Whosoever Ji

ಚೇತನವು ಚೇತನವನ್ನು ಅರಿಯುವ ಪ್ರಕ್ರಿಯೆಯೇ ಧ್ಯಾನ

ಧ್ಯಾನದ ಅರ್ಥ, ತರಂಗರಹಿತವಾಗುವುದು. ಅಂದರೆ, ಮನಸ್ಸಿನಿಂದ ಹೊರತಾಗಿ ಉಳಿಯುವುದು. ಅಮನಸ್ಕರಾಗುವುದು. ಚೇತನದ ಮೂಲಸ್ವಭಾವವಾದ ನಿಸ್ತರಂಗ ಸ್ಥಿತಿಯನ್ನು ಹೊಂದುವುದು. ನಿಸ್ತರಂಗ ಚೇತನವೇ ನಮ್ಮ ಆತ್ಮ. ಆದ್ದರಿಂದ, ಧ್ಯಾನವು ಅಂತತಃ ಆತ್ಮದರ್ಶನದ ಮಾರ್ಗವಾಗಿದೆ. ಆತ್ಮಸ್ಥಿತಿಯಲ್ಲಿ ನೆಲೆಸುವ ಉಪಾಯವಾಗಿದೆ ~ Whosoever Ji ನೀವು ಧ್ಯಾನ ಮಾಡುತ್ತಿದ್ದೀರಿ ಎಂದಾದರೆ, ಇಲ್ಲಿ ಯಾವ ‘ನಾನು’ ಕೂಡ ಧ್ಯಾನ ಮಾಡುತ್ತಿಲ್ಲ. ‘ನಾನು’ ಧ್ಯಾನ ಮಾಡುವುದು ಸಾಧ್ಯವೇ ಇಲ್ಲ. ಏಕೆಂದರೆ ನೆರಳು ತನ್ನ ಮೂಲವನ್ನು ಅರಿಯವುದು ಸಾಧ್ಯವಿಲ್ಲ. ಅಲೆಯು ಸಾಗರವನ್ನು ತಿಳಿಯುವುದು ಸಾಧ್ಯವಿಲ್ಲ. ಧ್ಯಾನದಲ್ಲಿ ‘ನಾನು’ […]

More

ಚೇತನದಿಂದ ದೇಹದ ಮೆಕಾನಿಸಮ್ ಸಕ್ರಿಯವಾಗುತ್ತದೆ….

ವಿದ್ಯುತ್ ಇದೆಯೆಂದಾದಾಗ ಯಾವುದೇ ಉಪಕರಣವು ಚಾಲಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಉಪಕರಣ ಯಾವುದೇ ಆಗಿದ್ದರೂ ಅದು ಸಕ್ರಿಯಗೊಳ್ಳುತ್ತದೆ. ಹಾಗೆಯೇ ಚೇತನದ ಉಪಸ್ಥಿತಿಯಲ್ಲಿ ಯಾವುದೇ ಬಗೆಯ ದೇಹವಾದರೂ ಸಜೀವಗೊಂಡು ಚಲನಶೀಲವಾಗುತ್ತದೆ. ವಿದ್ಯುತ್ತಿನ ಅಸ್ತಿತ್ವ ಪ್ರಕಟಗೊಳ್ಳಲು ಏನಾದರೊಂದು ಉಪಕರಣ ಬೇಕಿರುವಂತೆಯೇ ಚೇತನ ಪ್ರಕಟಗೊಳ್ಳಲು ದೇಹದ ಇರುವಿಕೆ ಅಗತ್ಯವಾಗುತ್ತದೆ ~ Whosoever JI ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/08/07/whosoever-10/ ದೇಹವು ಜಡ ವಸ್ತು. ಅದನ್ನು ಸಕ್ರಿಯಗೊಳಿಸವುದು ಚೇತನ. ಚೇತನವು ದೇಹದಲ್ಲಿ ಪ್ರವಹಿಸತೊಡಗಿದಾಗ ಅದು ಸಚೇತನಗೊಳ್ಳುವುದು. ಕಣ್ಣುಗಳು ಮೃತ ದೇಹದಲ್ಲೂ ಇರುತ್ತವೆ. ಆದರೆ […]

