ಅರಳಿಮರ Posters : ವಿವೇಕಾನಂದರ 7 ಹೇಳಿಕೆಗಳು

ವಿವೇಕಾನಂದರ ಸಾರ್ವಕಾಲಿಕ ಪ್ರೇರಣಾದಾಯಿ ಹೇಳಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿ…. 1. ನಿರ್ಭೀತರಾಗಿರಿ! 2. ಪ್ರೇಮವೆಂಬ ಹೆಬ್ಬಾಗಿಲು 3. ಆತ್ಮ ಚೈತನ್ಯ 4. ಸ್ವಾತಂತ್ರ್ಯ ಮತ್ತು ವಿದ್ಯಾಭ್ಯಾಸ 5. ಶಕ್ತಿಯ ಅಭಿವ್ಯಕ್ತಿ 6. ಶ್ರದ್ಧೆಯ ಶಕ್ತಿ 7. ದೇವರು ಮತ್ತು ಆತ್ಮ    

ಸಂಕಟದ ನಂತರ  ಒದಗಿ ಬರುವ ಅಮೃತದ ಹನಿಗಳು… : ಒಂದು ರೂಮಿ ಪದ್ಯ

ಮೂಲ : ಜಲಾಲುದ್ದಿನ್ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಜದ ಮನುಷ್ಯರು ಬಲ್ಲ ರಸವಿದ್ಯೆಯ ಬಗ್ಗೆ ಗಮನ ಹರಿಸು. ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ ಒಂದು ಹೊಸ ಬಾಗಿಲು ತಾನೇ ತಾನಾಗಿ ತೆರೆದುಕೊಳ್ಳುತ್ತದೆ. ಕಠಿಣ ಪರಿಸ್ಥಿತಿಗಳನ್ನು, ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ ತೋಳು ಚಾಚಿ ಸ್ವಾಗತಿಸು. ಅವನು ತನ್ನ ಜೊತೆಗೆ ತಂದ ಯಾತನೆಗಳ  ಪಕ್ಕೆ ಹಿಂಡಿ ತಮಾಷೆ ಮಾಡು. ದುಃಖಗಳು,  ಚಿಂದಿ ಬಟ್ಟೆಯ ಕೌದಿಯ ಹಾಗೆ ಬೇಕಾದಾಗ ಹೊದ್ದು ಕಳಚಿಟ್ಟು ಬಿಡಬೇಕು. ಈ ಕಳಚುವಿಕೆ […]

ನಷ್ಟಕ್ಕಿಂತ ಅಹಮಿಕೆಯ ಪೆಟ್ಟೇ ಹೆಚ್ಚು ನೋವು ಕೊಡುವುದು! : ಅಧ್ಯಾತ್ಮ ಡೈರಿ

ಪ್ರಾಮಾಣಿಕವಾಗಿ ಹೇಳಿ. ನಿಮ್ಮ ಯಾತನೆಗೆ ಕಾರಣ, ಸಾಂಗತ್ಯ ತಪ್ಪಿಹೋದ ದುಃಖವೋ; ಬಿಡಲ್ಪಟ್ಟ ಅವಮಾನದ ನೋವೋ? ನಿಮ್ಮನ್ನು ಕಾಡುತ್ತಿರುವುದು ಯಾವುದು? ಭಗ್ನಗೊಂಡ ಹೃದಯವೋ, ಘಾಸಿಗೊಂಡ ಅಹಂಕಾರವೋ!? ~ ಅಲಾವಿಕಾ ಬಹುತೇಕವಾಗಿ ನಾವು ಇದನ್ನು ಅನುಭವಿಸಿರುತ್ತೇವೆ. ಆಟೋದವ ಐದೋ ಹತ್ತೋ ರುಪಾಯಿ ಜಾಸ್ತಿ ಕೇಳಿದರೆ, ಐದು ರುಪಾಯಿಗಿಂತ ಹೆಚ್ಚಿನ ಚಿಲ್ಲರೆ ಇಲ್ಲ ಅಂದುಬಿಟ್ಟರೆ ತೀರಾ ಸಿಡಿಮಿಡಿಗೊಳ್ಳುತ್ತೇವೆ. “ಬೇಕಂತ ಮಾಡ್ತಾರೆ” ಅಂತ ಗೊಣಗೋದರಿಂದ ಹಿಡಿದು, “ಎಷ್ಟು ಆಟ ಆಡಿಸ್ತಾರೆ! “ ಅಂತ ಬೈದುಕೊಳ್ಳೋವರೆಗೆ ನಮ್ಮ ಅಸಹನೆ ಕುದಿಯುತ್ತದೆ. ಅದೇ ನಾವು ಯಾವಾಗಲಾದರೂ […]

