ಅಧ್ಯಾತ್ಮ ಡೈರಿ : ಉದ್ದನೆಯ ಹಾಸಿಗೆಯನ್ನು ಹೊಂದಿಸುವುದು

ಬಹುತೇಕರ ಪಾಲಿಗೆ ಜೀವನ ಅಂದರೇನೇ ಉದ್ದನೆ ಹಾಸಿಗೆಯನ್ನು ಹೊಂದಿಸುವುದು. ಅವರಿಗೆ ಇದ್ದುರಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕುವುದರಲ್ಲಿ ಆಸಕ್ತಿಯಿಲ್ಲ. ಇಲ್ಲದುದಕ್ಕೆ ಹಂಬಲಪಡದೆ ಸಂತೃಪ್ತರಾಗಿ ಬದುಕುವ ಆಲೋಚನೆ ಮಾಡಲಿಕ್ಕಂತೂ ಅವರಿಂದ ಸಾಧ್ಯವೇ ಇಲ್ಲ! ~ ಅಲಾವಿಕಾ ಕಾಲು ಚಾಚಿ ಮಲಗೋದಂದರೆ ಎಲ್ಲರಿಗೂ ಇಷ್ಟ. ಯಾರು ತಾನೇ ಕಾಲು ಮಡಚಿಕೊಂಡು ಮಲಗುತ್ತಾರೆ? ಕೆಲವರು ಇರುತ್ತಾರೆ. ಹಾಸಿಗೆ ಚಿಕ್ಕದಾಗಿ ಚಾಚಿದ ಕಾಲು ನೆಲದ ಮೇಲೆ ಹೋದರೆ ಅವರಿಗೇನೂ ಚಿಂತೆ ಇಲ್ಲ. ಅವರಿಗೆ ಚಿಕ್ಕ ಹಾಸಿಗೆಯಲ್ಲೂ ಕಾಲುಚಾಚಿ ಮಲಗಿ ನಿದ್ರಿಸುವ ಕಲೆ ಸಿದ್ಧಿಸಿದೆ. ಅವರು […]