ಹನುಮಂತನ 108 ಹೆಸರುಗಳು ಮತ್ತು ಅರ್ಥ ~ ನಿತ್ಯಪಾಠ

ಹನುಮ ಅಷ್ಟೋತ್ತರ ಶತನಾಮಾವಳಿಯಲ್ಲಿ ಹನುಮಂತನ 108 ಹೆಸರುಗಳನ್ನು ಹೇಳಿಕೊಂಡು ನಮಸ್ಕರಿಸವುದು ಪರಿಪಾಠ. ಅಷ್ಟೋತ್ತರ ಶತನಾಮಾವಳಿಯ ಈ 108 ಹೆಸರುಗಳು ಮತ್ತು ಕನ್ನಡ ಅರ್ಥ / ಹಿನ್ನೆಲೆ ಇಲ್ಲಿದೆ : 1.ಆಂಜನೇಯ – ಅಂಜನಿಯ ಪುತ್ರನಿಗೆ ನಮಸ್ಕಾರ 2.ಮಹಾವೀರಾಯ – ವೀರರಲ್ಲಿ ವೀರನಾದವನಿಗೆ ನಮಸ್ಕಾರ 3.ಹನುಮತೇ – ಹನುಮಂತನಿಗೆ ನಮಸ್ಕಾರ 4.ಮಾರುತಾತ್ಮಜಾಯ – ಮರುತ್ತಿನ ಪುತ್ರನಿಗೆ ನಮಸ್ಕಾರ 5.ತತ್ತ್ವಜ್ಞಾನ ಪ್ರದಾಯ – ತತ್ವಜ್ಞಾನಿಯೂ, ತತ್ತ್ವಜ್ಞಾನದ ಅರಿವನ್ನು ನೀಡುವವನೂ ಆದವನಿಗೆ ನಮಸ್ಕಾರ 6.ಸೀತಾದೇವಿ ಮುದ್ರಾ ಪ್ರದಾಯಕಾಯ – ಸೀತಾದೇವಿಯ ಬಳಿ ರಾಮನ […]

ಹನುಮಾನ್ ಚಾಲೀಸಾ : ಪೂರ್ಣ ಪಾಠ ಮತ್ತು ಸರಳ ಕನ್ನಡಾನುವಾದ

ಸಂತ ತುಳಸೀದಾಸರು ರಚಿಸಿದ ಹನುಮಾನ್ ಚಾಲೀಸಾ ಪೂರ್ಣಪಾಠ ಮತ್ತು ಕನ್ನಡದಲ್ಲಿ ಅದರ ಸರಳಾರ್ಥವನ್ನು ಇಲ್ಲಿ ನೀಡಲಾಗಿದೆ….  ದೋಹಾ ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ | ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ || ಶ್ರೀ ಗುರುವಿನ ಚರಣ ಕಮಲಗಳ ದೂಳಿನಿಂದ ಮನವೆಂಬ ಕನ್ನಡಿಯು ಹೇಗೆ ಪವಿತ್ರವಾಗುವುದೋ ಹಾಗೆ ರಘುವರನ ನಿರ್ಮಲ ಯಶೋಗಾಥೆಯ ಸ್ತುತಿಯು ನಮ್ಮನ್ನು ಪವಿತ್ರಗೊಳಿಸುತ್ತದೆ. ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ | ಬಲ ಬುದ್ಧಿ ವಿದ್ಯಾ ದೇಹು […]

ಸೌಗಂಧಿಕಾ ಪುಷ್ಪ ತರಲು ಹೋದ ಭೀಮ, ದಾರಿಗೆ ಅಡ್ಡ ಬಂದ ಹನುಮ! : ಇದೇನು ಕಥೆ?

ದ್ರೌಪದಿ ಕೇಳಿದಳೆಂದು ಭೀಮೇನ ಸೌಗಂಧಿಕಾಪುಷ್ಟ ತರಲು ಹೊರಟ. ನಡುವೆ ಸಾಧಾರಣ ವಾನರನ ರೂಪದಲ್ಲಿ ಅಡ್ಡ ಬಂದ ಹನುಮ ಅವನಿಗೆ ದಾರಿ ಬಿಡದೆ ಸತಾಯಿಸಿದ! ಮಹಾಭಾರತದ ಈ ಕುತೂಹಲಕಾರಿ ಕಥೆ ಓದಿ… ಅದು ಪಾಂಡವರು ವನವಾಸದಲ್ಲಿದ್ದ ಕಾಲ. ಒಂದು ಸಂಜೆ ಭೀಮಸೇನ ದ್ರೌಪದಿಯೊಡನೆ ವಿಹರಿಸುತ್ತಿದ್ದ. ಅದೇವೇಳೆಗೆ ದಿವ್ಯ ಸುಗಂಧ ಸೂಸುತ್ತಾ ಹೂವೊಂದು ಗಾಳಿಯಲ್ಲಿ ತೇಲಿ ಬಂದು ದ್ರೌಪದಿಯ ಪಾದಗಳ ಬಳಿ ಬಿದ್ದಿತು. ಅದರ ಹೆಸರು ಸೌಂಗಧಿಕಾ ಪುಷ್ಟ. ಅದನ್ನು ನೋಡಿ ದ್ರೌಪದಿಗೆ ಬಹಳ ಸಂತೋಷವಾಯಿತು. ಇಂಥಾ ಮತ್ತಷ್ಟು ಹೂಗಳು […]

ಶ್ರೀರಾಮ ಸೂಕ್ತಿ : ಬೆಳಗಿನ ಹೊಳಹು

ಶ್ರೀರಾಮನು ಭಕ್ತಶ್ರೇಷ್ಠನಾದ ಹನುಮನಿಗೆ ನೀಡಿದ ಉಪದೇಶಗಳು ‘ಶ್ರೀ ರಾಮ ಸೂಕ್ತಿ’ಯಲ್ಲಿ ಸಂಕಲನಗೊಂಡಿದೆ. ಅದರಿಂದ ಕೆಲವು ಹೊಳಹುಗಳು, ನಿಮಗಾಗಿ… “ಪರಮಾತ್ಮನ  ನೆರಳೇ  ಎಲ್ಲ ಜೀವಿಗಳಲ್ಲಿ ಜೀವಾತ್ಮನಾಗಿ ಪ್ರತಿಬಿಂಬಿತವಾಗಿದೆ. ವಿಶಾಲವಾದ ಆಕಾಶವೇ ಎಲ್ಲ ನದಿ, ಸರೋವರಗಳಲ್ಲಿ ಪ್ರತಿಬಿಂಬಿಸುತ್ತದೆ” ~ ಶುದ್ಧವಾದ ಜ್ಞಾನವು ಎಲ್ಲ ಆಸೆ ಮತ್ತು ಆಸಕ್ತಿಗಳನ್ನು ಕೊಲ್ಲುತ್ದೆ. ಸಕಾಮಕರ್ಮ ಯಾವುದೇ ಆಗಿರಲಿ, ಅದನ್ನು ಬಿಡಬೇಕು. ಅದು ವ್ಯಕ್ತಿಯನ್ನು ಜನನ – ಮರಣದ ಸಂಕೋಲೆಯಲ್ಲಿ ಬಂಧಿಸುತ್ತದೆ.  ನಿಜವಾದ ಜ್ಞಾನವನ್ನು ಹೊಂದಲು ಅದು ಅಡ್ಡಿಯಾಗುವುದು. ~ ಪಂಚಭೂತಗಳಿಂದ, ಅತ್ಯಂತ ಸೀಮಿತವೂ ನಾಶವುಳ್ಳದ್ದೂ […]