ಭೀಷ್ಮ ಪಿತಾಮಹ ನೀಡಿದ ಪ್ರಮುಖ ಒಂಭತ್ತು ನೀತಿಬೋಧೆಗಳು …

ಮಹಾಭಾರತದಲ್ಲಿ ಹೇಳಲಾಗಿರುವಂತೆ, ಭಿಷ್ಮಪಿತಾಮಹನು ಪಾಂಡವರಿಗೆ ನೀಡಿದ ಬೋಧನೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ನೀಡಲಾಗಿದೆ.  ** ನಾವೆಲ್ಲರೂ ಎಲ್ಲಿಂದ ಬಂದೆವೋ ಅಲ್ಲಿಗೆ ಹಿಂತಿರುಗಿ ಹೋಗಬೇಕು. ಪ್ರತಿಯೊಬ್ಬರೂ ಅವರವರ ಕರ್ಮದ ಫಲವನ್ನು ಅನುಭವಿಸಬೇಕು. ಮಹಾಸಾಗರದಲ್ಲಿ ಎರಡು ಕಡ್ಡಿಗಳು ಬಂದು ಸೇರುವ ಹಾಗೆ; ನಾವು ಎಲ್ಲಿಂದಲೋ ಬಂದು ಈ ಲೋಕದಲ್ಲಿ ಸೇರುತ್ತೇವೆ, ಮತ್ತೆ ಬೇರ್ಪಟ್ಟು ಎಲ್ಲಿಗೋ ಹೋಗಿಬಿಡುತ್ತೇವೆ. ಹೀಗೆ ನಮ್ಮ ಬಂಧುಬಾಂಧವರ ವಿಯೋಗವು ಖಂಡಿತ ವಾಗಿರುವುದರಿಂದ ಸಂಬಂಧಗಳಿಗೆ ಅಂಟಿಕೊಳ್ಳಬಾರದು. ** ಸುಖವಾದ ಮೇಲೆ ದುಃಖವೂ, ದುಃಖವಾದ ಮೇಲೆ ಸುಖವೂ ಚಕ್ರದಂತೆ ಸುತ್ತುತ್ತಿರುತ್ತವೆ. […]

ಅರಳಿಮರ POSTERS : ಡೌನ್’ಲೋಡ್ ಮಾಡಿಕೊಳ್ಳಿ….

ಬಹುತೇಕ ಎರಡು ವರ್ಷಗಳಿಂದ ‘ಅರಳಿಮರ’ದಲ್ಲಿ ಪ್ರಕಟವಾದ ಪೋಸ್ಟರ್’ಗಳ ಗುಚ್ಛವನ್ನು ಹಲವು ಕಂತುಗಳಲ್ಲಿ ನಿಡಲಿದ್ದೇವೆ. ಸಂಗ್ರಹಕ್ಕೆ ಬೇಕಿದ್ದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ…. 1. ಕನ್’ಫ್ಯೂಶಿಯಸ್ ಹೇಳಿದ್ದು…..   2. ಬರ್ನಾಡ್ ಷಾ ಹೇಳಿದ್ದು…. 3. ವಿಲ್ ರೋಜರ್ಸ್ ಹೇಳಿದ್ದು… 4. ಜಿಡ್ಡು ಕೃಷ್ಣಮೂರ್ತಿ ಹೇಳಿದ್ದು…. 5. ಋಗ್ವೇದದಿಂದ…  

