ವಾರದ ಆರಂಭಕ್ಕೆ ಶ್ರೀ ಮಂಗಲಾಷ್ಟಕಮ್ ಸ್ತೋತ್ರ

ಈ ಸ್ತೋತ್ರದಲ್ಲಿ ಶ್ರೇಷ್ಠ  ಋಷಿಗಳು, ರಾಜರು, ಪರ್ವತಗಳು, ನದಿಗಳ ಉಲ್ಲೇಖವಿದೆ. ಈ ಮಹಾತ್ಮರು ನಡೆದ ದಾರಿಯಲ್ಲಿ ಸಾಗೋಣ ಎಂಬ ಆಶಯದೊಂದಿಗೆ “ಸರ್ವೇ ಸ್ಥಾವರಜಂಗಮಾಃ ಪ್ರತಿದಿನಂ ಕುರ್ವಂತು ನೋ ಮಂಗಲಮ್” – ಎಲ್ಲ ಜಡ ಚೇತನಗಳಿಗೂ ಪ್ರತಿನಿತ್ಯವೂ ಮಂಗಳವೇ ಉಂಟಾಗಲಿ ಎಂಬ ಹಾರೈಕೆ ಇದೆ.  ತಾರತಮ್ಯ ಬಿಟ್ಟು ಹೀಗೆ ಹಾರೈಸಿದರೆ, ಅದರ ಫಲ ನಮಗೂ ದೊರೆಯುತ್ತದೆ.  ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲಭೂಃ ಸೂನುರ್ಗರುತ್ಮಾನ್ ರಥಃ ಪೌತ್ರಶ್ಚಂದ್ರ ವಿಭೂಷಣಃ ಸುರಗುರು ಶೇಷಶ್ಚ ಶಯ್ಯಾ ಪುನಃ | ಬ್ರಹ್ಮಾಂಡಂ ವರ-ಮಂದಿರಂ ಸುರ ಗಣಾಃ ಯಸ್ಯ […]

ತಾವೋ ತಿಳಿವು #8 : ದಾವ್’ನ ಹಾರೈಕೆಗೆ ಪಾತ್ರವಾಗುವುದು

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಕಂಠ ಮಟ್ಟ ಕುಡಿದಿದ್ದನ್ನ ಕಾರಲೇಬೇಕಾಗುತ್ತದೆ. ಆಗ ನೀನು ಕುಡಿದದ್ದೂ ವ್ಯರ್ಥ. ನಾಲಿಗೆ ಹರಿತವಾಗಿಸಿಕೊಂಡರೆ ಬೇಗ ಮೊಂಡಾಗುತ್ತದೆ. ಆಗ ನೀನೇ ಮೂಕ. ಐಶ್ವರ್ಯ ತುಂಬಿ ತುಳುಕೋ ಮನೆಗೆ ಕನ್ನ ಬಿದ್ದೇ ಬೀಳುತ್ತದೆ. ಆಗ ನೀನೇ ದರಿದ್ರ. ಸಂಪತ್ತು, ಅಂತಸ್ತು, ಸೊಕ್ಕು ಎಲ್ಲ ತಮಗೆ ತಾವೇ ಶತ್ರುಗಳು. ಎಲ್ಲವನ್ನೂ ಚಿವುಟಿ ಹಾಕುತ್ತವೆ. ಮಾಡೊದನ್ನೆಲ್ಲ, ಹಿಂದೆ ನಿಂತು ಮಾಡು; ಆಗ ನೀನು ದಾವ್ ನ ಹಾರೈಕೆಗೆ ಪಾತ್ರನಾಗುತ್ತೀಯ.