More

ದೇಹ ಮತ್ತು ಚೇತನದ ಸಂಸರ್ಗದಿಂದ ಭಾವ ಹುಟ್ಟುವುದು…

ದೇಹಬೋಧೆಯಿಂದ ಜನಿಸಿದ ಈ ‘ನಾನು’ ಭಾವವನ್ನು ‘ದೇಹ ಬುದ್ಧಿ’ ಎಂದು ಕರೆಯಲಾಗುತ್ತದೆ. ಈ ದೇಹಬುದ್ಧಿಯ ಅಭಾವ ಉಂಟಾದರೆ ನಾವು ಇತರರೊಂದಿಗೆ ಸಂಬಂಧ ಹೊಂದಲು ಸಾಧ್ಯವಾಗುವುದಿಲ್ಲ. ಇನ್ನೊಬ್ಬರೊಂದಿಗೆ, ಅನ್ಯರೊಂದಿಗೆ ಸಂಬಂಧ ಸಾಧಿಸಲು ದೇಹಭಾವ, ನಾನು ಭಾವ ಇರುವುದು ಪರಮ ಅವಶ್ಯಕ  ~ WHOSOEVER JI ಚೇತನವು ಎಲ್ಲ ಶರೀರಗಳಲ್ಲಿಯೂ ಒಂದೇ ರೀತಿ ಇರುತ್ತದೆ. ಶರೀರದಲ್ಲಿ ಚೇತನವು ಇರದಿದ್ದರೆ ಅದು ಮೃತವಾಗುತ್ತದೆ ಮತ್ತು ರಿಸೈಕಲ್ ಆಗಲು, ಪುನರ್ಬಳಕೆಗೆ ಒದಗಲು ಸಿದ್ಧವಾಗುತ್ತದೆ. ಆದ್ದರಿಂದ ಎಲ್ಲಿಯೂ “ನಾನು” ಎನ್ನುವ ಸಂಗತಿಗೆ ಅವಕಾಶವೇ ಇರುವುದಿಲ್ಲ. ಯಾವ […]

More

ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ….

ಎಲ್ಲವೂ ಆಕಾರಗಳೂ ನಿರಾಕಾರವನ್ನು ಆಧರಿಸಿವೆ. ಅವೆಲ್ಲವೂ ಅದರಿಂದಲೇ ಹೊಮ್ಮುತ್ತವೆ, ಅದರಲ್ಲಿಯೇ ಮುಳುಗುತ್ತವೆ; ಅದರಿಂದಲೇ ಪ್ರಕಟಗೊಳ್ಳುತ್ತವೆ, ಅದರಲ್ಲಿಯೇ ಪುನಃ  ವಿಲೀನವಾಗಿಹೋಗುತ್ತವೆ. ಯಾರಿಗೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆಯೋ ಅವರನ್ನು ನಾವು ಪ್ರಜ್ಞಾವಂತರೆಂದು ಕರೆಯುತ್ತೇವೆ ~ Whosoever Ji ಚೇತನಕ್ಕೆ ತನ್ನದೇ ಆದ ಆಕಾರ ಇಲ್ಲದ ಕಾರಣ, ನಿರಾಕಾರವಾಗಿರುವ ಕಾರಣ ಅದು ಅರ್ಥೈಸಿಕೊಳ್ಳುತ್ತದೆಯೋ ಅದರೊಂದಿಗೆ ಸಮರೂಪ ಹೊಂದುತ್ತದೆ. ಆಕಾರಕ್ಕೆ ತನ್ನದೇ ಆದ ಅಸ್ತಿತ್ವ ಇರುವುದಿಲ್ಲ. ಅಸ್ತಿತ್ವ ಇರುವುದು ಚೇತನಕ್ಕೆ. ನಮಗೆ ಆಕಾರವು ಕಾಣಿಸುತ್ತದೆ. ಆದರೆ ಆಕಾರಕ್ಕೆ ಯಾವುದು ಆಧಾರವಾಗಿದೆಯೋ ಅದು ಕಾಣಿಸುವುದಿಲ್ಲ. ಎಲ್ಲ ಭ್ರಾಂತಿಯ […]