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #9

ಮೂಲ: ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭಗವಂತನಲ್ಲಿ ಕಳಂಕವಿಲ್ಲ, ದೋಷವಿಲ್ಲ, ಆತ ಪರಿಪೂರ್ಣ ಹೀಗಾಗಿ ಇಂಥವನನ್ನು ಪ್ರೀತಿಸುವುದಕ್ಕೆ ಯಾವ ಸವಾಲುಗಳೂ ಇಲ್ಲ. ಸಮಸ್ಯೆ ಎದುರಾಗೋದೇ ನಮ್ಮ ಜೊತೆ ಇರುವ ಸಂಗಾತಿಗಳನ್ನು ಅವರ ಎಲ್ಲ ದೌರ್ಬಲ್ಯ, ಅಪೂರ್ಣತೆಗಳೊಂದಿಗೆ ಪ್ರೀತಿಸಲು ಮುಂದಾದಾಗ. ನೆನಪಿರಲಿ, ನಮಗೆ ಯಾವುದನ್ನು ಪ್ರೀತಿಸುವ ಸಾಮರ್ಥ್ಯವಿರುತ್ತದೆಯೋ ನಾವು ಅದನ್ನು ಮಾತ್ರ ಪೂರ್ತಿಯಾಗಿ ತಿಳಿದುಕೊಳ್ಳಬಲ್ಲೆವು. ಪ್ರೇಮದ ಹೊರತಾಗಿ ಬೇರೆ ಯಾವ ತಿಳುವಳಿಕೆಯೂ ಇಲ್ಲ. ಭಗವಂತನ ಸೃಷ್ಟಿಯನ್ನು ಪ್ರೀತಿಸುವುದ ಕಲಿಸುವತನಕ ನಾವು ಭಗವಂತನನ್ನು ಪ್ರೇಮಿಸುವುದು […]

ನಾರದರು ಹೇಳಿದ ಆದರ್ಶ ವ್ಯಕ್ತಿಯ 16 ಗುಣಗಳು : ನಿಮ್ಮಲ್ಲಿ ಎಷ್ಟಿವೆ?

ನಾರದರು ಆದರ್ಶ ವ್ಯಕ್ತಿಯೆಂದು ಕರೆಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ 16 ಗುಣಗಳನ್ನು ಹೀಗೆ ತಿಳಿಸಿದ್ದಾರೆ:  1. ಗುಣವಾನ್ – ನೀತಿವಂತರು 2. ವೀರ್ಯವಾನ್- ಶೂರರು 3. ಧರ್ಮಜ್ಞ – ಧರ್ಮವನ್ನು ತಿಳಿದವರು 4. ಕೃತಜ್ಞ – ಮಾಡಿದ ಸಹಾಯ/ಉಪಕಾರವನ್ನು ನೆನಪಿನಲ್ಲಿಟ್ಟುಕೊಳ್ಳುವವರು 5. ಸತ್ಯವಾಕ್ಯ – ಸತ್ಯವನ್ನು ನುಡಿಯುವವರು 6. ಧೃಡವೃತ – ದೃಢ ನಿಶ್ಚಯ ಹೊಂದಿದವರು 7. ಚರಿತ್ರವಾನ್ – ಒಳ್ಳೆಯ ನಡತೆಯುಳ್ಳವರು 8. ಸರ್ವಭೂತಹಿತ – ಎಲ್ಲ ಜೀವಿಗಳ ಹಿತವನ್ನು ಬಯಸುವವರು 9. ವಿದ್ವಾನ್ – ಎಲ್ಲ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #8

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಇಡೀ ಬ್ರಹ್ಮಾಂಡ ಅಡಗಿರುವುದು ಒಬ್ಬನೇ ಒಬ್ಬ ಮನುಷ್ಯನಲ್ಲಿ, ಅದು ನೀನು. ನೀನು ಸುತ್ತ ಕಾಣುತ್ತಿರುವ ಎಲ್ಲವೂ, ನಿನಗೆ ಇಷ್ಟ ಆಗದ ಸಂಗತಿಗಳನ್ನೂ ಒಳಗೊಂಡು, ನೀನು ತಿರಸ್ಕಾರದಿಂದ, ಅಸಹ್ಯವಾಗಿ ಕಾಣುವ ಜನರನ್ನೂ ಸೇರಿಸಿ, ಎಲ್ಲ ಒಂದಿಲ್ಲ ಒಂದು ಮಟ್ಟದಲ್ಲಿ ನಿನ್ನೊಳಗೇ ಮನೆ ಮಾಡಿದ್ದಾರೆ. ಸೈತಾನನಿಗಾಗಿ ಹೊರಗೆಲ್ಲೂ ಹುಡುಕಬೇಡ. ನೀನು ನಿನ್ನನ್ನು ಪೂರ್ಣವಾಗಿ, ಪ್ರಾಮಾಣಿಕವಾಗಿ, ಧೈರ್ಯದಿಂದ ಎದುರಗೊಂಡಾಗ ಸೈತಾನ, ಎಲ್ಲಿಂದಲೋ ಅಚಾನಕ್ ಆಗಿ ಬಂದು ನಿನ್ನ […]

