ಹಿಂಸೆ ಮತ್ತು ಆತ್ಮರಕ್ಷಣೆ : ಒಂದು ದೃಷ್ಟಾಂತ ಕಥೆ

ಒಂದು ಊರಿನಲ್ಲಿ ನಾಗರಹಾವೊಂದು ದೊಡ್ಡ ಹುತ್ತದಲ್ಲಿ ವಾಸವಿತ್ತು.  ಅದು, ಒಮ್ಮೆ ನಾರದ ಮಹರ್ಷಿಗಳ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯನಾಯಿತು. ಹೀಗೆ ನಾರದರ ಶಿಷ್ಯತ್ವ ವಹಿಸಿದ ಕ್ಷಣದಿಂದಲೇ ಅದು ತನ್ನತನವನ್ನು ಬಿಟ್ಟುಕೊಟ್ಟು ಸಾಧುವಾಗಿಹೋಯಿತು.   ಸರ್ಪ ಸಂನ್ಯಾಸ ತೆಗೆದುಕೊಂಡ ಸುದ್ದಿ ಆ ಊರಿನ ಹುಡುಗರಿಗೆ ಗೊತ್ತಾಯಿತು. ಸದಾ ನಾಲಿಗೆ ಹೊರಹಾಕುತ್ತ ಹೊಂಚು ಹಾಕುತ್ತಿದ್ದ ಸರ್ಪ, ಈಗ ಯಾವಾಗ ನೋಡಿದರೂ ತೆಪ್ಪಗೆ ಬಿದ್ದಿರುತ್ತಿತ್ತು. ಇದು ಹುಡುಗರ ಪಾಲಿಗೊಂದು ಮೋಜಿನಂತಾಯ್ತು. ಅವರು ಹೋಗುತ್ತ-ಬರುತ್ತ ಸರ್ಪದ ಬಾಲ ಹಿಡಿದೆಳೆಯುವುದು, ಕಾಲಿನಿಂದ ಝಾಡಿಸುವುದು, ಕಲ್ಲು […]

ತಾವೋ ತಿಳಿವು #19 ~ ಹಿಂಸೆ ಅಂಟುರೋಗ, ಉದ್ದೇಶ ಎಷ್ಟೇ ಒಳ್ಳೆಯದಾದರೂ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋ ಮಾರ್ಗದಲ್ಲಿ ಹತೋಟಿಗೆ ಬಲಪ್ರಯೋಗ , ಗೆಲುವಿಗೆ ಆಯುಧ, ನಿಷಿದ್ಧ. ಸೈನಿಕರು ಓಡಾಡಿದಲ್ಲೆಲ್ಲ ಬೆಳೆದು ನಿಂತಿವೆ ಮುಳ್ಳಿನ ಪೊದೆಗಳು. ಹಿಂಸೆ ಅಂಟುರೋಗ, ಉದ್ದೇಶ ಎಷ್ಟೇ ಒಳ್ಳೆಯದಾದರೂ…. ನಿಜದ ನಾಯಕ ಯುದ್ಧದ ನಂತರ ನೆಲೆಗೊಳ್ಳುವ ಶಾಂತಿಯ ಬುಡದಲ್ಲಿ ಮಲಗಿರುವ ಜ್ವಾಲಾಮುಖಿ ಕಾಣಬಲ್ಲ. ಅದಕ್ಕೇ ಅವನಿಗೆ ಯುದ್ಧದ ಬಗ್ಗೆ ಹೆಮ್ಮೆಯಿಲ್ಲ. ಅವನಿಗೆ ತನ್ನ ಬಗ್ಗೆ ನಂಬಿಕೆ ಆದ್ದರಿಂದ ಬೇರೆಯವರ ಮನ ಒಲಿಸುವುದಿಲ್ಲ, ಅವನಿಗೆ ತನ್ನ ಬಗ್ಗೆ ಸಮಾಧಾನ […]