More

ದೇಹದಲ್ಲಿ ಪ್ರಕಟಗೊಂಡ ಚೇತನವು ತನ್ನನ್ನು ತಾನು ಮರೆತಾಗ…

ಯಾವ ದೇಹದಲ್ಲಿ ಪ್ರಕಟಗೊಳ್ಳುತ್ತದೆಯೋ ಆ ದೇಹದಲ್ಲಿಯೇ ತಾದಾತ್ಮ್ಯಗೊಳ್ಳುವುದು ಚೇತನದ ಸ್ವಭಾವ. ಅಂದರೆ, ಅದು ತಾನು ಯಾವ ದೇಹದ ಮೂಲಕ ವ್ಯಕ್ತಗೊಳ್ಳುತ್ತದೆಯೋ ಅದನ್ನೇ ತಾನೆಂದು ಭಾವಿಸತೊಡಗುತ್ತದೆ . ಯಾವಾಗ ಚೇತನವು ನಾನು ಈ ದೇಹವೇ ಆಗಿದ್ದೇನೆ ಎಂದು ಭಾವಿಸತೊಡಗುತ್ತದೆಯೋ ಆ ಕ್ಷಣದಿಂದ ಆ ದೇಹ ವಿಶೇಷದ ಲಕ್ಷಣಗಳು ಪ್ರಕಟಗೊಳ್ಳತೊಡಗುತ್ತದೆ  ~ Whosoever Ji.   ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/07/09/whosoever-8/ ಭೌತಿಕ ಶರೀರವು ಒಂದು ಜೈವಿಕ ಉಪಕರಣವಾಗಿದೆ. ಈ ಉಪಕರಣದಲ್ಲಿ ಚೇತನವು ಸಕ್ರಿಯಗೊಂಡಾಗ ಎಲ್ಲಕ್ಕಿಂತ ಮೊದಲು ನಾನು ಇದ್ದೇನೆ ಎನ್ನುವ ಅರಿವು […]

More

ಪ್ರತಿಯೊಂದು ಜೀವವೂ ಮತ್ತೊಂದು ಜೀವವನ್ನು ತಿನ್ನುತ್ತಲೇ ಇರುತ್ತದೆ… 

ಆಹಾರ ದೇಹವನ್ನು ಸುಸ್ಥಿರವಾಗಿ ಇರಿಸುವುದಷ್ಟೇ ಅಲ್ಲ, ಅದರ ಪೋಷಣೆಯನ್ನೂ ಮಾಡುತ್ತದೆ. ಚೇತನವು ಸ್ವಸ್ಥ ಶರೀರದಲ್ಲಷ್ಟೆ ಉಳಿದುಕೊಳ್ಳುತ್ತದೆ. ಆಹಾರದಿಂದ ನಿರ್ಮಾಣಗೊಂಡ ಶರೀರವು ಆಹಾರದಿಂದಲೇ ಪೋಷಣೆಯನ್ನೂ ಪಡೆಯುತ್ತದೆ. ಆಹಾರದ ಅಭಾವದಿಂದ ಶರೀರ ದುರ್ಬಲವಾಗುವುದಷ್ಟೇ ಅಲ್ಲ, ದೀರ್ಘ ಕಾಲದವರೆಗೆ ಬಾಳುವುದೂ ಇಲ್ಲ  ~ Whosoever Ji ಚೇತನ… ಯಾವುದಕ್ಕೆ ರೂಪವಿಲ್ಲವೋ, ಯಾವುದು ದೇಹ ವಿಶೇಷದೊಂದಿಗೆ ತಾದಾತ್ಮ್ಯಗೊಳ್ಳುತ್ತದೆಯೋ ಮತ್ತು ಆ ಮೂಲಕ ದೇಹ ರೂಪಧಾರಣೆ ಮಾಡುತ್ತದೆಯೋ – ಅದು.  ದೇಹವು ಹೆಣ್ಣಿನದಾದರೆ ಚೇತನವು ತನ್ನನ್ನು ತಾನು ಹೆಣ್ಣೆಂದು ಭಾವಿಸತೊಡಗುತ್ತದೆ. ಅದು ಗಂಡಿನದಾಗಿದ್ದರೆ ತಾನು […]

More

ಚೇತನವಲ್ಲದೆ ಸಾಕ್ಷಿ ಎಂಬುದಿಲ್ಲ….

ರೂಪವು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಆಕಾರವೂ ಕೂಡಾ. ಯಾವುದು ಸತತವಾಗಿ ಬದಲಾಗುತ್ತಲೇ ಇರುತ್ತದೆಯೋ ಅದನ್ನು ನಾವು ಸತ್ಯವೆಂದು ಕರೆಯುವುದಿಲ್ಲ. ಯಾವುದು ಬದಲಾಗುವುದೇ ಇಲ್ಲವೋ, ಯಾವಾಗಲೂ ಒಂದೇ ರೀತಿಯಾಗಿ ಇರುತ್ತದೆಯೋ ಅದನ್ನು ಸತ್ಯವೆಂದು ಕರೆಯುತ್ತೇವೆ ~ Whosoever Ji ಎಲ್ಲಿ ಮತ್ತೊಂದು ಇರುವುದಿಲ್ಲವೋ ಅದು ಅದ್ವೈತ. ಎರಡಿಲ್ಲದ ಸ್ಥಿತಿಯೇ ಅದ್ವೈತ. ಈ ಎಲ್ಲ ದ್ವೈತದ ಹಿಂದೆ ಮೂಲತಃ ಅದ್ವೈತವೇ ಇದೆ. ಅದು ಈ ಎಲ್ಲದರ ಮುಖ್ಯ ಸ್ರೋತವಾಗಿದೆ. ಹೀಗಿರುವಾಗ ಅದನ್ನು ಶಬ್ದಗಳಲ್ಲಿ ವಿವರಿಸೋದು ಹೇಗೆ? ಯಾವುದಕ್ಕೆ ಒಂದು ರೂಪವಿದೆಯೋ, […]