ಮೃತ್ತಿಕಾ ಇತ್ಯೇವ ಸತ್ಯಮ್ … : ದಿನಕ್ಕೊಂದು ಸುಭಾಷಿತ #16

ಮೂಲದಲ್ಲಿ ಏನಿದೆಯೋ ಅದು ಮಾತ್ರವೇ ಸತ್ಯ. ರೂಪಾಕಾರಗಳು ಸತ್ಯವಲ್ಲ. ರೂಪಾಕಾರಗಳು ಭಗ್ನಗೊಳ್ಳಬಹುದು. ಕೃತಕವಾಗಿರಬಹುದು. ಸಾಂದರ್ಭಿಕವೂ ಆಗಿರಬಹುದು. ಆದ್ದರಿಂದ ಅವುಗಳ ಆಧಾರದ ಮೇಲೆ ಯಾವುದರ / ಯಾರ ಗುಣವನ್ನೂ ಅಳೆಯಲಾಗದು. ಆಯಾ ವ್ಯಕ್ತಿ / ವಸ್ತುಗಳ ಮೂಲ ಅರಿತರೆ, ಅವರನ್ನೂ ಯಥಾವತ್ತಾಗಿ ಅರಿಯುವುದು ಸುಲಭವಾಗುತ್ತದೆ. ಮಣ್ಣಿನಿಂದ ಮಾಡಿದ ಗೊಂಬೆ / ಕುಂಭಗಳ ಆಕಾರ ಏನೇ ಇದ್ದರೂ ಯಾವ ಮಣ್ಣಿನಿಂದ ಮಾಡಿರುತ್ತಾರೆಯೋ ಅದರ ಮೇಲೆ ಅವುಗಳ ಗುಣಮಟ್ಟ ನಿರ್ಧಾರವಾಗುತ್ತದೆ. ಹಾಗೆಯೇ, ಹೊರಗು ಏನೇ ಇದ್ದರೂ ಅಂತರಂಗದಲ್ಲಿ ಏನಿದೆಯೋ ಅದೇ ಮುಖ್ಯವಾಗುತ್ತದೆ. […]

ಹೊರಗಿನ ಯಾವುದಕ್ಕೂ  ನನ್ನೊಳಗೆ ಪ್ರವೇಶವಿಲ್ಲ… : ಒಂದು ‘ಶಮ್ಸ್’ ಪದ್ಯ

ಮೂಲ : ಶಮ್ಸ್ ತಬ್ರೀಝಿ | ಕನ್ನಡಕ್ಕೆ : ಚಿದಂಬರ ನರೇಂದ್ರ ನಾನು ನಿನ್ನೊಡನೆ ಕಠಿಣವಾಗಿ ನಡೆದುಕೊಳ್ಳುತ್ತಿರುವುದರ ಉದ್ದೇಶ ಇಷ್ಟೇ, ನೀನು ನಿನ್ನೊಳಗೆ ಅದುಮಿಟ್ಚುಕೊಂಡಿರುವುದೆಲ್ಲ ಹೊರಗೆ ಹರಿದುಬರಲೆಂದು,  ಅಲ್ಲಿಯೇ ಕೊಳೆತು ನಂಜಾಗದಿರಲೆಂದು. ನೆನಪಿರಲಿ, ನಿನ್ನನ್ನು ಹಿಂಸೆಗೆ ಗುರಿಮಾಡುವಾಗ ತಾನು ಯಾತನೆ ಪಡದವ ಮಹಾ ಕ್ರೂರಿ. ಸಹನೆಯಲ್ಲಿ ಮತ್ತು ಕ್ಷಮಿಸುವಲ್ಲಿ ಒಂದು ಅದ್ಭುತ ಸೌಂದರ್ಯವಿದೆ ಘನತೆ, ಒಂದು ರೀತಿಯ ಪರಿಪೂರ್ಣತೆ. ನನಗಂತೂ ಯಾತನೆಯ ಜೊತೆ ಒಂದಿನಿತೂ ಸಂಬಂಧವಿಲ್ಲ. ಯಾತನೆಗೆ ಕಾರಣವೇ ನಮ್ಮ ಅಸ್ತಿತ್ವ ಮತ್ತು, ಅಸ್ತಿತ್ವದ ವಿಳಾಸ ನನಗೆ […]