ರೂಮಿ ಹೇಳಿದ ಕಥೆ : Tea time story

ಜಲಾಲುದ್ದಿನ್ ರೂಮಿಯ ‘ಮಸ್ನವಿ’ ಇಂದ…

ಹಾವಿನ ತಲೆ ಮತ್ತು ಬಾಲ : Tea time story

ಹಾವಿನ ಬಾಲದ ಮೂರ್ಖತನದ ಪರಿಣಾಮವೇನಾಯ್ತು ಗೊತ್ತಾ? | ಸಂಗ್ರಹ ಮತ್ತು ಅನುವಾದ: ಅಲಾವಿಕಾ ಒಂದು ದಿನ ಹಾವಿನ ಬಾಲಕ್ಕೆ ಇದ್ದಕ್ಕಿದ್ದ ಹಾಗೆ ತಲೆಯ ಮೇಲೆ ಮುನಿಸಾಯಿತು. ಯಾವಾಗಲೂ ಅದು ನಿರ್ಧರಿಸುವ ದಿಕ್ಕಿಗೇ ನಾನು ಚಲಿಸಬೇಕಲ್ಲ ಅನ್ನೋದು ಅದರ ದುಮ್ಮಾನ. ಹೇಳಿತು, “ಇನ್ಮೇಲೆ ನಾನೇ ಚಲನೆಯ ದಿಕ್ಕು ನಿರ್ಧರಿಸ್ತೀನಿ. ನೀನು ನನ್ನನ್ನು ಹಿಂಬಾಲಿಸು” ಹಾವಿನ ತಲೆ ನಕ್ಕುಬಿಟ್ಟಿತು. “ಅವೆಲ್ಲ ಆಗೋದಿಲ್ಲ. ಯಾವ ಹಾವಿನ ತಲೆಯೂ ಬಾಲ ಕೊಡೊಯ್ದಲ್ಲಿ ಹೋಗೋದಿಲ್ಲ. ಸುಮ್ಮನೆ ಬಾ” ಅಂದಿತು. ಹಾವಿನ ಬಾಲಕ್ಕೆ ಸಿಟ್ಟು ಬಂದು. […]

ಸೂಪ್’ನಲ್ಲಿ ಹಾವಿನ ತಲೆ ! : ಒಂದು ಝೆನ್ ಕಥೆ ~ Tea time story

ಒಂದು ದಿನ ಝೆನ್ ಆಶ್ರಮಕ್ಕೆ ಝೆನ್ ಮಾಸ್ಟರ್ ಅನಿರೀಕ್ಷಿತವಾಗಿ ಭೇಟಿ ನೀಡಿದ. ಆಶ್ರಮದ ಅಡಿಗೆಯವ ಮಾಸ್ಟರ್ ಗಾಗಿ ವಿಶೇಷ ಸೂಪ್ ತಯಾರಿಸಲು ತರಾತುರಿಯಿಂದ ಸಿದ್ಧತೆ ಮಾಡಿಕೊಳ್ಳತೊಡಗಿದ. ಅವ ಆಶ್ರಮದ ತೋಟಕ್ಕೆ ಹೋಗಿ ಗಡಿಬಿಡಿಯಿಂದ ಒಂದಿಷ್ಟು ತರಕಾರಿ ಕತ್ತರಿಸಿಕೊಂಡು ಬಂದು ರುಚಿಕಟ್ಟಾದ ಸೂಪ್ ತಯಾರಿಸಿದ. ಮಾಸ್ಟರ್, ಅಡಿಗೆಯವ ತಯಾರಿಸಿದ ಸೂಪ್ ಖುಶಿಯಿಂದ ಸೇವಿಸತೊಡಗಿದ. ಅರ್ಧ ಸೂಪ್ ಸೇವಿಸಿದವನಿಗೆ ಅದರಲ್ಲೊಂದು ಹಾವಿನ ಕತ್ತರಿಸಿದ ತಲೆ ಕಾಣಿಸಿತು. ಮಾಸ್ಟರ್ ಸಿಟ್ಟಿನಿಂದ ಅಡಿಗೆಯವನನ್ನು ಕೂಗಿದ. ಅಡಿಗೆಯವ ಮಾಸ್ಟರ್ ಎದುರು ಬಂದು ನಿಂತ. “ […]

ಮನುಷ್ಯನನ್ನು ಸೃಷ್ಟಿಸಿದ ದೇವರು, ಅವನನ್ನು ಕಾಯಲು ನಾಯಿಯನ್ನು ಸೃಷ್ಟಿಸಿದ! : ಸೃಷ್ಟಿಕಥನಗಳು #2

