ಹೋಜ ಮತ್ತು ಉಪವಾಸ ತಪ್ಪಿಸಿದ್ದ ಹೆಂಗಸು : ಸೂಫಿ ಕಥೆ

ಒಮ್ಮೆ ಒಬ್ಬ ಹೋಜ (ಶಿಕ್ಷಕ) ಸಂತೆಯಲ್ಲಿ ಆಲಿವ್ ಹಣ್ಣುಗಳನ್ನು ಮಾರುತ್ತ ನಿಂತಿದ್ದ. ಎಷ್ಟು ಗಂಟಲು ಹರಿದುಕೊಂಡು ಕೂಗಿದರೂ ಗ್ರಾಹಕರು ಅವನ ಕಡೆ ಬರುತ್ತಿರಲಿಲ್ಲ. ಸಂಜೆಯಾದರೂ ಅವನ ಬುಟ್ಟಿಯ ಹಣ್ಣುಗಳು ಹಾಗೇ ಉಳಿದುಹೋಗಿದ್ದವು. ಇನ್ನೇನು ಮನೆಗೆ ಹೋಗುವ ಹೊತ್ತಾಯಿತು ಅಂದುಕೊಳ್ಳುವಾಗ ಒಬ್ಬ ಹೆಂಗಸು ಅವನ ಮುಂದೆ ಹಾದುಹೋದಳು. ಹೋಜನು ಅವಳನ್ನು ಗಟ್ಟಿಯಾಗಿ ಕೂಗಿ ಕರೆದ. “ಬಹಳ ರುಚಿಯಾದ ಹಣ್ಣುಗಳು. ಸ್ವಲ್ಪವಾದರೂ ಕೊಂಡುಕೊಳ್ಳಿ” ಎಂದು ಮನವೊಲಿಸಲು ಯತ್ನಿಸಿದ. ಆಕೆ “ನಾನು ಹಣ ತಂದಿಲ್ಲ” ಅಂದಳು. ಹೋಜ, “ಅಡ್ಡಿ ಇಲ್ಲ. ಹಣ […]