ಬುದ್ಧ ಹೇಳುತ್ತಾನೆ ‘ನಿನಗೆ ನೀನೇ ಬೆಳಕು’ ಎಂದು. ಒಂದರ್ಥದಲ್ಲಿ ಹಫೀಜ್ ಹೇಳುವುದು ಆ ಬೆಳಕನ್ನು ಕಾಣಲು ‘ನಿನಗೆ ನೀನೇ ತೊಡರು; ನಿನ್ನ ನೀನು ದಾಟು’ ಎಂದು ~ ಸಾಕಿ ಸಾಮಾನ್ಯವಾಗಿ ನಾವು ನಮ್ಮ ಕುಂದು ಕೊರತೆಗಳನ್ನು ಮುಚ್ಚಿಟ್ಟುಕೊಳ್ಳುವುದು ಜಾಸ್ತಿ. ಪರಿಪೂರ್ಣ ಮನುಷ್ಯರು ಅಂತ ಯಾರೂ ಇರುವುದಿಲ್ಲ. ಅದರೂ ನಮ್ಮ ಊನಗಳ ಬಗ್ಗೆ ಮಾತಾಡಲು ಧೈರ್ಯ ಸಾಲುವುದಿಲ್ಲ. ಯಾಕೆ ಹೀಗೆ? ಇದಕ್ಕೆ ಮುಖ್ಯ ಕಾರಣ ನಮ್ಮ ಕೀಳರಿಮೆ ಅರ್ಥಾತ್ ನಮ್ಮನ್ನು ನಾವು ಲೋಕದ ದೃಷ್ಟಿಯಲ್ಲಿ ನೋಡಿಕೊಳ್ಳುವ ಅಭ್ಯಾಸ. ಉಳಿದವರು […]
ಹಾಫಿಜ್’ಗೆ ಭಗವಂತ ಹೇಳಿದ್ದು : ಅರಳಿಮರ POSTER
ಭಗವಂತ ಹೇಳಿದ, “ನಿಮ್ಮ ಬದುಕು ನನ್ನನ್ನು ಸೃಷ್ಟಿಸಿದೆ. ನೀವು ಪ್ರತಿಯೊಬ್ಬರ ಆತ್ಮವೂ ನನ್ನನ್ನು ಪೂರ್ಣಗೊಳಿಸುತ್ತದೆ” ~ ಹಾಫಿಜ್ ಸಕಲ ಜಡ ಚೇತನಗಳನ್ನು ಭಗವಂತನ ಸೃಷ್ಟಿ ಎಂದು ನಂಬುವುದಾದರೆ, ಭಗವಂತನೂ ಈ ಸಮಸ್ತದಿಂದ ರೂಪುಗೊಂಡ ಪರಮಶಕ್ತಿಯಾಗಿದ್ದಾನೆ (ಇಲ್ಲಿ ‘ಆಗಿದ್ದಾನೆ’ ಎನ್ನುತ್ತಿರುವುದು ವಾಕ್ಯಬಳಕೆಯ ರೂಢಿಯಿಂದಷ್ಟೆ. ವಾಸ್ತವದಲ್ಲಿ ಭಗವಂತ ಎಂಬ ಆತ್ಯಂತಿಕ ಶಕ್ತಿಯನ್ನು ಗಂಡು – ಹೆಣ್ಣೆಂದು ನಿರ್ವಚಿಸಲು ಬರುವುದಿಲ್ಲ. ಇದು ಲಿಂಗಾತೀತ ಶಕ್ತಿ). ಸೃಷ್ಟಿಯ ಪ್ರತಿಯೊಂದು ಜಡ ಚೇತನಗಳೂ ಭಗವಂತನ ಅಸ್ತಿತ್ವದ ತುಣುಕುಗಳೇ. ತುಣುಕು ಅನ್ನುವುದಕ್ಕಿಂತ, ಭಗವಂತನ ಪ್ರತಿರೂಪಗಳೇ… ಅಥವಾ […]