More

ತನ್ನನ್ನು ತಾನು ತಿಳಿಯದಿರುವುದು ಕೂಡ ಚೇತನದ ಸ್ವಭಾವಗಳಲ್ಲೊಂದು

ಚೇತನವು ಜೀವನದಾಯಿನಿಯಾಗಿದೆ. ಇದನ್ನು ಜೀವನ ಶಕ್ತಿ ಎಂದಾದರೂ ಕರೆಯಿರಿ, ಲೈಫ್‌ ಫೋರ್ಸ್‌ ಎಂದಾದರೂ ಅಥವಾ ಲೈಫ್ ಎನರ್ಜಿ ಎಂದಾದರೂ… ನಿಮಗೇನು ಇಷ್ಟ ಬರುತ್ತದೆಯೋ ಹಾಗೆ ಕರೆಯಿರಿ. ಎಲ್ಲಿ ಚೇತನ ಇರುವುದಿಲ್ಲವೋ ಅಲ್ಲಿ ಜೀವನವೂ ಇರುವುದಿಲ್ಲ  ~ Whosoever Ji ಯಾವುದೆಲ್ಲವೂ ಚೇತನದೊಳಗೆ ಪ್ರತಿಬಿಂಬಿತವಾಗುತ್ತದೆಯೋ ಅವೆಲ್ಲವೂ ಚೇತನದ ಸಂಯೋಗದಿಂದ ಸಜೀವಗೊಳ್ಳುತ್ತವೆ. ಅದು ವಿಚಾರವಾಗಿರಲಿ ಅಥವಾ ಭಾವ; ವಾಸನೆಯಿರಲಿ ಅಥವಾ ಕಾಮನೆ; ಇಚ್ಛೆಯಾಗಿರಲಿ ಅಥವಾ ಭಯ. ಅದೇನೇ ಆಗಿದ್ದರೂ ಚೇತನದಲ್ಲಿ ಪ್ರಕಟಗೊಂಡ ಕೂಡಲೇ ಅದರೊಂದಿಗೆ ಸಂಯೋಗಗೊಂಡು ಸಜೀವಗೊಳ್ಳುತ್ತದೆ. ಚೇತನವು ಅದನ್ನು […]

More

ಚೇತನದ ಜ್ಞಾನ ಮತ್ತು ಅಜ್ಞಾನಾವಸ್ಥೆ

ವಸ್ತುತಃ ಚೇತನವು ಕನ್ನಡಿಯಂತೆ. ಚೇತನದ ಕನ್ನಡಿಯಲ್ಲಿ ಯಾವುದು ಪ್ರತಿಬಿಂಬಿತಗೊಳ್ಳುತ್ತದೆಯೋ, ಚೇತನದ ಕನ್ನಡಿಯಲ್ಲಿ ಯಾರು ಹಣಕುತ್ತಾರೋ, ಚೇತನವು ಅದರೊಂದಿಗೆ ತಾದಾತ್ಮ್ಯಗೊಳ್ಳುತ್ತದೆ. ಆ ಪ್ರತಿಬಿಂಬವನ್ನು ಸ್ವತಃ ತಾನೇ ಎಂಬಂತೆ ಭ್ರಮಿಸತೊಡಗುತ್ತದೆ. ಚೇತನವು ಆ ಪ್ರತಿಬಿಂಬದೊಡನೆ ಕಲೆತುಹೋಗುತ್ತದೆ ~ Whosoever Ji ಮೂಲ ಹಿಂದಿ: ಶಿವೋಹsಮ್ | ಕರ್ತೃ: ಹೂಸೋಎವರ್ ಜಿ | ಕನ್ನಡಕ್ಕೆ : ಚೇತನಾ ಚೇತನದ ಗೈರಿನಲ್ಲಿ ದೇಹಕ್ಕೆ ಯಾವ ಮೌಲ್ಯವೂ ಇರುವುದಿಲ್ಲ. ಈ ದೇಹದ ಸಂಪೂರ್ಣ ವ್ಯವಸ್ಥೆಯ ಚಾಲಕ ಶಕ್ತಿ ಏನಿದೆ, ಅದು ಚೇತನವೇ ಆಗಿದೆ. ದೇಹದಲ್ಲಿ […]

More