'ಲಾ ಚಿತ್ರ

ನಿಮ್ಮ ಹಸಿವೊಂದು ತಪಸ್ಸಾಗಿರಲಿ! ~ ಗಿಬ್ರಾನ್ ಕಾವ್ಯ

ಮೂಲ: ಖಲೀಲ್ ಗಿಬ್ರಾನ್, ‘ದ ಪ್ರಾಫೆಟ್’ ಅನುವಾದ : ಪುನೀತ್ ಅಪ್ಪು. ಛತ್ರ ಕಾಯುತ್ತಿದ್ದ ವೃದ್ಧನೊಬ್ಬ ಕೇಳುತ್ತಿದ್ದ ‘ಆಹಾರ’ದ ಬಗ್ಗೆ ಹೇಳು. ಅಲ್ ಮುಸ್ತಾಫ ನಗುತ್ತಿದ್ದ; ನೀವೇನು ಸಸ್ಯಗಳಂತೆ ಭೂಮಿಯ ಸುಗಂಧದಿಂದ, ಸೂರ್ಯನ ಬೆಳಕಿನಿಂದ ಬದುಕಬಲ್ಲಿರೆ? ಆಹಾರಕ್ಕಾಗಿ ಕೊಲ್ಲಲೇ ಬೇಕಾದರೆ, ಆಗ ತಾನೆ ಜನಿಸಿದ ಕರುವಿನಿಂದ ಅದರ ತಾಯಿಯ ಹಾಲನ್ನು ಕಸಿಯುವುದರಿಂದಲೇ, ನಿಮ್ಮ ದಾಹ ತಣಿಯುವುದಾದರೆ, ನಿಮ್ಮ ಹಸಿವೊಂದು ತಪಸ್ಸಾಗಿರಲಿ! ನಿಮ್ಮ ಒಲೆಗಳನು ಹೊಕ್ಕು ಭಸ್ಮವಾಗುವ ಆ ಪರಿಶುದ್ಧ, ಮುಗ್ಧ ಕಾಡಿನ ಕಟ್ಟಿಗೆಗಳಿಗಿಂತಲೂ ನಿಮ್ಮ ಮನಸ್ಸು ಮುಗ್ಧವಾಗಿರಲಿ! ಆ […]