ಸಾದಿ ಹೇಳಿದ್ದು… : ಅರಳಿಮರ POSTER

ಪಂಡಿತರೊಡನೆ ವಾಗ್ವಾದಕ್ಕಿಳಿದು ನಿಮ್ಮ ಬುದ್ಧಿವಂತಿಕೆಯ ಪ್ರದರ್ಶನ ಮಾಡುತ್ತಿದ್ದೇವೆ ಅಂದುಕೊಳ್ಳಬೇಡಿ. ವಾಸ್ತವದಲ್ಲಿ ಅವರು ನಿಮ್ಮ ಮೌಢ್ಯಕ್ಕೆ ಮರುಕ ಪಡುತ್ತಿರುತ್ತಾರೆ. ~ ಸಾದಿ ಶಿರಾಜಿ | ಸೂಫಿ ಕವಿ

ಚಿಕ್ಕದೊಂದು ಕದಲುವಿಕೆ ಸಾಕು : ಅರಳಿಮರ POSTER

ಚಿಕ್ಕದೊಂದು ಕದಲುವಿಕೆ ಸಾಕು, ಬಿಂಬ ಕನ್ನಡಿಯಾಚೆ ಹೋಗಲು ~ ಅಲಾವಿಕಾ ಎಲ್ಲ ಸುಖ ದುಃಖಗಳೂ, ಎಲ್ಲ ಘಟನೆಗಳೂ ಕನ್ನಡಿ ಮೇಲಿನ ಬಿಂಬಗಳಷ್ಟೆ. ಯಾವುದೂ ಶಾಶ್ವತವಲ್ಲ. ಪ್ರತಿಯೊಂದೂ ತಾತ್ಕಾಲಿಕ, ಕನ್ನಡಿ ಮೇಲಿನ ಪ್ರತಿಬಿಂಬದಂತೆ. ನಾವು ಅವನ್ನು ಶಾಶ್ವತ ಚಿತ್ರಗಳಂತೆ ಚಿತ್ತ ಭಿತ್ತಿಯ ಮೇಲೆ ತೂಗಿ ಹಾಕಿಕೊಳ್ಳುತ್ತೇವೆ. ಬಂದೊದಗಿದ ದುಃಖ ಶಾಶ್ವತವೋ ಎಂಬಂತೆ ಯಾತನೆ ಪಡುತ್ತೇವೆ. ಸುಖ ಶಾಶ್ವತವೋ ಎಂಬಂತೆ ಮೆರೆದಾಡುತ್ತೇವೆ. ಅಧಿಕಾರ ಶಾಶ್ವತ ಅನಿಸಿಬಿಟ್ಟರೆ, ಅದರ ದುರ್ಬಳಕೆ ಮಾಡುತ್ತೇವೆ. ಅವೆಲ್ಲ ಅದೆಷ್ಟು ಅಳ್ಳಕ ಎಂಬುದು ನಮ್ಮ ಗಮನಕ್ಕೆ ಬರುವುದೇ […]

ಸೂಫಿ ಇಬ್ನ್ ಅರಬಿ ಹೇಳಿದ್ದು : ಅರಳಿಮರ POSTER

ಪ್ರೇಮದ ಕಾರವಾನು ಯಾವ ಹಾದಿ ನಡೆಯುವುದೋ ಅದೇ ನನ್ನ ಧರ್ಮ. ನಾನು ಪ್ರೇಮ ಪಥಿಕ ! ~ ಇಬ್ನ್ ಅರಬಿ ಇದು ಬಹಳ ಸ್ಪಷ್ಟವಿದೆ. ದ್ವೇಷ ಲೋಕವನ್ನು ನಾಶ ಮಾಡುತ್ತದೆ; ಪ್ರೇಮ ಬೆಸೆಯುತ್ತದೆ. ಎಲ್ಲ ಜಡ – ಚೇತನಗಳ ನಡುವೆ, ಜೀವ – ಜೀವಗಳ ನಡುವೆ, ಮನಸ್ಸು – ಆಲೋಚನೆಗಳ ನಡುವೆ, ಆಲೋಚನೆ – ಕೃತಿಗಳ ನಡುವೆ ಸೌಹಾರ್ದವಿದ್ದರೆ ಮಾತ್ರ ಸೃಷ್ಟಿಯ ಸಮತೋಲನ ಸಾಧ್ಯ. ಈ ಸೌಹಾರ್ದದ ಕೀಲಿ ಕೈ ಪ್ರೇಮ.  ಸೂಫಿ ಇಬ್ನ್ ಅರಬಿ ಹೇಳುತ್ತಾನೆ, […]

