‘ಸತ್ಯ’ ಎಂದರೇನು? ಸತ್ಯವಂತರಾಗುವುದು ಹೇಗೆ ?

ಕೊಟ್ಟ ಮಾತಿಗೆ ಬದ್ಧನಾಗಿರುವುದು ಹರಿಶ್ಚಂದ್ರನಿಗೆ ಸತ್ಯ ಮಾರ್ಗವಾಯಿತು. ಪ್ರಜಾರಂಜಕನಾಗಿ ಉಳಿಯುವುದು ಶ್ರೀ ರಾಮನಿಗೆ ಸತ್ಯವಾಯಿತು. ದಾನಮಾಡುವುದೇ ಕರ್ಣನಿಗೆ ಸತ್ಯದೆಡೆಗೆ ಹಾದಿಯಾಯಿತು; ಸೀತೆಯಂಥ ಸತಿಯರಿಗೆ ಪಾತಿವ್ರತ್ಯವೇ ಸತ್ಯದ ಸಾಧನೆಯಾಯಿತು. ಹೀಗೆ ಮಹಾ ವ್ಯಕ್ತಿಗಳ ಒಬ್ಬೊಬ್ಬರ ಜೀವನವೂ ಪರಮಸತ್ಯದ ವ್ಯಾಖ್ಯಾನದಂತಿದೆ  ~ ಚೇತನಾ ತೀರ್ಥಹಳ್ಳಿ ಸತ್ಯವಂತರ ಹಾದಿ ಸ್ವಯಂ ಮೋಕ್ಷದ ಹಾದಿ. ಸವಾಲುಗಳ ಹಾದಿ. ಸತ್ಯ ಸಾಧಕರ ಯಾತ್ರೆ ಮೊದಲಾಗುವುದು ತ್ಯಾಗದಿಂದ. ಈ ಹೆಬ್ಬಾಗಿಲಿನ ಮೂಲಕವೇ ಅವರು ಸತ್ಯದ ಗುರಿ ತಲುಪುತ್ತಾರೆ.  ಪ್ರಪ್ರಾಚೀನ ಜ್ಞಾನ ಕಣಜ ಋಗ್ವೇದವು `ಏಕಮ್ ಸತ್ ವಿಪ್ರಾಃ […]

ವಿರಹ ಮತ್ತು ವೈರಾಗ್ಯ : ಸಾಧನೆಯ ಜೋಡಿ ಹಾದಿಗಳು

ವೈರಾಗ್ಯ ಮತ್ತು ವಿರಹ – ಇವೆರಡೂ  ಪರಸ್ಪರ ವಿರೋಧಿ ಅಂಶಗಳು. ರಾಗ ವಿಮುಖತೆಯಿಂದ ವೈರಾಗ್ಯ ಉಂಟಾದರೆ, ರಾಗ ತೀವ್ರತೆಯಿಂದ ವಿರಹ ಉಂಟಾಗುತ್ತದೆ.  ಆದರೂ ಇವೆರಡೂ ತಮ್ಮ ತಮ್ಮ ನೆಲೆಗಟ್ಟಿನಲ್ಲಿ ವ್ಯಕ್ತಿಯನ್ನು ಅಧ್ಯಾತ್ಮಪಥದಲ್ಲಿ ನಡೆಸುವುದು ಹೇಗೆ? ಒಂದು ಮತ್ತೊಂದರ ವಿರೋಧ ಅಂಶ ಎಂದಾದಲ್ಲಿ, ಪರಿಣಾಮವೂ ವಿರೋಧವೇ ಆಗಿರಬೇಕಲ್ಲವೆ? ಹೌದು. ಆದರೆ ಹಾಗೆ ಆಗಲೇಬೇಕೆಂದೇನೂ ಇಲ್ಲ ~ ಗಾಯತ್ರಿ ಮನುಷ್ಯನ ಭಾವ ಪ್ರಪಂಚದಲ್ಲಿ ಅತ್ಯಂತ ಮಧುರವಾದ, ಅಷ್ಟೇ ಯಾತನಾದಾಯಿಯಾದ ಸಂಗತಿ ಏನಾದರೂ ಇದ್ದರೆ, ಅದು ವಿರಹ. ಸಂಬಂಧಗಳನ್ನು ಬೆಸೆದುಕೊಳ್ಳುವ ವ್ಯಕ್ತಿಯ […]