‘ಮಹಿಳೆಯರಿಗೆ ಪ್ರತ್ಯೇಕ ಸಂದೇಶವೇಕೆ?’ : ಸ್ವಾಮಿ ವಿವೇಕಾನಂದ

“ಭಾರತದ ಮಹಿಳೆಯರಿಗೆ ನಿಮ್ಮ ಸಂದೇಶವೇನು?” ಎಂಬ ಪ್ರಶ್ನೆಗೆ ಸ್ವಾಮೀಜಿ, “ಮಹಿಳೆಯರಿಗೆ ಪ್ರತ್ಯೇಕವಾಗಿ ಹೇಳುವಂತದೇನೂ ಇಲ್ಲ. ಪುರುಷರಿಗೆ ಏನು ಹೇಳುತ್ತಾ ಬಂದಿದ್ದೇನೋ, ಅದು ಮಹಿಳೆಯರಿಗೂ ಅನ್ವಯಿಸುತ್ತದೆ. ಸಬಲರಾಗಿ, ಶ್ರದ್ಧೆ ಇರಲಿ, ಲಜ್ಜೆ ಪಡಬೇಕಿಲ್ಲ, ಧೀರರಾಗಿ” ಅಂದಿದ್ದರು ~ ಸಾ.ಹಿರಣ್ಮಯಿ ಭಾರತ ವೈರುಧ್ಯಗಳ ಸಂಗಮ. ಒಂದು ತುದಿಯಲ್ಲಿ ‘ಅಹಂ ಬ್ರಹ್ಮಾಸ್ಮಿ’, ‘ತತ್ವಮಸಿ’ ಮೊದಲಾದ ಉನ್ನತ ಆಧ್ಯಾತ್ಮಿಕ ಚಿಂತನೆಗಳು, ಇನ್ನೊಂದು ತುದಿಯಲ್ಲಿ ಅಸ್ಪೃಶ್ಯತೆಯ ಆಚರಣೆ. ಹಾಗೆಯೇ ಒಂದೆಡೆ ಹೆಣ್ಣನ್ನು ಮಾತೆ, ದೇವಿ ಎಂದು ಪೂಜಿಸುವುದು, ಮತ್ತೊಂದೆಡೆ ಅವಳಿಗೆ ಸಹಜ ಬದುಕನ್ನು ನಿರಾಕರಿಸುವುದು. […]