ಆಯ್ಕೆಯಲ್ಲಿ ಎಚ್ಚರವಿರಬೇಕು : ಅರಳಿಮರ POSTER

‘ನಮ್ಮ ಇರುವಿಕೆಯಂತೆ ಜಗತ್ತು ಇರುವುದು’ ಎನ್ನಲಾಗುತ್ತದೆ. ‘ಜಗತ್ತಿನಂತೆ ನಾವು ಇರುತ್ತೇವೆ’ ಎನ್ನುವುದು ಕೂಡ ಅಷ್ಟೇ ಸತ್ಯ. ಆದರೆ ಈ ಎರಡೂ ಹೇಳಿಕೆಯಲ್ಲಿ, ಮುಖ್ಯವಾಗುವುದು ನಮ್ಮ ಆಯ್ಕೆ. ನಾವು ಸಕಾರಾತ್ಮಕ ಚಿಂತನೆ ಹೊಂದಿದ್ದರೆ, ನಾವು ಧೀರರೂ ಸಹಿಷ್ಣುಗಳೂ ಆಗಿದ್ದರೆ, ನಮ್ಮ ಸುತ್ತಲಿನ ಜಗತ್ತು ಕೂಡಾ ಹಾಗೆಯೇ ಇರುತ್ತದೆ. ನಮ್ಮ ಸುತ್ತಲಿನ ಜನರು ನಮ್ಮ ಪ್ರಭಾವಕ್ಕೆ ಬಂದು, ತಾವೂ ಬದಲಾಗಿ, ‘ನಮ್ಮಂತೆ ಇರುವಿಕೆಯಂತೆ’ ಜಗತ್ತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಅದಕ್ಕೆ ಬದಲಾಗಿ ನಾವು ದುರ್ಬಲರೂ  ಅರಿವುಗೇಡಿಗಳೂ ಆಗಿದ್ದರೆ, ಬಹಳ ಬೇಗ ಜಗತ್ತಿನ […]

ನಾನೇ ಭಾರತ, ಭಾರತವೇ ನಾನು… : ಅರಳಿಮರ POSTER

“ನಾನೇ ಭಾರತ, ಭಾರತವೇ ನಾನು. ನಾನು ನಡೆದಾಡಿದರೆ ಭಾರತ ನಡೆದಾಡಿದಂತೆ, ಮಾತಾಡಿದರೆ ಭಾರತವೇ ಮಾತಾಡಿದಂತೆ ನನಗೆ ಭಾಸವಾಗುತ್ತದೆ” ಎಂದು ಘೋಷಿಸಿದ್ದರು ಸ್ವಾಮಿ ರಾಮತೀರ್ಥ ಅಪ್ರತಿಮ ಅದ್ವೈತಿಯಾಗಿದ್ದ ರಾಮತೀರ್ಥರು  “ನಾನೇ ಭಾರತ, ಭಾರತವೇ ನಾನು. ನಾನು ನಡೆದಾಡಿದರೆ ಭಾರತ ನಡೆದಾಡಿದಂತೆ, ಮಾತಾಡಿದರೆ ಭಾರತವೇ ಮಾತಾಡಿದಂತೆ ನನಗೆ ಭಾಸವಾಗುತ್ತದೆ” ಎಂದು ಘೋಷಿಸಿದ್ದರು.  ಒಬ್ಬ ವ್ಯಕ್ತಿಯಲ್ಲಿ ಒಂದು ದೇಶವನ್ನು ಕಾಣಲು ಸಾಧ್ಯವಾಗಬೇಕು. ಹೀಗೆ ಪ್ರತಿಯೊಬ್ಬರಲ್ಲೂ ರಾಷ್ಟ್ರವನ್ನೆ ಕಂಡರೆ, ಪರಸ್ಪರ ಸೇವೆಗೈಯುತ್ತ ದೇಶವನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಬಹುದು ಎನ್ನುವುದು ಅವರ ಬೋಧನೆಯ ಸಾರವಾಗಿತ್ತು. 

