ದೇಹಬೋಧೆಯಿಂದ ಜನಿಸಿದ ಈ ‘ನಾನು’ ಭಾವವನ್ನು ‘ದೇಹ ಬುದ್ಧಿ’ ಎಂದು ಕರೆಯಲಾಗುತ್ತದೆ. ಈ ದೇಹಬುದ್ಧಿಯ ಅಭಾವ ಉಂಟಾದರೆ ನಾವು ಇತರರೊಂದಿಗೆ ಸಂಬಂಧ ಹೊಂದಲು ಸಾಧ್ಯವಾಗುವುದಿಲ್ಲ. ಇನ್ನೊಬ್ಬರೊಂದಿಗೆ, ಅನ್ಯರೊಂದಿಗೆ ಸಂಬಂಧ ಸಾಧಿಸಲು ದೇಹಭಾವ, ನಾನು ಭಾವ ಇರುವುದು ಪರಮ ಅವಶ್ಯಕ ~ WHOSOEVER JI ಚೇತನವು ಎಲ್ಲ ಶರೀರಗಳಲ್ಲಿಯೂ ಒಂದೇ ರೀತಿ ಇರುತ್ತದೆ. ಶರೀರದಲ್ಲಿ ಚೇತನವು ಇರದಿದ್ದರೆ ಅದು ಮೃತವಾಗುತ್ತದೆ ಮತ್ತು ರಿಸೈಕಲ್ ಆಗಲು, ಪುನರ್ಬಳಕೆಗೆ ಒದಗಲು ಸಿದ್ಧವಾಗುತ್ತದೆ. ಆದ್ದರಿಂದ ಎಲ್ಲಿಯೂ “ನಾನು” ಎನ್ನುವ ಸಂಗತಿಗೆ ಅವಕಾಶವೇ ಇರುವುದಿಲ್ಲ. ಯಾವ […]
ಶಿವೋSಹಮ್ ಸರಣಿ ~ 5 : ಹಾಗಾದರೆ ನಿಜ ಯಾವುದು!?
ಕನ್ನಡಿಯಲ್ಲಿ ಅದೆಷ್ಟೋ ಬಿಂಬಗಳು ಮೂಡುತ್ತವೆ, ಅಳಿಯುತ್ತವೆ. ಆದರೆ ಕನ್ನಡಿ ಆ ಯಾವುದರಿಂದಲೂ ಪ್ರಭಾವಿತವಾಗುವುದಿಲ್ಲ. ಯಾವ ಬಿಂಬದ ಮೇಲೂ ಒಡೆತನ ಸಾಧಿಸಿ “ಇದು ನಾನು” ಎನ್ನುವುದಿಲ್ಲ. ನಾನು ಕೂಡ ಆ ಕನ್ನಡಿಯಂತೆ ಯಾರಿಂದಲೂ ಆಕರ್ಷಣೆ – ವಿಕರ್ಷಣೆಗಳಿಗೆ ಒಳಗಾಗುವುದಿಲ್ಲವೆಂದು ಅರಿತಿದ್ದೇನೆ. ಅದರಂತೆಯೇ ನಾನು ಸಾಕ್ಷಿ ಮಾತ್ರವಾಗಿ, ಕೇವಲ ದ್ರಷ್ಟಾ (ನೋಡುಗ) ಆಗಿ ಅಲಿಪ್ತನಾಗಿರುತ್ತೇನೆ : Whosoever JI ನಾನೀಗ ನಿಮಗೆ ಹೇಳ್ತಿರೋದು ಶುದ್ಧ ಪ್ರಾಯೋಗಿಕ ಸಂಗತಿ. ಸಾಧಕನಿಗೆ, ಸಾಧನೆಗೆ ಅತ್ಯಗತ್ಯವಾಗಿರುವುದನ್ನೇ ನಾನು ಹೇಳ್ತಿದ್ದೀನಿ. ನಡು ನಡುವೆ ಅಲ್ಪ ಸ್ವಲ್ಪ […]