ಪರೀಕ್ಷೆ ಪೆಡಂಭೂತವಲ್ಲ : ಪೋಷಕರು ಮತ್ತು ವಿದ್ಯಾರ್ಥಿಗಳ ಗಮನಕ್ಕೆ…

ಮಕ್ಕಳ ಪಾಲನೆ ಪೋಷಣೆಗೆ ನಾವು ನೀಡುವುದೆಲ್ಲವೂ ನಮ್ಮ ಜವಾಬ್ದಾರಿಯ ಎಚ್ಚರದಿಂದ ಹೊರತು, ಮಕ್ಕಳ ಮೇಲೆ ನಾವು ಹೂಡಿಕೆ ಮಾಡುತ್ತಿಲ್ಲ. ನಮ್ಮ ಹೂಡಿಕೆಯನ್ನು ಲಾಭ ಸಹಿತ ಮರಳಿಸಲು ಮಕ್ಕಳು ಜೀವಂತ ಬ್ಯಾಂಕ್ ಅಲ್ಲ ಎನ್ನುವ ಸತ್ಯವನ್ನು ಮನವರಿಕೆ ಮಾಡಿಕೊಂಡರೆ ಬಹುಶಃ ನಿರೀಕ್ಷೆಗಳಿಂದ ಮುಕ್ತರಾಗಬಹುದು. ಓದಿನ ಮಕ್ಕಳಿರುವ ಮನೆಯಲ್ಲಿ ಮಾರ್ಚ್, ಏಪ್ರಿಲ್ ತಿಂಗಳುಗಳೆಂದರೆ ಕಾವಿನ ಕಾಲ. ಶಿವ ರಾತ್ರಿ ಕಳೆಯುತ್ತಿದ್ದ ಹಾಗೇ ಬೇಸಿಗೆಯ ಧಗೆ ಮಾತ್ರವಲ್ಲ, ವಿದ್ಯಾರ್ಥಿಗಳ ಶಾಲಾ ಪರೀಕ್ಷೆಗಳ ಬಿಸಿಯೂ ಹೊತ್ತಿಕೊಳ್ಳುತ್ತದೆ. ಹಿಂದೆಲ್ಲ ಮುಂದಿನ ತರಗತಿಗೆ ಹೋಗುವ ರಹದಾರಿ […]