ಮೊದಲ ಹೆಜ್ಜೆ ಪ್ರಯಾಣಕ್ಕೆ ಮುನ್ನುಡಿ : ಅರಳಿಮರ POSTER

ನೆಲಕ್ಕೂರಿದ ಹೆಜ್ಜೆಯನ್ನು ಎತ್ತಿಡದೆ ನಡಿಗೆ ಸಾಧ್ಯವಾಗುವುದೇ? ನಡಿಗೆ ಸಾಧ್ಯವಾಗದೆ ಪ್ರಯಾಣ ಸಾಧ್ಯವಾಗುವುದೇ? ಆ ಮೊದಲ ಹೆಜ್ಜೆಯೇ ಸಾವಿರಾರು ಮೈಲುಗಳ ಪ್ರಯಾಣಕ್ಕೆ ಮುನ್ನುಡಿಯಾಗಿದೆ! ನೆಲದ ಮೇಲೆ ಊರಿದ ಕಾಲನ್ನು ತೆಗೆಯದೆ ನಡಿಗೆ ಸಾಧ್ಯವಿಲ್ಲ. ನಡಿಗೆ ಸಾಧ್ಯವಾಗದೆ ಹೋದರೆ ಪ್ರಯಾಣವೂ ಸಾಧ್ಯವಿಲ್ಲ. “ಒಂದು ಹೆಜ್ಜೆ ಎತ್ತಿಡುವ ಮೂಲಕ ಸಾವಿರಾರು ಮೈಲುಗಳ ಪ್ರಯಾಣ ಆರಂಭವಾಗುತ್ತದೆ” ಎಂದು ಲಾವೋತ್ಸು ಹೇಳಿದ್ದನ್ನು ಹೀಗೆ ಅರ್ಥೈಸಬಹುದು.  ನಾವು ನೆಲಕ್ಕಂಟಿಕೊಂಡಿರುತ್ತೇವೆ. ನಮಗೆ ನೆಲೆಯೂರಿದ ಹೆಜ್ಜೆಯನ್ನು ಎತ್ತಲು ಭಯ. ಎಲ್ಲಿ ನೆಲೆ ಕಳೆದುಕೊಂಡುಬಿಡುತ್ತೇವೋ ಎಂದು ಆತಂಕ. ಆದ್ದರಿಂದಲೇ ನಾವು  […]

ಗುರುತೆಂಬುದು ಕಡಲ ತಡಿಯ ಗೂಡು

ಶಾಶ್ವತತೆಯ ವ್ಯಸನವು ನಮ್ಮಲ್ಲಿ ಸ್ವಾರ್ಥ ಬುದ್ಧಿಯನ್ನೂ ಮಾತ್ಸರ್ಯವನ್ನೂ ಬೆಳೆಸುತ್ತದೆ. ನಮ್ಮ ಅಪೇಕ್ಷೆ ಕೈಗೂಡದೆ ಹೋಗಬಹುದು ಎನ್ನುವ ಅಸ್ಥಿರತೆ ನಮ್ಮನ್ನು ಕ್ರೋಧಕ್ಕೆಡೆ ಮಾಡುತ್ತದೆ. ಎಷ್ಟೆಂದರೂ ಅಸಹಾಯಕತೆಯೇ ಕೋಪಕ್ಕೆ ಮೂಲವಲ್ಲವೆ? ಈ ಎಲ್ಲದರ ಮೊತ್ತವಾಗಿ ಖಿನ್ನತೆ, ಸಂಕುಚಿತತೆಗಳು ನಮ್ಮಲ್ಲಿ ಮೊಳೆಯುತ್ತವೆ ~ ಆನಂದಪೂರ್ಣ ಚಿಕ್ಕ ಮಕ್ಕಳು ಕಡಲ ತಡಿಯಲ್ಲಿ ಕಪ್ಪೆ ಗೂಡು ಕಟ್ಟಿ ನಲಿಯುತ್ತವೆ. ಎಷ್ಟು ಬಾರಿ ಸಾಗರದಲೆಗಳು ಬಂದು ಮರಳಿನ ಗೂಡು ಕೆಡವಿ ಸೆಳೆದೊಯ್ದರೂ ಅವಕ್ಕೆ ಬೇಸರವಿಲ್ಲ. ಅದೇ ಹಿಂದಿನ ಉತ್ಸಾಹದಲ್ಲಿ ಚಪ್ಪಾಳೆ ತಟ್ಟುತ್ತ ಪುನಃ ಗೂಡು ಕಟ್ಟುವ […]