ಏನು?’ […]