ಪಂಜಾಬಿ ಜನಪದ ಕತೆಗಳ ಪ್ರಕಾರ ದೇವರು ಹಗಲಿರುಳು ಕಷ್ಟಪಟ್ಟು ಮನುಷ್ಯರ ಗೊಂಬೆಗಳನ್ನು ಸೃಷ್ಟಿಸಿದ. ಅದಕ್ಕೆ ಜೀವ ತುಂಬುವ ಮೊದಲೇ ಹಾವು ಬಂದು ಅವನ್ನು ನುಂಗಿ ಹಾಕುತ್ತಿತ್ತು. ಅದಕ್ಕೇ ಅವನ್ನು ಕಾಯಲು ನಾಯಿಯನ್ನು ಸೃಷ್ಟಿಸಿದ…. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಮೊದಲು ಇಡೀ ಸೃಷ್ಟಿಯಲ್ಲಿ ಒಂದು ದೊಡ್ಡದಾದ ಮೊಟ್ಟೆಯಷ್ಟೆ ಇತ್ತು. ಅದರ ಹೊರತಾಗಿ ಏನೂ ಇರಲಿಲ್ಲ. ಒಂದು ದಿನ ಆ ಮೊಟ್ಟೆ ಬಿರುಕು ಬಿಟ್ಟು ಎರಡು ಹೋಳಾಯಿತು. ಮೇಲಿನ ಹೋಳು ಮೇಲಕ್ಕೂ ಕೆಳಗಿನದು ಕೆಳಕ್ಕೂ ಹೋಗಿ […]

ಒಂದು ಫಾರ್ಸಿ ದೃಷ್ಟಾಂತ ಕಥೆ : Tea time story

ಒಬ್ಬ ಕುರುಡ ಮತ್ತು ಒಬ್ಬ ವ್ಯಾಪಾರಿ ಮರುಭೂಮಿಯಲ್ಲಿ ಪ್ರಯಾಣಿಸುತ್ತಿದ್ದರು. ಹಾದಿಯಲ್ಲಿ ಪರಸ್ಪರ ಪರಿಚಿತರಾಗಿ, ಒಳ್ಳೆಯ ಗೆಳೆಯರೂ ಆಗಿಬಿಟ್ಟರು. ಆಮೇಲೆ ಆ ವ್ಯಾಪಾರಿಯೇ ಕುರುಡನ ಜವಾಬ್ದಾರಿ ತೆಗೆದುಕೊಂಡು, ಇಬ್ಬರೂ ಪ್ರಯಾಣ ಮುಂದುವರೆಸಿದರು. ಈ ಪ್ರಯಾಣದಲ್ಲಿ ಅವರ ಗೆಳೆತನ ಗಾಢವಾಗುತ್ತಾ ಹೋಯಿತು. ಅವರಿನ್ನೂ ತಾವು ತಲುಪಬೇಕಾದ ಸ್ಥಳ ತಲುಪಿರಲಿಲ್ಲ. ದಾರಿಯಲ್ಲಿ ಅವರಿಬ್ಬರೂ ಒಂದು ಕಡೆ ಮಲಗಿದ್ದರು. ಮುಂಜಾನೆ ಕುರುಡನಿಗೆ ಮೊದಲು ಎಚ್ಚರವಾಯಿತು. ಅವನು ತಡಕಾಡುತ್ತಲೇ ತನ್ನ ಊರುಗೋಲನ್ನು ಹುಡುಕಲಾರಂಭಿಸಿದ. ರಾತ್ರಿಯ ವೇಳೆ ಮರುಭೂಮಿಯಲ್ಲಿ ವಿಪರೀತ ಚಳಿ ಇರುತ್ತದೆ. ಈ ಚಳಿಗೆ […]

ಸರಿ ತಪ್ಪುಗಳ ನಿರ್ಧಾರವಾಗೋದು ಹೇಗೆ? : ಝೆನ್ ಕಥೆ

ಒಂದು ಝೆನ್ ಕಪ್ಪೆ, ತನ್ನ ಶಿಷ್ಯ ಕಪ್ಪೆಗೆ ಪ್ರಕೃತಿಯಲ್ಲಿನ ಸಮತೋಲನದ ಬಗ್ಗೆ ಪಾಠ ಮಾಡುತ್ತಿತ್ತು. “ನೋಡು, ನೊಣ ಹೇಗೆ ಆ ಹುಳುವನ್ನು ಬಾಯಿಗೆ ಹಾಕಿಕೊಂಡಿತು, ಈಗ ನೋಡು (ನುಂಗುತ್ತಾ) ನಾನು ಹೇಗೆ ಆ ನೊಣವನ್ನು ತಿಂದು ಮುಗಿಸಿದೆ…  ಇದೆಲ್ಲಾ ಪ್ರಕೃತಿಯ ನಿಯಮ.” “ಕೊಂದು ಬದುಕುವುದು ಸಾಧು ಅಲ್ಲ ಅಲ್ಲವೆ?” ಕೇಳಿತು ಶಿಷ್ಯ ಕಪ್ಪೆ. “ಅದು ಹೇಗೆ ಅಂದ್ರೆ……” ಮಾತು ಮುಗಿಸುವುದರ ಮೊದಲೇ, ಒಂದು ಹಾವು ಝೆನ್ ಕಪ್ಪೆಯನ್ನು ನುಂಗಲು ಶುರು ಮಾಡಿತು. “ಹೇಗೆ, ಹೇಗೆ…?” ಕೂಗಿ ಕೇಳಿತು ಶಿಷ್ಯ […]