ಬೋಧಿಧರ್ಮ ಹೇಳಿದ್ದು : ಅರಳಿಮರ POSTER

“ನಿಮ್ಮ ಸ್ವಭಾವವನ್ನು ನೀವು ಅರಿತುಕೊಳ್ಳುವವರೆಗೆ ಈ ಕಾರ್ಯ – ಕಾರಣಗಳೆಲ್ಲವೂ ಶುದ್ಧ ಮೂರ್ಖತನವೇ!” ಅನ್ನುತ್ತಾನೆ ಬೋಧಿಧರ್ಮ.  ಬಹುತೇಕವಾಗಿ ನಾವೆಲ್ಲರೂ ಒಂದು ತಪ್ಪು ಮಾಡುತ್ತೇವೆ. ನಮ್ಮ ಬದುಕಿನ ಸುಖದುಃಖಗಳಿಗೆ ಕಾರಣವನ್ನು ಮತ್ತೆಲ್ಲೋ ಹುಡುಕುತ್ತೇವೆ. ನಾವು ಎದುರಿಸುವ ಪರಿಣಾಮಗಳನ್ನು ಕಾರ್ಯ ಕಾರಣಗಳ ಮೇಲೆ ಹೊರಿಸಿ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತೇವೆ.  ಹೀಗೆ ಮಾಡುವ ಮೂಲಕ ನಮ್ಮಕಣ್ಣಿಗೆ ನಾವೇ ಪಟ್ಟಿ ಕಟ್ಟಿಕೊಳ್ಳುವ ಮೂರ್ಖತನ ಮಾಡುತ್ತೇವೆ. ಕಾರ್ಯ ಕಾರಣಗಳ ಮೇಲೆ ಎಲ್ಲವನ್ನೂ ಹೊರಿಸುವುದರಿಂದ ನಮ್ಮ ತಪ್ಪುಗಳು ಮಾತ್ರವಲ್ಲ, ಸರಿಯಾದ ಹೆಜ್ಜೆಗಳೂ ನಮಗೆ ಗೋಚರವಾಗುವುದಿಲ್ಲ. ಆದ್ದರಿಂದಲೇ ಬೋಧಿಧರ್ಮ […]

ಬ್ರೂಸ್ ಲೀ ಹೇಳಿದ್ದು : ಅರಳಿಮರ POSTER

“ನಾನು ಹತ್ತು ಸಾವಿರ ಹೊಡೆತಗಳನ್ನು ಒಂದೇ ಬಾರಿ ಅಭ್ಯಾಸ ಮಾಡಿದ ವ್ಯಕ್ತಿಗೆ ಭಯಪಡುವುದಿಲ್ಲ. ಆದರೆ ಒಂದೇ ಹೊಡೆತವನ್ನು ಹತ್ತು ಸಾವಿರ ಬಾರಿ ಅಭ್ಯಾಸ ಮಾಡಿದ ವ್ಯಕ್ತಗೆ ಭಯಪಡುತ್ತೇನೆ” ಅನ್ನುತ್ತಾನೆ ಬ್ರೂಸ್ ಲೀ ತತ್ತ್ವಜ್ಞಾನಿಯೂ ಸಮರಕಲಾ ನಿಪುಣನೂ ಆಗಿದ್ದ ಬ್ರೂಸ್ ಲೀಯ ಈ ಹೇಳಿಕೆ ಪರ್ಫೆಕ್ಷನ್ – ನಿಖರತೆಯ ಮಹತ್ವವನ್ನು ಸೂಚಿಸುತ್ತದೆ.  ಒಂದೇ ಸಲಕ್ಕೆ ಹತ್ತು ಹಲವು ಸಂಗತಿಗಳನ್ನು ಕಲಿಯಲು ತೊಡಗಿದರೆ ನಾವು ಯಾವುದನ್ನೂ ನಿಖರವಾಗಿ ಕಲಿಯುವುದು ಸಾಧ್ಯವಿಲ್ಲ. ಆದರೆ, ಒಂದು ಸಂಗತಿಯನ್ನು ಹತ್ತಾರು ಬಾರಿ ಅಭ್ಯಾಸ ಮಾಡುವ […]

ಬಯಲಿಗೆ ಬಾಗಿಲಿಟ್ಟ ಕ್ಷಣ ಗೋಡೆಗಳು ಎದ್ದುನಿಲ್ಲುತ್ತವೆ : ಅರಳಿಮರ POSTER

ಬಯಲಿಗೆ ಬಾಗಿಲಿಟ್ಟ ಕ್ಷಣ ಗೋಡೆಗಳು ಎದ್ದುನಿಲ್ತವೆ. ದಂಡೆತ್ತಿ ಹೋಗಬೇಕೆಂದೇನೂ ಇಲ್ಲ; ಬೇಲಿ ಕಟ್ಟಿಕೊಂಡ ಕ್ಷಣ ಶತ್ರುಗಳು ಹುಟ್ಟಿಕೊಳ್ತಾರೆ ~ ಅಲಾವಿಕಾ ಬದುಕು ಬಯಲಿನಂತಿರಬೇಕು. ವಿಸ್ತಾರವೂ ವಿಶಾಲವೂ ಆಗಿದ್ದು ಎಲ್ಲರನ್ನೂ ತೆರೆದ ತೋಳುಗಳಿಂದ ಸ್ವಾಗತಿಸುವಂತೆ ಇರಬೇಕು. ಆದರೆ ನಾವು ನಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತೇವೆ. ನಮ್ಮ ಸ್ವಾರ್ಥಕ್ಕೆ ತಕ್ಕಂತೆ ಕೆಲವರಿಗಷ್ಟೆ ಪ್ರವೇಶ ಕೊಟ್ಟು ಬಾಗಿಲಿಡುತ್ತೇವೆ. ಹಾಗೆ ಬಾಗಿಲಿಟ್ಟಕೂಡಲೇ ಉಳಿದವರ ಪಾಲಿಗೆ ತಡೆ ಉಂಟಾಗುತ್ತದೆ. ಅದನ್ನೇ “ಗೋಡೆಗಳು ಎದ್ದುನಿಲ್ಲುತ್ತವೆ” ಅನ್ನುವುದು.  ನಾವು ಬಾಗಿಲಿಟ್ಟು ಗೋಡೆಗಳಿಗಷ್ಟೆ ಕಾರಣವಾಗುವುದಿಲ್ಲ, ಬೇಲಿಯನ್ನೂ ಕಟ್ಟಿಕೊಳ್ಳುತ್ತೇವೆ. ನಮ್ಮ ಜಾತಿ, ನನ್ನ […]

ನೀವು ಬದುಕುವುದು ನಿಮಗಾಗಿ : ಅರಳಿಮರ POSTER

“ಜಗತ್ತು ವಿಪರೀತವಾಗಿ ಭಯಪಡುವುದು ಮತ್ತೊಬ್ಬರು ಏನೆಂದುಕೊಂಡಾರು ಅನ್ನುವ ಯೋಚನೆಯಿಂದ. ಒಂದು ಸಲ ನೀವು ಈ ಭಯಭೀತ ಮಂದೆಯಿಂದ ಹೊರಬನ್ನಿ, ಮತ್ತೆಂದೂ ನೀವು ಕುರಿಗಳ ಹಾಗೆ ತಲೆ ತಗ್ಗಿಸಿ ನಡೆಯಲಾರಿರಿ. ನೆನಪಿರಲಿ… ನೀವು ಬದುಕುವುದು ನಿಮಗಾಗಿ” ಅನ್ನುತ್ತಾರೆ ಓಶೋ ರಜನೀಶ್. ಓಶೋ ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ! ನಾವು ನಮ್ಮ ಜೀವಮಾನ ಸವೆಸುವುದೇ ಮತ್ತೊಬ್ಬರು ಏನೆಂದುಕೊಳ್ಳುತ್ತಾರೋ ಅನ್ನುವ ಆಲೋಚನೆಯಲ್ಲಿ.  ನಮ್ಮ ವಿದ್ಯಾಭ್ಯಾಸ, ಉದ್ಯೋಗ, ಉಡುಗೆತೊಡುಗೆ – ಇವೆಲ್ಲವೂ ಬಹುತೇಕ ಮತ್ತೊಬ್ಬರನ್ನು ಮೆಚ್ಚಿಸಲೆಂದೇ ಇರುತ್ತವೆ. ನಾನು ಕಡಿಮೆ ಅಂಕ ತೆಗೆದರು […]

ಹೇಗಾದರೂ ಸರಿ…. ಚಲನೆಯಲ್ಲಿರು : ಅರಳಿಮರ POSTER

“ಹಾರಲಾಗದೆ ಇದ್ದರೆ ಓಡು, ಓಡಲಾಗದೆ ಇದ್ದರೆ ನಡಿ; ನಡಿಯಲಾಗದೆ ಇದ್ದರೆ, ತೆವಳಿಕೊಂಡಾದರೂ ಸರಿ,.. ಒಟ್ಟಿನಲ್ಲಿ ಚಲನೆಯಲ್ಲಿರು” ಅನ್ನುತ್ತಾನೆ ಮಾರ್ಟಿನ್ ಲೂಥರ್ ಕಿಂಗ್ ನಾವು ಒಂದು ಬಾರಿ ಪ್ರಯಾಣಿಸಲು ಸಿದ್ಧವಾದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ನಾವಾದರೂ ಸೋಮಾರಿಗಳು. ಅಥವಾ ನಮಗೆ ಕಂಫರ್ಟ್ ಝೋನ್’ನಿಂದ ಹೊರಗೆ ಬರಲು ಇಷ್ಟವಿರುವುದಿಲ್ಲ. ನಾವು ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಆದ್ದರಿಂದಲೇ ಪ್ರಯಾಣವನ್ನು ತಪ್ಪಿಸಿಕೊಳ್ಳಲು, ಚಲನೆಯನ್ನು ತಪ್ಪಿಸಿಕೊಳ್ಳಲು ನೂರೆಂಟು ನೆವ ಹುಡುಕುತ್ತೇವೆ. ನಮಗೆ ಹಾರಲು ರೆಕ್ಕೆಯಿಲ್ಲವೆಂದು ಸಬೂಬು ಹೇಳುತ್ತೇವೆ. ರೆಕ್ಕೆಯಿಲ್ಲದೆ ಹೋದರೆ ನಡೆದುಕೊಂಡು […]